ETV Bharat / state

ಇಸ್ರೇಲ್​ ಮಾದರಿಯ ಕೃಷಿ ಆರಂಭಿಸಿದ ಮಾಜಿ ಸಿಎಂ ಕುಮಾರಸ್ವಾಮಿ

ಅತಿಸಾಂದ್ರ ಬೇಸಾಯದ ಪ್ರಕಾರ ಮಾವಿನ ಗಿಡ ಒಮ್ಮೆ ಬಿಟ್ಟ ಕಾಯಿಯನ್ನು ಕಿತ್ತ ಬಳಿಕ, ಆ ಕೊಂಬೆಯ ಗೊಂಚಲುಗಳನ್ನು ಕಿತ್ತು ರೆಂಬೆಯಾಗದಂತೆ ಗಿಡವನ್ನು ನೋಡಿಕೊಳ್ಳಬೇಕು. ಆಗ ಮತ್ತೊಂದು ಫಸಲಿಗೆ ಕಾಯಿಗಳು ಗಿಡದ ಕಾಂಡದಲ್ಲಿಯೂ ಸಾಂದ್ರತೆಯಿಂದ ಗೊಂಚಲಿನ ಹೂವಾಗಿ ಕಾಯಿಬಿಡುತ್ತವೆ. ಇಳುವರಿ ಮೊದಲಿಗಿಂತ ಹೆಚ್ಚಿರುತ್ತೆ..

kumarswamy
ಇಸ್ರೇಲ್​ ಮಾದರಿಯ ಕೃಷಿ
author img

By

Published : Jul 6, 2021, 5:58 PM IST

ರಾಮನಗರ : ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿಯವರು ರಾಮನಗರದಲ್ಲಿ‌ನ ತಮ್ಮ ಬಿಡದಿ ತೋಟದ ಮನೆಯಲ್ಲಿ ಇಸ್ರೇಲ್ ಮಾದರಿ ಕೃಷಿಯನ್ನು ನಡೆಸುವ ಮೂಲಕ ರೈತರಿಗೆ ಮಾದರಿಯಾಗಿದ್ದಾರೆ. ತಮ್ಮ ಜಮೀನಿನಲ್ಲಿ ಹೈನುಗಾರಿಕೆ, ಮೀನು ಸಾಕಾಣಿಕೆ, ಕುರಿಸಾಕಾಣಿಕೆ ಸೇರಿದಂತೆ ಹಲವು ಕೃಷಿ ಚಟುವಟಿಕೆಗಳಲ್ಲಿ ಇಸ್ರೇಲ್ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ತಮ್ಮನ್ನು ಸಂಪೂರ್ಣ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಕೃಷಿ ಖುಷಿ..

ಕೇತುಗಾನಹಳ್ಳಿ ಗ್ರಾಮದಲ್ಲಿ ಮಾಜಿ ಸಿಎಂ ಹೆಚ್​​ಡಿಕೆ ಇಸ್ರೇಲ್ ಮಾದರಿ ಕೃಷಿ ಕಾರ್ಯ ಆರಂಭಿಸಿದ್ದಾರೆ. ಪ್ರತ್ಯೇಕವಾಗಿ ಹೊಂಡಗಳ ನಿರ್ಮಾಣ ಮಾಡಿಕೊಂಡು ಲಕ್ಷಾಂತರ ಮೀನುಗಳನ್ನ ಹೊಂಡಕ್ಕೆ ಬಿಟ್ಟು ಮೀನುಗಾರಿಕೆ ನಡೆಸುತ್ತಿದ್ದಾರೆ. ಹಾಗೆಯೇ ಹೈನುಗಾರಿಕೆ ಹಾಗೂ ವಿವಿಧ ತಳಿಗಳ ಕುರಿ ಹಾಗೂ ನಾಟಿ ಕೋಳಿ ಸಾಕಾಣಿಕೆ ಮಾಡ್ತಿದ್ದಾರೆ ಕುಮಾರಸ್ವಾಮಿ.

ಇನ್ನು, ಮಾಜಿ ಸಿಎಂ ಕೃಷಿ ಆಸಕ್ತಿ ನೋಡಿ ಇಸ್ರೇಲ್ ಮಾದರಿ‌ ಕೃಷಿಗೆ ರೈತರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ರಾಮನಗರ ಜಿಲ್ಲೆಯ ಕೂಟಗಲ್, ಕೈಲಾಂಚ ಹೋಬಳಿಗಳಲ್ಲಿ ಪ್ರಾಥಮಿಕ‌ ಹಂತದಲ್ಲಿ ತೋಟಗಾರಿಕಾ ಇಲಾಖೆಯ ಮಾರ್ಗದರ್ಶನದಲ್ಲಿ ಅತಿಸಾಂದ್ರ ಇಸ್ರೇಲ್ ಮಾದರಿಯ ಬೇಸಾಯ ಪದ್ಧತಿ ಅಳವಡಿಸಿಕೊಂಡು ಈಗಾಗಲೇ ರೈತರು ಮಾವಿನ ಗಿಡಗಳನ್ನು ನೆಟ್ಟಿದ್ದಾರೆ.

