ETV Bharat / state

ಜೆಡಿಎಸ್ ಮಿಷನ್-123 ಕಾರ್ಯಾಗಾರಕ್ಕೆ ಚಾಲನೆ.. ಮುಂದಿನ ಬಾರಿ ಗದ್ದುಗೆ ಹಿಡಿಯೋದು ನಾವೇ.. HDK

author img

By

Published : Sep 27, 2021, 3:51 PM IST

ಮುಂಬರುವ ದಿನಗಳಲ್ಲಿ ಅಧಿಕಾರಕ್ಕೆ ಬರಲು ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು. ಇನ್ನು, ನಮ್ಮ ಪಕ್ಷದಿಂದ ಶಕ್ತಿ ಪಡೆದುಕೊಂಡು ಬೇರೆ ಪಕ್ಷಕ್ಕೆ ಹೋಗಿ ಸಿಎಂ ಸೇರಿದಂತೆ ಪ್ರಮುಖ ಹುದ್ದೆಗಳನ್ನ ಪಡೆದುಕೊಂಡಿದ್ದಾರೆ. ನಮ್ಮ ಪಕ್ಷದಿಂದಲೇ ಬೆಳೆದ ನಾಯಕರೊಬ್ಬರು ನಮ್ಮ ಪಕ್ಷದ ವಿರುದ್ಧ ಲಘುವಾಗಿ ಮಾತನಾಡುತ್ತಾರೆ..

ಜೆಡಿಎಸ್ ಮಿಷನ್ -123 ಕಾರ್ಯಾಗಾರಕ್ಕೆ ಚಾಲನೆ
ಜೆಡಿಎಸ್ ಮಿಷನ್ -123 ಕಾರ್ಯಾಗಾರಕ್ಕೆ ಚಾಲನೆ

ರಾಮನಗರ : ಜೆಡಿಎಸ್ ಸಂಘಟನಾ ಕಾರ್ಯಾಗಾರಕ್ಕೆ ಜಿಲ್ಲೆಯ ಬಿಡದಿ ಬಳಿಯ ಕೇತಗಾನಹಳ್ಳಿಯ ಮಾಜಿ ಸಿಎಂ ಹೆಚ್‌ಡಿಕೆ ತೋಟದ ಮನೆಯ ಬಳಿಯ ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಂದ ಧ್ವಜಾರೋಹಣ ಹಾಗೂ ಜೆಡಿಎಸ್ ಧ್ವಜ ಹಾರಿಸುವ ಮೂಲಕ ಕಾರ್ಯಾಗಾರಕ್ಕೆ ವಿಧ್ಯುಕ್ತವಾಗಿ ಚಾಲನೆ ಕೊಟ್ಟರು.

ಇಂದಿನಿಂದ ಹೆಚ್‌ಡಿಕೆ ತೋಟದ ಮನೆಯಲ್ಲಿ 4 ದಿನಗಳ ಕಾಲ ಜೆಡಿಎಸ್ ಮಿಷನ್-123 ಕಾರ್ಯಾಗಾರಕ್ಕೆ ಚಾಲನೆ ಸಿಕ್ಕಿದೆ. ಕಾರ್ಯಾಗಾರದಲ್ಲಿ 123 ಜನ ಜೆಡಿಎಸ್ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ.

ಘೋಷಣೆಯಾದ 123 ಜನರಿಗೆ ಗ್ರೀನ್ ಕಾರ್ಡ್ ವಿತರಣೆ ಮಾಡಿ, ಇತ್ತೀಚಿಗೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು‌ ಮುಂದಿನ ಜನವರಿವರೆಗೆ ಆ ಅಭ್ಯರ್ಥಿಗಳ ಕಾರ್ಯವನ್ನು ವೀಕ್ಷಣೆ ಮಾಡಲಾಗುತ್ತೆ. ನಂತರ ಅವರ ಸಂಘಟನೆ ನೋಡಿ ಅವರಿಗೆ ಟಿಕೆಟ್ ನೀಡಲಾಗುವುದು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.

