ರಾಮನಗರ: ಎರಡು ಕಾರುಗಳು ಹಾಗೂ ಟಿಪ್ಪರ್ ಮಧ್ಯೆ ಡಿಕ್ಕಿ ಸಂಭವಿಸಿ ಆರು ಮಂದಿ ಸಾವನ್ನಪ್ಪಿ, 8 ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಎರಡು ಕಾರುಗಳು ಮತ್ತು ಒಂದು ಬೈಕ್ ಮೇಲೆ ಟಿಪ್ಪರ್ ಉರುಳಿದೆ ತಿಳಿದುಬಂದಿದೆ. ಮೃತರನ್ನ ನಿಖಿತಾರಾಣಿ, ವೀಣಮ್ಮ, ಇಂದ್ರಕುಮಾರ್, ಕೀರ್ತಿಕುಮಾರ್, ಟಯೊಟಾ ಕಂಪನಿ ನೌಕರ ಶಿವಪ್ರಕಾಶ್ ಹಾಗೂ ಬೈಕ್ಲ್ಲಿದ್ದ ಜಿತಿನ್ ಬಿ ಜಾರ್ಜ್ ಎಂದು ಗುರುತಿಸಲಾಗಿದೆ.
ಎರಡು ಕಾರುಗಳಲ್ಲಿ ಹತ್ತು ಮಂದಿ ಪ್ರಯಾಣ ಮಾಡುತ್ತಿದ್ದರು. ಅಪಘಾತದಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟಿಪ್ಪರ್ ಚಾಲಕನ ಅಜಾಗರೂಕತೆಯಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗ್ತಿದೆ. ಜೆಲ್ಲಿ ಸಾಗಿಸುತ್ತಿದ್ದ ಟಿಪ್ಪರ್ ಅಡಿ ಸಿಲುಕಿ ಆರು ಮಂದಿ ಮೃತಪಟ್ಟಿದ್ದಾರೆ.
ಬೈಕ್ ಸವಾರ ಸೇರಿದಂತೆ ಎರಡು ಕಾರಿನಲ್ಲಿದ್ದ ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಸ್ಥಳಕ್ಕೆ ಕುಂಬಳಗೋಡು ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.
(ಇದನ್ನೂ ಓದಿ: ಚಿಕ್ಕೋಡಿ: ಪ್ರವಚನಕ್ಕೆ ಬಂದಿದ್ದ ವೇಳೆ ಆಯತಪ್ಪಿ ಬಿದ್ದ ಸಿದ್ದೇಶ್ವರ ಸ್ವಾಮೀಜಿಗೆ ಗಂಭೀರ ಗಾಯ)