ETV Bharat / state

ರಾಮನಗರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಕಡತ ನಾಪತ್ತೆ - ಈಟಿವಿ ಭಾರತ್ ಕನ್ನಡ ಸುದ್ದಿ

ರಾಮನಗರದ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿಯಲ್ಲಿ ಪರ್ಮಿಟ್​ ಬಾಕ್ಸ್​ ನಾಪತ್ತೆ- ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು- ಅಧಿಕಾರಿಗಳಿಂದ ಮಾಹಿತಿ

ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಲೋಕೇಶ್

author img

By

Published : Jan 23, 2023, 10:39 PM IST

ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಲೋಕೇಶ್ ಅವರು ಮಾತನಾಡಿದರು

ರಾಮನಗರ: ರಾಮನಗರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಕಳ್ಳತನವಾಗಿದೆ. 2000 ಪ್ರತಿಗಳಿದ್ದ ಪರ್ಮಿಟ್​ ಬಾಕ್ಸ್​ ನಾಪತ್ತೆಯಾಗಿದೆ. ಒಟ್ಟು 13 ಪರ್ಮಿಟ್ ಬಾಕ್ಸ್​ನಲ್ಲಿ ಒಂದು ಬಾಕ್ಸ್ ಕಳ್ಳತನವಾಗಿದ್ದು, ಕಚೇರಿ ಕೊತ್ತಿಪುರದ ಜನನಿಬಿಡ ಪ್ರದೇಶದಲ್ಲಿದೆ. ಅಧಿಕಾರಿ, ಸಿಬ್ಬಂದಿ ನಿರ್ಲಕ್ಷ್ಯದಿಂದ ಭಾರೀ ಎಡವಟ್ಟಾಗಿದ್ದು, ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಮೇಲೆ ಅನುಮಾನ ವ್ಯಕ್ತವಾಗಿದ್ದು, ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನುಮಾನಕ್ಕೆ ಕಾರಣವಾದ ಪರ್ಮೀಟ್​ ಬಾಕ್ಸ್ ಕಳವು: ಜನವರಿ 15 ರಂದು ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ಕಳವಾಗಿದ್ದು, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿಯಲ್ಲೇ ಕಳವಾಗಿದೆ. ಉಪನಿರ್ದೇಶಕ ಲೋಕೇಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಒಂದು ಬಾಕ್ಸ್​ನಲ್ಲಿ ಕನಿಷ್ಟ 2000 ಪರ್ಮಿಟ್​ ಪತ್ರ ಇರಲಿದ್ದು, ಖನಿಜ ಸಾಗಣೆಯ ಪರ್ಮಿಟ್​ ಪತ್ರಗಳಿರುವ ಬಾಕ್ಸ್​ಗಳ ಕಳವಾಗಿದೆ. ಪರ್ಮಿಟ್ ಬಾಕ್ಸ್ ಕಳವು ಭಾರೀ ಅನುಮಾನಕ್ಕೆ ಕಾರಣವಾಗಿದೆ.

ಈ ಕುರಿತು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಲೋಕೇಶ್ ಅವರು ಮಾತನಾಡಿ, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿಯಲ್ಲಿ ಖನಿಜ ಸಾಗಣೆಯ ಪರ್ಮಿಟ್​ ಪತ್ರಗಳಿರುವ ಬಾಕ್ಸ್​ ಅನ್ನು ಇಟ್ಟಿದ್ದರು. ಅವತ್ತು 15 ನೇ ತಾರೀಖಿನಂದು ಪರ್ಮಿಟ್​ ಬಾಕ್ಸ್​ ಕಳವು ಆಗಿರುವ ಬಗ್ಗೆ ಮಾಹಿತಿ ಕೊಟ್ಟರು.

ನಮಗೆ ಯಾರ ಮೇಲೂ ಅನುಮಾನವಿಲ್ಲ: ಅನಂತರ ನಾವು ಹೋಗಿ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೆವು. ಖನಿಜ ಸಾಗಾಣಿಕೆಗೆ ಹೋಗುವ ಪರವಾನಿಗೆಗೆ ಬಳಸುವ ಪರ್ಮಿಟ್​​ ಆಗಿತ್ತು. ಅಲ್ಲಿ ಸುಮಾರು 13 ಬಾಕ್ಸ್​ ಇದ್ದವು. ಅದರಲ್ಲಿ ಈಗ ಒಂದು ಬಾಕ್ಸ್​ ಇಲ್ಲದಂತಾಗಿದೆ. ಒಂದು ಬಾಕ್ಸ್​ನಲ್ಲಿ 20 ಬುಕ್​ಗಳು ಇರುತ್ತವೆ. ಒಂದು ಬುಕ್​ನಲ್ಲಿ 100 ಹಾಳೆಗಳು ಇರುತ್ತವೆ. ಸಿಸಿಟಿವಿ ಸಾರ್ಟ್​ ಸರ್ಕ್ಯೂಟ್​ನಿಂದ ಹಾಳಾಗಿದೆ. ಅದನ್ನು ರಿಪೇರಿಗೆ ಕೊಂಡೊಯ್ಯಲಾಗಿದೆ. ಹೀಗಾಗಿ ಪರಿಶೀಲನೆ ನಡೆಸಲು ಸಾಧ್ಯವಾಗಲಿಲ್ಲ. ನಮಗೆ ಯಾರ ಮೇಲೂ ಅನುಮಾನವಿಲ್ಲ.

