ETV Bharat / state

ಕಾಂಗ್ರೆಸ್, ಜೆಡಿಎಸ್​ನಿಂದ ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆ: ಪ್ರಧಾನಿ ಮೋದಿ

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕರ್ನಾಟಕವನ್ನು ಎಟಿಎಂ ಅಂದುಕೊಂಡಿವೆ. ಅವರು ರಾಜಕೀಯ ಅಸ್ಥಿರತೆಯ ಲಾಭ ಪಡೆಯಲು ಎರಡು ಪ್ರತ್ಯೇಕ ಪಕ್ಷಗಳಂತೆ ನಟಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.

Prime Minister Narendra Modi spoke.
ಪ್ರಧಾನಿ ನರೇಂದ್ರ ಮೋದಿ
author img

By

Published : Apr 30, 2023, 4:15 PM IST

Updated : Apr 30, 2023, 6:29 PM IST

ಬಿಜೆಪಿ ಪ್ರಚಾರದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

ಚನ್ನಪಟ್ಟಣ (ರಾಮನಗರ): ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಕಾರಣ. ಇವರ ಬಗ್ಗೆ ರಾಜ್ಯದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಜೆಡಿಎಸ್ ಭದ್ರಕೋಟೆ ಎಂದೇ ಹೇಳಲಾಗುವ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿಂದು ನಡೆದ ಬಿಜೆಪಿ ಚುನಾವಣಾ ಪ್ರಚಾರದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಈ ಎರಡೂ ಪಕ್ಷಗಳು ಕರ್ನಾಟಕವನ್ನು ಎಟಿಎಂನಂತೆ ನೋಡಿವೆ. ರಾಜಕೀಯ ಅಸ್ಥಿರತೆಯ ಲಾಭವನ್ನೂ ಇವರು ಪಡೆಯುತ್ತಿದ್ದಾರೆ. ಪ್ರತ್ಯೇಕ ಪಕ್ಷಗಳಂತೆ ನಟಿಸುತ್ತಾರೆ. ಆದರೆ ಎರಡೂ ಪಕ್ಷಗಳ ನಾಯಕರು ಹೃದಯದಲ್ಲಿ ಒಂದಾಗಿದ್ದಾರೆ. ದೆಹಲಿಯಲ್ಲೂ ಒಟ್ಟಿಗಿದ್ದಾರೆ. ಸಂಸತ್ತಿನಲ್ಲಿ ಪರಸ್ಪರ ಸಹಾಯ ಮಾಡುತ್ತಾರೆ ಎಂದು ವ್ಯಂಗ್ಯವಾಗಿ ಟೀಕಿಸಿದರು.

ಕರ್ನಾಟಕ ಬಹಳ ವರ್ಷಗಳಿಂದ ಅಸ್ಥಿರ ಸರ್ಕಾರದ ನಾಟಕವನ್ನು ಕಂಡಿದೆ. ಅಸ್ಥಿರ ಸರ್ಕಾರಗಳು ಅಧಿಕಾರಕ್ಕೆ ಬಂದ್ರೆ ಲೂಟಿ ಮಾಡಲು ಅವಕಾಶ ನೀಡಿದಂತೆ. ಇಂಥ ಸರ್ಕಾರದಲ್ಲಿ ಯಾವಾಗಲೂ ಕಂಡು ಬರುವುದು ಲೂಟಿ ಮಾತ್ರ. ಅಲ್ಲಿ ಅಭಿವೃದ್ಧಿ ಕಾಣುವುದಿಲ್ಲ. 224 ಸದಸ್ಯಬಲದ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ 15ರಿಂದ 20 ಸ್ಥಾನಗಳನ್ನು ಪಡೆದರೆ ತಾವೇ ಕಿಂಗ್‌ಮೇಕರ್ ಎಂದು ಜೆಡಿಎಸ್‌ ಬಹಿರಂಗವಾಗಿ ಘೋಷಿಸಿದೆ. ಈ ಸ್ವಾರ್ಥ ವಿಧಾನ ಒಂದು ಕುಟುಂಬಕ್ಕೆ ಪ್ರಯೋಜನ ತರಬಹುದು. ಆದರೆ ಇದು ಕರ್ನಾಟಕದ ಲಕ್ಷಾಂತರ ಕುಟುಂಬಗಳಿಗೆ ನಷ್ಟ ಉಂಟುಮಾಡುತ್ತದೆ ಎಂದು ಜೆಡಿಎಸ್ ಪಕ್ಷವನ್ನು ಟೀಕಿಸಿದರು.

