ETV Bharat / state

ಗುಡಿಸಲಿಗೆ ಆಕಸ್ಮಿಕ ಬೆಂಕಿ... ಸೀಮೆ‌ಹಸುವಿನ ಕರು ಬೆಂಕಿಗೆ ಬಲಿ

ಚನ್ನಪಟ್ಟಣದಲ್ಲಿ ಗುಡಿಸಲೊಂದಕ್ಕೆ ಆಕಸ್ಮಿಕ ಬೆಂಕಿಯಾಗಿ ಮನೆಯಲ್ಲಿದ್ದ ವಸ್ತುಗಳು ಸೇರಿದಂತೆ ಮುಗ್ದ ಕರುವೊಂದು ಬಲಿಯಾಗಿದೆ.

ಕರು ಬೆಂಕಿಗೆ ಬಲಿ
author img

By

Published : Jul 31, 2019, 12:43 PM IST

ರಾಮನಗರ: ಗುಡಿಸಲಿಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಗುಡಿಸಲಿನಲ್ಲಿದ್ದ ಎಲ್ಲಾ ವಸ್ತುಗಳು ಸೇರಿದಂತೆ ಕರುವೊಂದು ಬೆಂಕಿಗಾಹುತಿಯಾದ ಮನಕಲುಕುವ ಘಟನೆ ಚನ್ನಪಟ್ಟಣ ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪುಟ್ಟಸ್ವಾಮಿ ಎಂಬುವವರ ಗುಡಿಸಲು ಮನೆಯಲ್ಲಿ ಕಳೆದ ಮಂಗಳವಾರ ರಾತ್ರಿ ಅಗ್ನಿ ದುರಂತ‌ ಸಂಭವಿಸಿದೆ. ಘಟನೆಯಲ್ಲಿ ಕೊಟ್ಟಿಗೆಯಲ್ಲಿದ್ದ ಸೀಮೆ‌ ಹಸುವಿನ ಕರು ಬೆಂಕಿಗೆ ಬಲಿಯಾಗಿದೆ. ಇನ್ನು ಮನೆಯಲ್ಲಿದ್ದ ಯಾರಿಗೂ ಯಾವುದೇ ಪ್ರಾಣಾಪಾಯವಾಗಿಲ್ಲ, ಆದರೆ‌ ವಸ್ತುಗಳೆಲ್ಲಾ ಸಂಪೂರ್ಣ ಭಸ್ಮವಾಗಿವೆ.

ಗುಡಿಸಲಿಗೆ ಆಕಸ್ಮಿಕ ಬೆಂಕಿ

ಬಡತನದಲ್ಲಿ‌ ಬದುಕು ಸಾಗಿಸುತ್ತಿದ್ದ ಪುಟ್ಟಸ್ವಾಮಿ ಕುಟುಂಬಕ್ಕೆ‌ ಈ ಘಟನೆಯಿಂದಾಗಿ ಮತ್ತಷ್ಟು ಆರ್ಥಿಕ ಸಂಕಷ್ಠ ಎದುರಾಗಿದೆ. ಅಗ್ನಿ ಅವಘಡಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ, ಈ ಸಂಬಂಧ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲೀಸರು ಸ್ಥಳಕ್ಕಾಗಮಿಸಿ‌ ತನಿಖೆ‌ ಕೈಗೊಂಡಿದ್ದಾರೆ.

Intro:Body:ರಾಮನಗರ : ಗುಡಿಸಲಿಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಗಿಡಿಸಲಲಿದ್ದ ಎಲ್ಲಾ ವಸ್ತುಗಳು ಭಸ್ಮವಾಗಿರುವ ಘಟನೆ ನಡೆದಿದೆ.
ಚನ್ನಪಟ್ಟಣ ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದ ಪುಟ್ಟಸ್ವಾಮಿ ಎಂಬುವವರ ಗುಡಿಸಲು ಮನೆಯಲ್ಲಿ ಮಂಗಳವಾರ ರಾತ್ರಿ ಅಗ್ನಿ ದುರಂತ‌ ಸಂಭವಿಸಿದ್ದು ಕೊಟ್ಟಿಗೆಯಲ್ಲಿದ್ದ ಸೀಮೆ‌ಹಸುವಿನ ಕರು ಬೆಂಕಿಗಾಹುತಿಯಾಗಿದೆ. ಮನೆಯಲ್ಲಿದ್ದ ಯಾರಿಗೂ ಯಾವುದೇ ಪ್ರಾಣಾಪಾಯವಾಗಿಲ್ಲ ಆದರೆ‌ ಮನೆಯಲ್ಲಿದ್ದ ವಸ್ತುಗಳೆಲ್ಲಾ ಸಂಪೂರ್ಣ ಭಸ್ಮವಾಗಿವೆ .
ಬೆಂಕಿ ಅವಘಡದಿಂದಾಗಿ ಗುಡಿಸಿನ ಕೊಟ್ಟಿಗೆಯಲ್ಲಿದ್ದ ಸೀಮೆ ಹಸುವಿನ ಕರು ಬೆಂಕಿಗಾಹುತಿಯಾಗಿದೆ ತೀವ್ರ‌ ಬಡತನದಲ್ಲಿ‌ ಬದುಕು ಸವೆಸುತ್ತಿದ್ದ ಪುಟ್ಟಸ್ವಾಮಿ ಕುಟುಂಭಕ್ಕೆ‌ ಮತ್ತಷ್ಟು ಆರ್ಥಿಕ ಸಂಕಷ್ಠ ಎದುರಾಗಿದೆ.
ಅಗ್ನಿ ಅವಘಡಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ,
ಈ ಸಂಬಂಧ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರು ಸ್ಥಳಕ್ಕಾಗಮಿಸಿ‌ ತನಿಖೆ‌ ಕೈಗೊಂಡಿದ್ದಾರೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.