ರಾಮನಗರ: ಜಿಲ್ಲೆಯ ಚೆನ್ನ ತಾಲೂಕಿನ ದೊಡ್ಡನಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳು ಕಂಡುಬಂದಿವೆ. ಇವುಗಳನ್ನು ಕಾಡಿಗೆ ಓಡಿಸುವಾಗ ಮಾವು ಹಾಗೂ ತೆಂಗಿನ ಮರಗಳಿಗೆ ಹಾನಿಯಾಗಿದೆ.
ಮುತ್ತತ್ತಿ ಅರಣ್ಯ ಪ್ರದೇಶದಿಂದ ಬಂದಿರುವ ಆನೆಗಳು ಕಬ್ಬಾಳು ವಲಯದಲ್ಲಿ ಬೀಡುಬಿಟ್ಟಿವೆ. ಈ ಗಜಪಡೆ ಪ್ರತಿದಿನ ಕಬ್ಬಾಳು ವಲಯದ ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶ ಮಾಡುತ್ತಿವೆ. ಆದರೆ, ಅರಣ್ಯ ಇಲಾಖೆ ಒಂದು ಮಾವಿನ ಮರಕ್ಕೆ ಕೇವಲ 100-200 ರೂಪಾಯಿ ಪರಿಹಾರ ನೀಡುತ್ತಿದೆ. ಈ ಪರಿಹಾರವನ್ನು ಪಡೆಯಲು ಮುಂದಾಗುವ ಜನರಿಗೆ ಸರ್ಕಾರ ಕೇಳುವ ದಾಖಲೆಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ.
ದೊಡ್ಡನಹಳ್ಳಿ, ನಂಜಾಪುರ, ಮುನೇಶ್ವರ ತಪ್ಪಲು ಸೇರಿದಂತೆ ಹಲವು ಗ್ರಾಮಕ್ಕೆ ಇಂದು ಬೆಳಗ್ಗೆ ಆನೆಗಳು ಆಗಮಿಸಿವೆ. ಇದು ಸ್ಥಳೀಯರನ್ನು ಗಾಬರಿಗೊಳಿಸಿವೆ. ಒಂದು ಕಾಡಾನೆ ತೆಂಗಿನ ಮರ ಉರುಳಿಸಿರುವ ದೃಶ್ಯ ಸೆರೆಯಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ ಗ್ರಾಮಸ್ಥರು ಮನೆಯಿಂದ ಹೊರ ಬರದಂತೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಪರಿಸರವಾದಿ ಡಿ.ವಿ. ಗಿರೀಶ್ ಮೇಲೆ ಹಲ್ಲೆ ಪ್ರಕರಣ: ಏಳು ಜನರ ಬಂಧನ