ETV Bharat / state

ಈ ಬಜೆಟ್​ಗೆ ಮಹತ್ವ ಇಲ್ಲ, ಮುಂದಿನ ಸರ್ಕಾರ ನೀಡುವ ಬಜೆಟ್ ಕಾರ್ಯರೂಪಕ್ಕೆ: ಹೆಚ್​ಡಿಕೆ - ಈಟಿವಿ ಭಾರತ ಕನ್ನಡ

ಮುಂದಿನ ಸರ್ಕಾರದ ಬಜೆಟ್ ಕಾರ್ಯರೂಪಕ್ಕೆ ಬರಲಿದೆ ಎಂದು ಮಾಜಿ ಸಿಎಂ ಹೆಚ್​ಡಿಕೆ ಹೇಳಿದರು.

ಹೆಚ್​ಡಿ  ಕುಮಾರಸ್ವಾಮಿ
ಹೆಚ್​ಡಿ ಕುಮಾರಸ್ವಾಮಿ
author img

By

Published : Feb 17, 2023, 7:12 PM IST

ರಾಮನಗರ: ಇದು ಚುನಾವಣಾ ಪೂರ್ವದಲ್ಲಿ ಮಂಡನೆ ಮಾಡಿದ ಬಜೆಟ್. ಇದಕ್ಕೆ ಯಾವುದೇ ಮಹತ್ವ ಇಲ್ಲ. ಮುಂದಿನ ಮೇ ತಿಂಗಳಿನಲ್ಲಿ ಸಾರ್ವತ್ರಿಕ ಚುನಾವಣೆ ಇದೆ. ಏಪ್ರಿಲ್, ಮೇ ತಿಂಗಳಿನಲ್ಲಿ ಸಂಬಳ ಕೊಡಲು ಈ ಬಜೆಟ್ ಮಂಡನೆಯಾಗಿದೆ. ಹೀಗಾಗಿ ಇಂದಿನ ಬಜೆಟ್‌ಗೆ ನಾನು ಹೆಚ್ಚಿನ ಮಹತ್ವ ನೀಡಲ್ಲ ಎಂದು ಹೆಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಚನ್ನಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ್ದ ಸಂದರ್ಭದಲ್ಲಿ ಅವರು ಮಾತನಾಡಿದರು. ಮುಂಬರುವ ಸರ್ಕಾರ ನೀಡುವ ಬಜೆಟ್ ಕಾರ್ಯರೂಪಕ್ಕೆ ಬರಲಿದೆ. ಜನ ಯಾರಿಗೆ ಮತ ನೀಡುತ್ತಾರೆ ಅವರ ಬಜೆಟ್ ಕಾರ್ಯರೂಪಕ್ಕೆ ಬರುತ್ತದೆ. ಈಗಾಗಲೇ 70 ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ. ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ 30ರಿಂದ 40 ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಚುನಾವಣೆ ಇರೋದ್ರಿಂದ ಜನರನ್ನು ಮೆಚ್ಚಿಸಲು ಜನಪ್ರಿಯ ಘೋಷಣೆ ಮಾಡ್ತಾರೆ ಅನ್ನೊ ನಿರೀಕ್ಷೆ ಇತ್ತು. ಬಿಜೆಪಿಯಲ್ಲೇ ಬಜೆಟ್ ಬಗ್ಗೆ ನೀರಸ ಪ್ರತಿಕ್ರಿಯೆ ಇದೆ ಎಂದರು.

ರಾಮನಗರದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಘೋಷಣೆಯಾಗಿದೆ. ಅವರು ಘೋಷಣೆ ಮಾಡಿದ್ರೂ ನಾನೇ ಮಾಡಬೇಕು. ಅವರ ಕೈಯಲ್ಲಿ ನಿರ್ಮಾಣ ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.

ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವ ವಿಚಾರವಾಗಿ ಮಾತನಾಡಿ, ಒಂದು ವರ್ಷದಲ್ಲಿ ಅವರು ಹಣ ಕಟ್ಟಿಲ್ಲ ಅಂದರೆ ಅದಕ್ಕೆ ಬಡ್ಡಿ ಕಟ್ಟಬೇಕಲ್ಲ. ರೈತರು ಸಾಲಗಾರರಾಗದ ರೀತಿಯಲ್ಲಿ ಅವರು ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಬೇಕು‌. ಬರೀ ಸಾಲ ಕೊಡ್ತೀವಿ ಅಂದ್ರೆ ಆಗುತ್ತಾ? ಸಾಲ ಕೊಡೋದು ಸರ್ಕಾರ ಅಲ್ಲ, ಡಿಸಿಸಿ ಬ್ಯಾಂಕ್. ರಾಷ್ಟ್ರೀಕೃತ ಬ್ಯಾಂಕ್​ಗಳು ಸಾಲ ಕೊಡುವುದಿಲ್ಲ. ಕುಮಾರಸ್ವಾಮಿ‌ ಇಲ್ಲ ಅಂದಿದ್ರೆ ಹಲವು ಕಡೆ ಡಿಸಿಸಿ ಬ್ಯಾಂಕ್​ಗಳು ಮುಚ್ಚಿಹೋಗುತ್ತಿದ್ದವು. ನಾನು 25 ಸಾವಿರ ಕೋಟಿ ರೂ ಸಾಲ ಮನ್ನಾ ಮಾಡಿದ್ದೇನೆ. ಡಿಸಿಸಿ ಬ್ಯಾಂಕ್​ಗೆ ಶಕ್ತಿ‌ ನೀಡಿದ್ದೇನೆ. ಅದರಿಂದಲೇ ಈಗ ಬಿಜೆಪಿಯವರು ಸಾಲ ನೀಡ್ತೀನಿ ಅಂತ ಹೇಳ್ತಿರೋದು ಎಂದು ಇದೇ ವೇಳೆ ತಿಳಿಸಿದರು.

ಜೆಡಿಎಸ್​ಗೆ ಮತ ಹಾಕಿದ್ರೆ ವ್ಯರ್ಥ, ಕಾಂಗ್ರೆಸ್ ಮತ ಹಾಕಿ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್​ಗೆ ಮತ ಹಾಕಿದ್ರೆ ಲಾಭ ಎಲ್ಲಾಗುತ್ತೆ? ಯಾರಿಗೆ ಲಾಭ ಆಗುತ್ತೆ? ಈಗಾಗಲೇ 15 ಜನ ಸಿಎಂ ಆಗೋದಕ್ಕೆ ತಯಾರಾಗಿದ್ದೀವಿ ಅಂತಿದ್ದಾರೆ. ಅಷ್ಟು ಜನ ಸಿಎಂ ಆಗೋದಕ್ಕೆ ತಯಾರಾಗಿದ್ದಾಗ ಕಾಂಗ್ರೆಸ್ ಮತ ಕೊಡೋದ್ರಿಂದ ಏನ್ ಪ್ರಯೋಜನ?. ಕಾಂಗ್ರೆಸ್‌ ಪಕ್ಷದಲ್ಲಿ ಗುಂಪುಗಾರಿಕೆ ಇದೆ. ಬೇರೆಯವರಿಗೆ ಮತ ನೀಡಬೇಡಿ‌ ಎಂದು ಹೇಳುವುದು ತಪ್ಪು ಎಂದು ನುಡಿದರು.

ಬಮೂಲ್ ಉತ್ಸವಕ್ಕೆ ಅಡ್ಡಿ ವಿಚಾರ: ಸಿಪಿವೈ ಬೆಂಬಲಿಗರು ಕಾರ್ಯಕ್ರಮ ನಡೆಯದಂತೆ ತಡೆಯಲು ಹೊರಟಿದ್ದಾರೆ. ಅವರು ಈ ಹಿಂದೆ ಕಾರ್ಯಕ್ರಮ ಮಾಡಿದ್ರಲ್ಲಾ?. ಆವಾಗ ರಾಜಕೀಯ ಪ್ರೇರಿತ ಕಾರ್ಯಕ್ರಮ ಅಂತಾ ಅನ್ನಿಸಲಿಲ್ವಾ ಎಂದು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ಕೆಟ್ಟ ಆರ್ಥಿಕ ನೀತಿಯ ನಿರಾಶಾದಾಯಕ ಚುನಾವಣಾ ಬಜೆಟ್: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.