ರಾಮನಗರ: ದಿನನಿತ್ಯ ಸಾರ್ವಜನಿಕರ ಅಗತ್ಯಗಳಲ್ಲೊಂದಾದ ಸಲೂನ್ ಶಾಪ್ಗಳು ತೆರೆಯದೇ ತಲೆ ಕೂದಲು ಹಾಗೂ ಗಡ್ಡ ಬೆಳೆಸಿ ಪರದಾಡುತ್ತಿದ್ದ ಜನರಿಗೆ, ರಾಮನಗರದ ಸರ್ವೇ ಇಲಾಖೆಯ ಉದ್ಯೋಗಿಯೊಬ್ಬರು ಸ್ವತಃ ತಾವೇ ಕಟಿಂಗ್ ಹೇಗೆ ಮಾಡಿಕೊಳ್ಳಬೇಕು ಎಂಬ ಸರಳ ವಿಧಾನದ ಬಗ್ಗೆ ತಿಳಿಸಿಕೊಟ್ಟಿದ್ದಾರೆ.
ಸಲೂನ್ ಶಾಪ್ಗಳು ಇಲ್ಲದೆ ಕಂಗೆಟ್ಟಿರುವ ಜನರಿಗೆ ಸುಲಭವಾಗಿ ಕಟಿಂಗ್ ಮಾಡುವ ವಿಧಾನವನ್ನು ವಿಡಿಯೋ ಮೂಲಕ ಅವರು ತಿಳಿಸಿದ್ದಾರೆ.
ತಮ್ಮ ತಮ್ಮ ಮನೆಯಲ್ಲೇ ಸಿಗುವ ಬಾಚಣಿಕೆ, ಶೇವಿಂಗ್ ಬ್ಲೇಡ್ ಬಳಸಿ ಸರಳವಾಗಿ ತಯಾರಿಸಿರುವ ಕಟಿಂಗ್ ಮಷಿನ್ ಬಗ್ಗೆ ಅವರು ವಿಡಿಯೋ ಮಾಡಿದ್ದಾರೆ. ಆ ಮೂಲಕ ಯಾರೆಲ್ಲಾ ಲಾಕ್ ಡೌನ್ ಬಿಸಿಯಿಂದ ಸಮಸ್ಯೆ ಎದುರಿಸುತ್ತಿದ್ದಾರೋ ಅವರು ಈ ಸರಳ ವಿಧಾನ ಬಳಸಿಕೊಳ್ಳಿ ಎಂದು ಸಲಹೆ ಕೂಡ ನೀಡಿದ್ದಾರೆ.