ಕಾಂಗ್ರೆಸ್ ಭರವಸೆ ಸುಳ್ಳು: ಕಾಂಗ್ರೆಸ್​​ ಪಕ್ಷ ನೀಡುವ ಭರವಸೆ ಕೇವಲ ಸುಳ್ಳಾಗಿದೆ. ಸಾಲಮನ್ನಾ ಆಸೆ ತೋರಿಸಿ ಜನತೆಗೆ ಮೋಸ ಮಾಡಲು ಹೊರಟಿದ್ದಾರೆ. ಸುಳ್ಳು ಘೋಷಣೆ ಮಾಡುವುದನ್ನು ಬಿಡಬೇಕು. ಕಾಂಗ್ರೆಸ್ ಸರ್ಕಾರದಲ್ಲಿ ರೈತರಿಗೆ ತಲುಪದ ಯೋಜನೆಗಳು ಭ್ರಷ್ಟಾಚಾರಿಗಳ ಪಾಲಾಗುತ್ತಿದ್ದವು. ಆ ಸರ್ಕಾರದ ಘೋಷಣೆ ಒಂದು ದೊಡ್ಡ ಸುಳ್ಳಿನ ಮೂಟೆಯಾಗಿದ್ದು, ಯಾರೂ ಕೂಡ ನಂಬಬಾರದು. ಈ‌ ಹಿಂದೆ ಹಿಮಾಚಲ ಪ್ರದೇಶದಲ್ಲಿಯೂ ಹಲವು ಅಶ್ವಾಸನೆ ನೀಡಿದ್ದರು. ಆದರೆ ಇದುವರೆಗೂ ಯಾವುದೂ ಈಡೇರಿಸಿಲ್ಲ. ಜೊತೆಗೆ ಮೊದಲ ಕ್ಯಾಬಿನೆಟ್​​ನಲ್ಲೇ ಬಿಜೆಪಿ ತಂದಿದ್ದ ಜನಪರ ಯೋಜನೆಗಳನ್ನು ರದ್ದು ಮಾಡಲಾಗಿದೆ. ಇದು ಅವರ ನಿಜವಾದ ಆಡಳಿತ ವೈಖರಿ‌ ಎಂದು ಪ್ರಧಾನಿ ಟೀಕಿಸಿದರು.

ದೇಶ ಹಾಗೂ ಕರ್ನಾಟಕದ ಅಭಿವೃದ್ಧಿಯು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ಇಂದು ಗ್ರಾಮೀಣ ಭಾಗಗಳಲ್ಲಿ ಶುದ್ದ ನೀರು, ಸಾರ್ವಜನಿಕರಿಗೆ ಉಚಿತ ಗ್ಯಾಸ್, ಉಚಿತ ರೇಷನ್ ಸೇರಿದಂತೆ ಬಡವರ ಸೇವೆ ಮಾಡುವ ಕೆಲಸವು ಬಿಜೆಪಿ ಸರ್ಕಾರದಿಂದ ಆಗಿದೆ. ರಾಮನಗರ ಜಿಲ್ಲೆಯಲ್ಲಿ 3 ಲಕ್ಷ ಬಡವರಿಗೆ ಬ್ಯಾಂಕ್​ ಖಾತೆ ಮಾಡಿಸಿ, ಅವರ ಅಕೌಂಟ್​​ಗೆ ನೇರ ಹಣ ತಲುಪುವಂತೆ ಮಾಡಲಾಗಿದೆ.‌ ಜೊತೆಗ ಜಿಲ್ಲೆಯ 90 ಸಾವಿರ ಕುಟುಂಬಗಳಿಗೆ ನಲ್ಲಿ ನೀರಿನ ಭಾಗ್ಯ ಸಿಕ್ಕಿದೆ. ಇದಲ್ಲದೆ ನಾಡಿನ ಜನರಿಗೆ 5 ಲಕ್ಷ ರೂ.ವರೆಗೂ ಉಚಿತ ಆರೋಗ್ಯ ಸೇವೆ ಒದಗಿಸಲಾಗಿದೆ ಎಂದು ಹೇಳಿದರು.

ಬಿಜೆಪಿಯದು ನಿಜವಾದ ಗ್ಯಾರೆಂಟಿ: ಬಿಜೆಪಿ ಸರ್ಕಾರದ ನಿಜವಾದ ಗ್ಯಾರೆಂಟಿ ಎಂದರೆ, ರೈತರ ಬ್ಯಾಂಕ್ ಖಾತೆಗೆ‌ ನೇರವಾಗಿ ಹಣ ಹಾಕುವುದು. ದೇಶದಲ್ಲಿ 2.5 ಲಕ್ಷ ಜನರು ಇದರ ಉಪಯೋಗ ಪಡೆದುಕೊಂಡಿದ್ದು, ರಾಜ್ಯದಲ್ಲಿ 15 ಸಾವಿರ ಕೋಟಿ ಹಾಗೂ‌ ರಾಮನಗರ ಜಿಲ್ಲೆ 300 ಕೋಟಿ ರೂಪಾಯಿ ಹಣ ನೇರವಾಗಿ ರೈತರ ಖಾತೆಗೆ ಜಮೆ ಆಗುತ್ತಿದೆ. ಇದುವೇ ಬಿಜೆಪಿ ಸರ್ಕಾರದ ನಿಜವಾದ ಗ್ಯಾರೆಂಟಿ. ಇದಲ್ಲದೆ ರೇಷ್ಮೆ ಬೆಳೆಗಾರರ ಅಭಿವೃದ್ಧಿಗೆ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ವೇಳೆ ಹಲವು ಯೋಜನೆ ತರಲಾಗಿದೆ. ಇಂದು ದೇಶದಲ್ಲಿ ರೇಷ್ಮೆ ರಪ್ತು ಮಾಡುವ ಮಟ್ಟಕ್ಕೆ ನಾವು ಬೆಳೆದಿದ್ದು, ರೇಷ್ಮೆ ಬೆಳೆಗಾರರು ಕೂಡ ಅಭಿವೃದ್ಧಿ ಪಥದಲ್ಲಿ ಸಾಗಿದ್ದಾರೆ‌‌ ಎಂದರು.

ಇದನ್ನೂಓದಿ: ದೇಶ ವಿದೇಶಗಳಲ್ಲಿ ಧ್ವನಿಸಿದ ಮನ್​ ಕಿ ಬಾತ್​: ಶ್ರೋತೃಗಳ ಅಭಿಮತ ಹೀಗಿದೆ

Last Updated : Apr 30, 2023, 6:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.