ETV Bharat / state

ಜಮೀನಿನ ಖಾತೆಗೆ ಲಕ್ಷ ಲಕ್ಷ ಲಂಚ ಕೇಳ್ತಾರೆ.. ಹೆಚ್​ಡಿಕೆ ಎದುರೇ ಅಧಿಕಾರಿಗಳ ವಿರುದ್ಧ ರೈತನ ಗುಡುಗು.. - Incident take place in Ramnagar

ನಮ್ಮ ಜಮೀನನ್ನು ನಾವು ಪಡೆದುಕೊಳ್ಳುವುದಕ್ಕೆ ಸರ್ಕಾರಿ ಅಧಿಕಾರಿಗಳು ಲಂಚ ಕೇಳುತ್ತಾರೆ. ನಮ್ಮ ಜಮೀನಿಗೆ ಖಾತೆ ಮಾಡುವ ವಿಚಾರಕ್ಕೆ ರೆವಿನ್ಯೂ ಇಲಾಖೆ ಅಧಿಕಾರಿಗಳು ಲಕ್ಷ ಲಕ್ಷ ಲಂಚ ಕೇಳುತ್ತಾರೆ ಎಂದು ಬಹಿರಂಗವಾಗಿ ರೈತರೊಬ್ಬರು ದೂರಿದರು..

Farmer outrage against Officers in front of HD Kumaraswamy
ಮಾಜಿ ಸಿಎಂ ಹೆಚ್​ಡಿಕೆ ಎದುರೇ ಅಧಿಕಾರಿಗಳ ವಿರುದ್ಧ ಗುಡುಗಿದ ರೈತ
author img

By

Published : Feb 19, 2022, 6:39 PM IST

ರಾಮನಗರ : ಡಿಸಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರ ಎದುರೇ ರೈತನೋರ್ವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಮಾಜಿ ಸಿಎಂ ಹೆಚ್​ಡಿಕೆ ಎದುರೇ ಅಧಿಕಾರಿಗಳ ವಿರುದ್ಧ ಗುಡುಗಿದ ರೈತ

ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಸಿದ್ದೇಗೌಡ ಎಂಬ ರೈತ, ಮಾಜಿ ಸಿಎಂ ಕುಮಾರಸ್ವಾಮಿಯವರ ಎದುರೇ ಅಧಿಕಾರಿ ವಿರುದ್ಧ ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ನಮ್ಮ ಜಮೀನನ್ನು ನಾವು ಪಡೆದುಕೊಳ್ಳುವುದಕ್ಕೆ ಸರ್ಕಾರಿ ಅಧಿಕಾರಿಗಳು ಲಂಚ ಕೇಳುತ್ತಾರೆ. ನಮ್ಮ ಜಮೀನಿಗೆ ಖಾತೆ ಮಾಡುವ ವಿಚಾರಕ್ಕೆ ರೆವಿನ್ಯೂ ಇಲಾಖೆ ಅಧಿಕಾರಿಗಳು ಲಕ್ಷ ಲಕ್ಷ ಲಂಚ ಕೇಳುತ್ತಾರೆ ಎಂದು ಬಹಿರಂಗವಾಗಿ ದೂರಿದರು.

ಬಳಿಕ ಕುಮಾರಸ್ವಾಮಿಯವರು ಮಾತನಾಡಿ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಇದು ಜಿಲ್ಲೆಯಲ್ಲಿ 4ನೇ ಕಾರ್ಯಕ್ರಮವಾಗಿದೆ. ವಿವಿಧ ಇಲಾಖೆಗೆ ಸಂಬಂಧಿಸಿದಂತೆ ತಗಚಗೆರೆ ಗ್ರಾಮದಲ್ಲಿ ಇಂದು ಸಮಸ್ಯೆಗಳಿಗೆ ಅರ್ಜಿಗಳನ್ನು ಸ್ವೀಕರಿಸಿ, ಸ್ಥಳದಲ್ಲಿ ಅಧಿಕಾರಿಗಳು ಪರಿಹಾರ ಕಲ್ಪಿಸುತ್ತಾರೆ. ಸ್ಥಳದಲ್ಲೇ ಪರಿಹರಿಸಲು ಸಾಧ್ಯವಾಗದ ಕೆಲಸಗಳಿಗೆ ಬೇಕಿರುವ ಅಗತ್ಯ ದಾಖಲಾತಿಗಳನ್ನ ಪಡೆದು ಪರಿಹಾರ ನೀಡುತ್ತಾರೆ ಎಂದರು.

