ರಾಮನಗರ: ಕಂಚುಗಲ್ ಬಂಡೆಮಠ ಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೂರು ಪುಟಗಳ ಡೆತ್ನೋಟ್ ಪತ್ತೆಯಾಗಿದೆ. ಬಸವಲಿಂಗ ಶ್ರೀಗಳಿಗೆ ಕಿರುಕುಳ ನೀಡ್ತಿದ್ದವರ ಹೆಸರನ್ನು ಡೆತ್ ನೋಟ್ನಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗ್ತಿದೆ.
ಮಠಕ್ಕೆ ಭೇಟಿ ನೀಡಿದ್ದ ಮಾಜಿ ಶಾಸಕ ಹೆಚ್ ಸಿ ಬಾಲಕೃಷ್ಣ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಶ್ರೀಗಳು ಈ ಭಾಗದಲ್ಲಿ ಬಡ ಮಕ್ಕಳ ಶಿಕ್ಷಣಕ್ಕಾಗಿ ಅನುಕೂಲ ಮಾಡಿಕೊಟ್ಟಿದ್ದರು. ಮಾನಸಿಕವಾಗಿ ತುಂಬ ಸದೃಢವಾಗಿದ್ದರು. ಅವರ ಅಗಲಿಕೆ ಬೇಸರ ತರಿಸಿದೆ ಎಂದು ಕಂಬನಿ ಮಿಡಿದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಟ್ಟಿಸಿರುವ ಹಾಸ್ಟೆಲ್ ಉದ್ಘಾಟನೆಗೆ ಸ್ವಾಮೀಜಿ ತಮ್ಮನ್ನು ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಆಹ್ವಾನಿಸಿದ್ದರು. ಆದ್ರೆ ಇಷ್ಟರಲ್ಲಿ ಇಂತಹ ದುರಂತ ನಡೆದಿದೆ ಎಂದರು.
ಈ ಮಠವು ಸಿದ್ದಗಂಗಾ ಮಠದ ಶಾಖಾಮಠದ ಮೂಲ ಮಠವಾಗಿದೆ. ಮರ್ಯಾದೆಗೆ ಅಂಜಿ ಆತ್ಮಹತ್ಯೆ ನಿರ್ಧಾರ ಮಾಡಿದ್ದು, ಅತೀ ದೊಡ್ಡ ಭಕ್ತವೃಂದ ಹೊಂದಿರುವ ಕಂಚುಗಲ್ ಬಂಡೆಮಠ ಎಂದೇ ಖ್ಯಾತಿ ಪಡೆದಿದೆ. ಯಾವುದೋ ಆಡಿಯೋ, ವಿಡಿಯೋ ಅಪಾದನೆಯಿಂದ ವರ್ಚಸ್ಸಿಗೆ ಧಕ್ಕೆಯುಂಟಾಗುತ್ತದೆ ಎಂಬ ಹಿನ್ನೆಲೆ ಶ್ರೀಗಳು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಶಿಕ್ಷಣ ಸಂಸ್ಥೆಯ ಶಿಕ್ಷಕ ರಮೇಶ್ ಎಂಬುವರು ಯಾವುದೋ ವಿಚಾರಕ್ಕೆ ಜಿಗುಪ್ಸೆಗೊಂಡು ಶ್ರೀಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸೂಕ್ತ ತನಿಖೆ ನಡೆಸುವಂತೆ ಕುದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಕುದೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಮರ್ಯಾದೆಗೆ ಅಂಜಿ ಸ್ವಾಮೀಜಿ ಆತ್ಮಹತ್ಯೆ?.. ಡೆತ್ನೋಟ್ನಲ್ಲಿರುವುದು ಏನು?