ಇದನ್ನೂ ಓದಿ: ಅತಿಯಾಗಿ ಹಾರ್ನ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ : ವಿಜಯಪುರದಲ್ಲಿ ಆರೋಪಿಗಳಿಗೆ ಮೂರು ವರ್ಷ ಶಿಕ್ಷೆ

ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ದೂರು: ನಮಗೆ ಬೆಳಗ್ಗೆ ಏಳು ಗಂಟೆಗೆ ಈ ವಿಚಾರ ತಿಳಿದುಬಂದಿದೆ. ನಮ್ಮ ವಾಚ್​ಮ್ಯಾನ್ ಶಿವಣ್ಣ ಅವರು ನೋಡಿದ್ದಾರೆ. ನಂತರ ಅವರು ನಮ್ಮ ಸ್ಟಾಪ್​ಗಳಿಗೆ ಹೇಳಿದ್ದಾರೆ. ನಂತರ ಅವರು ನಮ್ಮ ಗಮನಕ್ಕೆ ತಂದರು. ಇದಾದ ನಂತರ ನಾವು ಪೊಲೀಸ್ ಇಲಾಖೆಗೆ ದೂರು ನೀಡಿದೆವು. ಅಷ್ಟೊಂದು ಬಾಕ್ಸ್​ನಲ್ಲಿ ನಿರ್ದಿಷ್ಟವಾಗಿ ಅದೇ ಬಾಕ್ಸ್​ನ್ನು ಹೇಗೆ ಕಳವು ಮಾಡಿದ್ದಾರೆ ಅನ್ನೋದು ಇದುವರೆಗೂ ತಿಳಿಯುತ್ತಿಲ್ಲ. ಹೀಗಾಗಿ ನಾವು ತನಿಖೆಗೆ ದೂರು ನೀಡಿದ್ದೇವೆ ಎಂದರು.

ಆ ಬುಕ್​ನಿಂದ ಯಾವುದೇ ಮಿಸ್​ಯೂಸ್ ಸಾಧ್ಯವಾಗುವುದಿಲ್ಲ: ಒಂದು ಬುಕ್​ನಲ್ಲಿ ಎಷ್ಟು ರಾಜಧನ ಕಟ್ಟಬಹುದು. ಈ ಇಪ್ಪತ್ತು ಬುಕ್​ನಿಂದ ಎಷ್ಟು ರಾಜಧನ ಆಗುತ್ತೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದನ್ನು ಎಲ್ಲೂ ಉಪಯೋಗಿಸಲು ಸಾಧ್ಯವಾಗುವುದಿಲ್ಲ. ಐಎನ್​ಎಸ್​ನಲ್ಲಿ ಫೀಡ್​ ಮಾಡಿದ್ರೆ ಅಷ್ಟೇ ಬರುತ್ತೆ ಎಂದರು. ಆ ಬುಕ್​ನಿಂದ ಯಾವುದೇ ಮಿಸ್​ಯೂಸ್ ಸಾಧ್ಯವಾಗುವುದಿಲ್ಲ. 13 ಬಾಕ್ಸ್​ ಜೋಡಿಸಿದ್ದರು. ಅದರಲ್ಲಿ ಒಂದು ಬಾಕ್ಸ್​ಅನ್ನು ಕದ್ದುಕೊಂಡು ಹೋಗಿದ್ದಾರೆ. ಈ ಬಾಕ್ಸ್​ ಕಳ್ಳತನ ಮಾಡಿದವರಿಗೆ ಅದರಿಂದ ಯಾವುದೇ ರೀತಿಯಲ್ಲೂ ಅನುಕೂಲವಾಗುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ದೇವನಹಳ್ಳಿ ಅಪರಿಚಿತ ಶವ ಪತ್ತೆ ಪ್ರಕರಣ : ಕತ್ತರಿಸಿದ ಬೆರಳು ಜೋಡಿಸಿ ಕೊಲೆ ಕೇಸ್​ ಭೇದಿಸಿದ ವಿಜಯಪುರ ಪೊಲೀಸರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.