ಏನಿದು ಅತಿಸಾಂದ್ರ ಇಸ್ರೇಲ್ ಮಾದರಿ ಬೇಸಾಯ‌ : ತುಂಡು ಭೂಮಿಯಲ್ಲಿ ಹೆಚ್ಚಿನ ತೋಟಗಾರಿಕಾ ಬೆಳೆಗಳ ಗಿಡಗಳನ್ನು ನೆಡುವ ಪದ್ಧತಿಯೇ ಅತಿಸಾಂದ್ರ ಇಸ್ರೇಲ್ ಮಾದರಿ ಬೇಸಾಯ‌. ಇತ್ತೀಚೆಗೆ ಮಾವು ಗಿಡಗಳನ್ನು ಈ ಪದ್ಧತಿಯಲ್ಲಿ ನೆಡಲಾಗುತ್ತಿದೆ. ಹಳೆ ಪದ್ಧತಿಯಲ್ಲಿ ಸಾಮಾನ್ಯವಾಗಿ 30 ಅಡಿಗೆ ಒಂದು ಸಸಿಯಂತೆ 1 ಎಕರೆ ಪ್ರದೇಶದಲ್ಲಿ 40 ಮಾವಿನ ಸಸಿಗಳನ್ನು ಮಾತ್ರ ನೆಡಬಹುದಿತ್ತು. ಆದರೆ, ಇಸ್ರೇಲ್ ಮಾದರಿಯಲ್ಲಿ 12 ಅಡಿ ಅಂತರದಲ್ಲಿ 1 ಎಕರೆಗೆ 250ಕ್ಕೂ ಹೆಚ್ಚು ಗಿಡಗಳನ್ನು ನೆಡಬಹುದು.

ಅತಿಸಾಂದ್ರ ಬೇಸಾಯದ ಪ್ರಕಾರ ಮಾವಿನ ಗಿಡ ಒಮ್ಮೆ ಬಿಟ್ಟ ಕಾಯಿಯನ್ನು ಕಿತ್ತ ಬಳಿಕ, ಆ ಕೊಂಬೆಯ ಗೊಂಚಲುಗಳನ್ನು ಕಿತ್ತು ರೆಂಬೆಯಾಗದಂತೆ ಗಿಡವನ್ನು ನೋಡಿಕೊಳ್ಳಬೇಕು. ಆಗ ಮತ್ತೊಂದು ಫಸಲಿಗೆ ಕಾಯಿಗಳು ಗಿಡದ ಕಾಂಡದಲ್ಲಿಯೂ ಸಾಂದ್ರತೆಯಿಂದ ಗೊಂಚಲಿನ ಹೂವಾಗಿ ಕಾಯಿಬಿಡುತ್ತವೆ. ಇಳುವರಿ ಮೊದಲಿಗಿಂತ ಹೆಚ್ಚಿರುತ್ತೆ.

ಈ ಪದ್ಧತಿಯಲ್ಲಿ ಬೆಳೆದ ಗಿಡಗಳ ಇಳುವರಿ ನೋಡೋದಾದ್ರೆ ಗಿಡವೊಂದು ಮೊದಲ ವರ್ಷದಲ್ಲಿಯೇ 25 ಕೆಜಿ ಕಾಯಿ ಬಿಡಲಿದೆ. ಎಕರೆಗೆ 5 ರಿಂದ 8 ಟನ್ ಮಾವಿನ ಕಾಯಿ ಫಸಲು ಬಿಡಲಿದೆ. ಈ‌ ಬೇಸಾಯ ಪದ್ಧತಿ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಹೆಚ್ಚು ಅನುಕೂಲವಾಗಲಿದೆ.

ಈ ಬೇಸಾಯ ಮಾಡುವಂತೆ ಪ್ರೇರೇಪಿಸಲು ತೋಟಗಾರಿಕಾ ಇಲಾಖೆ ಸ್ಥಳೀಯ ಮಾವು ಬೆಳೆಗಾರರನ್ನು ಇಸ್ರೇಲ್ ದೇಶ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಿಗೆ ಪ್ರವಾಸ ತರಬೇತಿಗೆಂದು ಕರೆದುಕೊಂಡು ಹೋಗಿತ್ತು. ಆ ಬಳಿಕ ರಾಮನಗರ ಜಿಲ್ಲೆಯಲ್ಲಿಯೂ ಆರಂಭಿಕ ಹಂತದಲ್ಲಿ ಎರಡು ಗ್ರಾಮಗಳಲ್ಲಿ ಈ ಮಾದರಿಯ ಕೃಷಿ ಪ್ರಯೋಗವನ್ನು ಈಗಾಗಲೇ ಆರಂಭಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.