ಹಾಗೆಯೇ ಮೊದಲನೆ ಹಂತದ ಅಭ್ಯರ್ಥಿಗಳನ್ನ ಈಗಾಗಲೇ ಗುರುತಿಸಲಾಗಿದೆ. ಅಂತವರಿಗೆ ಇವತ್ತು ತರಬೇತಿ ಕಾರ್ಯಾಗಾರವನ್ನ ಹಮ್ಮಿಕೊಳ್ಳಲಾಗಿದೆ. ನಮ್ಮ ಪಕ್ಷದಲ್ಲಿ ಕುಮಾರಸ್ವಾಮಿ‌ ಹೋದಾಗ ದೊಡ್ಡ ಮಟ್ಟದಲ್ಲಿ ಸೇರ್ತಾರೆ. ಆದರೆ, ಮತವಾಗಿ ಪರಿವರ್ತನೆ ಆಗ್ತಾ ಇಲ್ಲ. ಅದು ಕೂಡ ಒಂದು ಲೋಪ‌ ಇದ್ದು, ಬೇರೆ ಬೇರೆ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿವೆ.

ಈ ಪಕ್ಷ ಇರೋದು ಕನ್ನಡಿಗರಿಗಾಗಿ, ಕನ್ನಡಿಗರಿಗೋಸ್ಕರ ಇರುವ ಪಕ್ಷ ನಮ್ಮದು. ಹಲವಾರು ಬಡವರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೊರಟಿದ್ದೇವೆ. ಮುಂದಿನ 2023ರಿಂದ ಹೊಸ ಯುಗ ಆರಂಭವಾಗಲಿದೆ. ಬಡವರಿಗೆ ಕಾರ್ಯಕ್ರಮ ಕೊಟ್ಟ ಪಕ್ಷ ನಮ್ಮದು. ಕಾರ್ಯಾಗಾರ ಮಾಡಿ ನಂತರ ನಿರಂತರವಾಗಿ ಕಾರ್ಯಕ್ರಮ ನಡೆಯುತ್ತವೆ.

ಮುಂಬರುವ ದಿನಗಳಲ್ಲಿ ಅಧಿಕಾರಕ್ಕೆ ಬರಲು ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು. ಇನ್ನು, ನಮ್ಮ ಪಕ್ಷದಿಂದ ಶಕ್ತಿ ಪಡೆದುಕೊಂಡು ಬೇರೆ ಪಕ್ಷಕ್ಕೆ ಹೋಗಿ ಸಿಎಂ ಸೇರಿದಂತೆ ಪ್ರಮುಖ ಹುದ್ದೆಗಳನ್ನ ಪಡೆದುಕೊಂಡಿದ್ದಾರೆ. ನಮ್ಮ ಪಕ್ಷದಿಂದಲೇ ಬೆಳೆದ ನಾಯಕರೊಬ್ಬರು ನಮ್ಮ ಪಕ್ಷದ ವಿರುದ್ಧ ಲಘುವಾಗಿ ಮಾತನಾಡುತ್ತಾರೆ.

20-30 ಸೀಟು ಗೆಲ್ಲುವ ಮೂಲಕ ಬೇರೆಯವರ ಮನೆ ಬಾಗಿಲಿಗೆ ಮಣೆ ಹಾಕಿ ಸರಕಾರದ ರಚನೆ ಮಾಡುತ್ತಾರೆ ಎಂಬ ಕೆಟ್ಟ ಭಾವನೆಯಿಂದ ಹೇಳಿದ್ದಾರೆಂದು ಸಿದ್ಧರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದರು. ಮುಂದಿನ 17 ತಿಂಗಳು ನಿರಂತರವಾಗಿ ಪಕ್ಷ ಸಂಘಟನೆ ಕಾರ್ಯಕ್ರಮಗಳು ನಡೆಯುತ್ತವೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಇದೇ ವೇಳೆ ಹೆಚ್‌ಡಿಕೆ ಭವಿಷ್ಯ ನುಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.