ರಾಮನಗರ : ಸಿಎಂ ಇಬ್ರಾಹಿಂ ಅವರಿಗೆ ಆದಂತಹ ಅನುಭವದಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಸಿಎಂ ಇಬ್ರಾಹಿಂ ಅವರನ್ನು ಕಾಂಗ್ರೆಸ್ ಪಕ್ಷ ಕೇವಲ ಭಾಷಣಕ್ಕಾಗಿ ಇರಿಸಿಕೊಂಡಿದೆ. ಭಾಷಣದ ಮೂಲಕ ಜನರನ್ನು ಆಕರ್ಷಣೆ ಮಾಡಲು ಕಾಂಗ್ರೆಸ್ ನಾಯಕರು ಇಬ್ರಾಹಿಂ ಅವರನ್ನು ಇಟ್ಟುಕೊಂಡಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಮತ್ತೊಮ್ಮೆ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಹಾಕುವುದು ಕಾಂಗ್ರೆಸ್ ಅಭ್ಯರ್ಥಿ ಸೋಲಿಸುವುದಕ್ಕೆ ಅಂತಾ ಹೇಳಿ ಪದೇಪದೆ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿಯ ಬಿ-ಟೀಂ ಅಂತಾ ಕಾಂಗ್ರೆಸ್ ನಾಯಕರು ಪ್ರಚಾರ ಮಾಡಿದರು. 2012ರ ಚುನಾವಣೆಯಲ್ಲಿ ಎಷ್ಟರಮಟ್ಟಿಗೆ ವಿಪಕ್ಷ ನಾಯಕರಾದ ಸಿದ್ದರಾಮಯ್ಯನವರು ಅಲ್ಪಸಂಖ್ಯಾತರ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದರು ಎಂದಿದ್ದಾರೆ.
ಇಕ್ಬಾಲ್ ಸರಡಗಿ ಅವರನ್ನ ಚುನಾವಣೆಯಲ್ಲಿ ಸೋಲಿಸಿದವರು ಯಾರು? ಕಾಂಗ್ರೆಸ್ ಪಕ್ಷದಿಂದಲೇ ಅಧಿಕೃತವಾಗಿ ಸ್ಪರ್ಧೆ ಮಾಡಿದ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಸೋಲಿಸುವಲ್ಲಿ ಸಿದ್ದರಾಮಯ್ಯನವರ ಪಾತ್ರ ಏನು? ರೋಷನ್ ಬೇಗ್ ಅವರನ್ನ 6 ವರ್ಷ ಸಸ್ಪೆಂಡ್ ಮಾಡಿಬಿಟ್ಟರು. ಲೋಕಸಭಾ ಚುನಾವಣೆಯ ಹಿನ್ನೆಲೆ ಕೊಟ್ಟಂತಹ ಒಂದು ಹೇಳಿಕೆಯನ್ನೇ ಆಧರಿಸಿ ರೋಷನ್ ಬೇಗ್ ಅವರಿಗೆ ನೋಟಿಸ್ ನೀಡದೆ 6 ವರ್ಷ ಸಸ್ಪೆಂಡ್ ಮಾಡಿಬಿಟ್ಟರು ಎಂದು ಹೇಳಿದ್ದಾರೆ.
