ರಾಮನಗರ : ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಕಾವೇರಿ ವನ್ಯಜೀವಿ ಧಾಮದ ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ.
ಕನಕಪುರ ತಾಲೂಕಿನ ಚೀಲಂದವಾಡಿ ಅರಣ್ಯ ಪ್ರದೇಶ ವ್ಯಾಪ್ತಿಯ ಕೆಂಜಗನ ಗುಡ್ಡೆ ಮತ್ತು ಮಕ್ಳಂದ ಬೋರನದೊಡ್ಡಿ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ನಿನ್ನೆ ಮಧ್ಯಾಹ್ನದ ವೇಳೆಗೆ ಬೆಂಕಿ ಕಾಣಿಸಿದ್ದು, ನೂರಕ್ಕೂ ಹೆಚ್ಚು ಎಕರೆ ಅರಣ್ಯ ಪ್ರದೇಶ ನಾಶವಾಗಿದೆ.
ಇನ್ನು, ಪ್ರಾಣಿ, ಪಕ್ಷಿಗಳು ಮತ್ತು ಅತ್ಯಮೂಲ್ಯ ಮರ ಗಿಡಗಳು ಬೆಂಕಿಗೆ ಬಲಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಬೇಸಿಗೆಯಲ್ಲಿ ಕಾಳ್ಗಿಚ್ಚು ಉಂಟಾಗುವುದು ಸಹಜವಾಗಿದೆ. ಕಾಡಿನೊಳಗೆ ಅಗ್ನಿಶಾಮಕ ವಾಹನ ತೆರಳಲು ಸಾಧ್ಯವಿಲ್ಲದ ಕಾರಣ ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.