Farmer outrage against Officers in front of HD Kumaraswamy
ಡಿಸಿ ನಡೆ ಹಳ್ಳಿ ಕಡೆ ಕಾರ್ಯಕ್ರಮ

ಚನ್ನಪಟ್ಟಣದಲ್ಲಿ ಆನೆ ದಾಳಿಯಿಂದ ಬೆಳೆಗಳು ಹಾನಿಯಾಗಿ ರೈತರು ನಷ್ಟಕ್ಕೆ ಸಿಲುಕಿದ್ದಾರೆ. ಈ ನಿಟ್ಟಿನಲ್ಲಿ ನನ್ನ ಮುಖ್ಯಮಂತ್ರಿ ಆಡಳಿತ ಅವಧಿಯಲ್ಲಿ 100 ಕೋಟಿ ಅನುದಾನದಲ್ಲಿ ಕಾಡು ಪ್ರಾಣಿಗಳಿಂದ ಬೆಳೆ ಹಾನಿ ರಕ್ಷಣೆಗೆ ಆನೆ ತಡೆಗೋಡೆ ಕಾಮಗಾರಿ ಕೈಗೊಳ್ಳಲಾಗಿತ್ತು.‌

ಆನೆ ದಾಳಿ ತಡೆಯಲು ಹೊಸ ತಂತ್ರವನ್ನು ಬಳಸಲಾಗುತ್ತಿದೆ. 11 ಕಿ.ಮೀ ಸೋಲಾರ್ ಬೇಲಿ ಕೆಲಸ‌, 62 ಕಿ.ಮೀ ಆನೆ ತಡೆಗೋಡೆ ಕೆಲಸ ಪ್ರಗತಿಯಲ್ಲಿದೆ. ಪ್ರಾಣಿ ದಾಳಿಗೆ ಸಂಬಂಧಿಸಿದ 2 ಕೋಟಿ 46 ಲಕ್ಷ ಪರಿಹಾರ ನೀಡುವ ಕೆಲಸ ಪ್ರಗತಿಯಲ್ಲಿದೆ ಎಂದರು.

ಕಂದಾಯ ಇಲಾಖೆಯ ಖಾತೆ, ಪಹಣಿ, ಪೋಡಿಗೆ ಸಂಬಂಧಿಸಿದಂತೆ ಹೆಚ್ಚು ದೂರು ಬರುತ್ತಿವೆ. ಇವುಗಳನ್ನು ಅಧಿಕಾರಿಗಳು ಪರಿಹರಿಸಲು ಕ್ರಮ ವಹಿಸುತ್ತಾರೆ. ಇದರೊಂದಿಗೆ ಸಾರ್ವಜನಿಕರು ಸಹ ಆಸ್ತಿಗೆ ಸಂಬಂಧಿಸಿದಂತೆ ತಮ್ಮ ಕುಟುಂಬದಲ್ಲಿರುವ ವ್ಯಾಜ್ಯಗಳನ್ನು ಪರಿಹರಿಸಲು ಪ್ರಯತ್ನಿಸಬೇಕು. ಎಲ್ಲಾ ಇಲಾಖೆಯ ಅಧಿಕಾರಿಗಳ ಉತ್ತಮ ಸಹಕಾರದೊಂದಿಗೆ ಸಾರ್ವಜನಿಕರ ಸಮಸ್ಯೆ ಪರಿಹರಿಸಬೇಕು. ನ್ಯಾಯದ ಪರವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಇದನ್ನೂ ಓದಿ: ಹಿಂದೆ ಹೇಗಿತ್ತೋ ಹಾಗೆ ಡ್ರೆಸ್ ಕೋಡ್ ಮುಂದುವರೆಯಲಿ.. ಕೆಪಿಸಿಸಿ ಕಾರ್ಯಧ್ಯಕ್ಷ ಆರ್‌ ಧ್ರುವನಾರಾಯಣ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.