ETV Bharat / state

ರಾಜಕೀಯ ಪ್ರತಿಭಟನೆಗಾಗಿ ಕೆಲವರು ರೈತರನ್ನು ದುರ್ಬಳಕೆ ಮಾಡುತ್ತಿದ್ದಾರೆ; ಎಚ್​ಡಿಕೆ

author img

By

Published : Jan 25, 2021, 6:52 PM IST

ತಮ್ಮ ಭೂಮಿ ಉಳುಮೆ ಮಾಡಲು ರೈತರ ಬಳಿ ಡೀಸೆಲ್‌ ಹಣ ಇಲ್ಲ, ಅಂತದ್ರಲ್ಲಿ ರಾಜ್ಯದ ನಾನಾ ಮೂಲೆಗಳಿಂದ ರೈತರು ಬರುತ್ತಾರಾ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಮ್ಮ ರೈತರ ಆರ್ಥಿಕತೆಯನ್ನು ಹೆಚ್ಚಿಸಿದ್ದಾರಾ ಎಂದು ರಾಮನಗರದಲ್ಲಿ ಮಾಜಿ ಸಿಎಂ ಎಚ್​​ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

hd kumarswamy reaction about farmers tractor rally
ಹೆಚ್​ಡಿಕೆ ಪ್ರತಿಕ್ರಿಯೆ

ರಾಮನಗರ: ರಾಮನಗರದ ರೈತರು ಟ್ರ್ಯಾಕ್ಟರ್ ತನ್ನಿ ಡೀಸೆಲ್‌ ಹಾಕಿಸುತ್ತೇನೆ ಎಂದು ಹೇಳಿದ್ದ ಡಿಕೆ ಶಿವಕುಮಾರ್ ಆಪ್ತ ಇಕ್ಬಾಲ್ ಹುಸೇನ್​ಗೆ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಟಾಂಗ್ ನೀಡಿದರು.

ಹೆಚ್​ಡಿಕೆ ಪ್ರತಿಕ್ರಿಯೆ
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಮನಗರದಲ್ಲೊಬ್ಬ ಕಾಂಗ್ರೆಸ್ ಪಕ್ಷದ ದಾನ ಶೂರ ಕರ್ಣ ಇದ್ದಾನೆ. ಆತ ನಾಳಿನ ರೈತರ ಪ್ರತಿಭಟನೆಗೆ ಬರುವ ರಾಮನಗರದ ಟ್ರ್ಯಾಕ್ಟರ್​ಗಳಿಗೆ ಡೀಸೆಲ್​ ಹಾಕಿಸುತ್ತೇನೆ ಎಂದಿದ್ದಾನೆ. ತಮ್ಮ ಭೂಮಿ ಉಳುಮೆ ಮಾಡಲು ರೈತರ ಬಳಿ ಡೀಸೆಲ್​ಗೆ‌ ಹಣ ಇಲ್ಲ, ಅಂಥದರಲ್ಲಿ ರಾಜ್ಯದ ನಾನಾ ಮೂಲೆಗಳಿಂದ ರೈತರು ಬರುತ್ತಾರಾ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಮ್ಮ ರೈತರ ಆರ್ಥಿಕತೆಯನ್ನ ಹೆಚ್ಚಿಸಿದ್ದಾರಾ ಎಂದು ಲೇವಡಿ ಮಾಡಿದರು.
ರಾಜಕೀಯ ಬಳಕೆಗಾಗಿ ಇಂಥ ಪ್ರತಿಭಟನೆಗಳನ್ನು ನಡೆಸುವ ಮೂಲಕ ಕೆಲವರು ರೈತರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ರೈತರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ವಿರೋಧ ಪಕ್ಷಗಳ ವಿರುದ್ಧ ಆರೋಪ ಮಾಡಿದರು.

ಇದನ್ನೂ ಓದಿ:ಮೂವರಿಗೆ ಖಾತೆ ಮರು ಹಂಚಿಕೆ.. ವೈದ್ಯಕೀಯ ಶಿಕ್ಷಣ ಖಾತೆ ಮರಳಿ ಪಡೆದ ಡಾ. ಸುಧಾಕರ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.