ರಾಮನಗರ : ಕೊರೊನಾ ಸಂಖ್ಯೆ ಏರಿಕೆ ಜತೆಗೆ ಆಸ್ಪತ್ರೆಯಲ್ಲಿ ಸೋಂಕಿತರು ಸಾವನಪ್ಪುತ್ತಿರುವುದು ಸಹ ನಿತ್ಯ ವರದಿಯಾಗುತ್ತಿದೆ. ಈ ಹಿನ್ನೆಲೆ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಧೈರ್ಯ ತುಂಬುವ ಕಾರ್ಯ ಮಾಡಲಾಗುತ್ತಿದೆ.
ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರನ್ನು ಒತ್ತಡ ಮತ್ತು ಭಯವನ್ನು ದೂರ ಮಾಡಲು ವೈದ್ಯರು ಡ್ಯಾನ್ಸ್ ಮಾಡಿದ್ದಾರೆ.
ಕೊರೊನಾ ಸೋಂಕಿತರ ಆತ್ಮಸ್ಥೈರ್ಯ ತುಂಬಲು ವೈದ್ಯಕೀಯ ಸಿಬ್ಬಂದಿ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಹಳ್ಳಿಯ ದಯಾನಂದ ಸಾಗರ್ ಕಾಲೇಜು ಆಸ್ಪತ್ರೆಯ ವೈದ್ಯರು ಸೋಂಕಿತರ ಮುಂದೆ ಡ್ಯಾನ್ಸ್ ಮಾಡಿದ್ದಾರೆ.
ಸೋಂಕಿತರಿಗೆ ನೃತ್ಯದ ಮೂಲಕ ಮಾನಸಿಕವಾಗಿ ಸ್ಥೈರ್ಯ ಹಾಗೂ ಧೈರ್ಯ ತುಂಬುವ ಕೆಲಸವನ್ನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸಚಿವರ ಭೇಟಿಗೆ ಮುಂದಾದ ರೋಗಿಯ ಸಂಬಂಧಿಕನನ್ನು ಹೊರ ಕಳುಹಿಸಿದ ಪೊಲೀಸರು