ಜಾಫರ್ ಶರೀಫ್ ಅವರ ಮೊಮ್ಮಗನನ್ನ ಚುನಾವಣೆಗೆ ನಿಲ್ಲಿಸಿ ಆತನ ಸೋಲಿಗೆ ಯಾರು ಕಾರಣರಾಗಿದ್ದರು. ಸಿದ್ದರಾಮಯ್ಯನವರ ಪಾತ್ರ ಏನಿತ್ತು ಇವರ ಹಿಂಬಾಲಕರ ಪಾತ್ರ ಏನಿತ್ತು ಗೊತ್ತಿದೆ. ಇದಲ್ಲದೆ ಮೈಸೂರು ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುವಾಗ, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಬಗ್ಗೆ ಯಾವ ರೀತಿ ಪದ ಬಳಕೆಯನ್ನು ಮಾಡಿದ್ರು ಅನ್ನೋದನ್ನ ಹೇಳಬೇಕು. ವಿಧಾನಸೌಧದ ಮುಂದೆ ಸಿದ್ದರಾಮಯ್ಯನವರ ಭಾಷಣ ಮಾಡಿದ್ರಲ್ಲ ರೋಷನ್ ಬೇಗ್ ಏನೆಲ್ಲ ಪದ ಬಳಕೆ ಮಾಡಿದ್ರು ಎಂಬುದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಸಲೀಂ ವಿಚಾರದಲ್ಲಿ ಸಿದ್ದರಾಮಯ್ಯನವರು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೂಡಿದ್ದಾರೆ. ನಮ್ಮ ನಾಯಕರು ನಮ್ಮ ಗುರುಗಳು ನಮ್ಮ ಗಾಡ್ ಫಾದರ್ ಅಂತಾ ಹೇಳಿ ಸಲೀಂ ಹೇಳ್ತಿದ್ರು. ಈಗ ಆತನನ್ನು ಆರು ವರ್ಷ ಅಮಾನತು ಮಾಡಿದ್ದಾರೆ. ಆರು ಬಾರಿ ಸಂಸದರಾಗಿದ್ದ ಕೋಲಾರದ ಮುನಿಯಪ್ಪರವರ ಸೋಲಿಗೂ ಕೂಡ ಸಿದ್ದರಾಮಯ್ಯನವರ ಹಿಂದೆ ಮುಂದೆ ಇದ್ದ ನಾಯಕರೇ ಕಾರಣ ಎಂದಿದ್ದಾರೆ.
ಹಾಗೆಯೇ ಅಲ್ಪಸಂಖ್ಯಾತ ಮುಖಂಡರಿಗೆ ಹಾಗೂ ದಲಿತ ಮುಖಂಡರುಗಳಿಗೆ ಕಾಂಗ್ರೆಸ್ನಲ್ಲಿ ಏನು ಗೌರವ ನೀಡಿದ್ದಾರೆ. ಒಬಿಸಿ ಹೆಸರಿನಲ್ಲಿ ಸಮಾವೇಶವನ್ನು ಮಾಡಲಿಕ್ಕೆ ಸಿದ್ದರಾಮಯ್ಯನವರು ಹೊರಟಿದ್ದಾರೆ. ನಮ್ಮ ಪಕ್ಷದ ಬಗ್ಗೆ ಮಾತನಾಡುವುದಿರಲಿ ನಿಮ್ಮ ಕಣ್ಣ ಮುಂದೆ ನಡೆದ ಘಟನೆಗಳ ಬಗ್ಗೆ ಸಿದ್ದರಾಮಯ್ಯನವರೇ ಉತ್ತರ ಕೊಡಿ. ನಾನು ಪದ ಬಳಕೆಯಲ್ಲಿ ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡಿ ಮಾತನಾಡಿಲ್ಲ.
ರಾಜಕೀಯದ ನರಮೇಧ ಅಂತಾ ಹೇಳಿದ್ದೇನೆ ಹೊರತು ಸಿದ್ದರಾಮಯ್ಯನವರ ನರಮೇಧ ಅಂತಾ ಹೇಳಿಲ್ಲ. ಅಲ್ಪಸಂಖ್ಯಾತ ನಾಯಕರ ನರಮೇಧ ಹೇಗೆ ನಡೆಯಿತು ಅಂತಾ ಹೇಳಿದ್ದೇನೆ. ನಾನು ಯಾರ ಬಗ್ಗೆಯೂ ಲಘುವಾಗಿ ಪದ ಬಳಕೆಗಳನ್ನು ಮಾಡಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.