ರಾಮನಗರ: ರಾಜ್ಯದ ಉಪಚುನಾವಣೆ ಕೇವಲ ಮಂತ್ರಿಗಿರಿಗಾಗಿ ನಡೆಯುತ್ತಿರುವ ಚುನಾವಣೆ, ಇದು ರಾಜ್ಯದ ಹಿತದೃಷ್ಟಿಯಿಂದ ನಡೆಯುತ್ತಿರುವ ಚುನಾವಣೆಯಲ್ಲ ಅಂತ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ.
ರಾಮನಗರ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಉಪ ಚುನಾವಣೆಗಳಲ್ಲಿ ಕೆಲವರು ಮಂತ್ರಿಗಿರಿಗೆ ಆಸೆ ಪಟ್ಟು ಮಂತ್ರಿಯಾಗ್ತೀವಿ ಅಂತ ನಿಂತಿದ್ದಾರೆ. ಅವರೆಲ್ಲರನ್ನ ತಿರಸ್ಕಾರ ಮಾಡಬೇಕು ಅಂತ ಎಲ್ಲಾ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡುತ್ತೇನೆ. ಬಿಜೆಪಿ ನಾಲ್ಕು ತಿಂಗಳಿಂದ ನಡೆಸುತ್ತಿರುವ ಆಡಳಿತ ಜನರಿಗೆ ಸಮಾಧಾನ ತಂದಿಲ್ಲ, ನೆರೆ, ಬರ ಹಾಗೂ ಆರ್ಥಿಕ ವ್ಯವಸ್ಥೆ ಕುಸಿತ ವಿಚಾರದಲ್ಲಿ ಬಿಜೆಪಿ ಸರ್ಕಾರದ ಲೋಪ ಎದ್ದು ಕಾಣುತ್ತಿದೆ ಎಂದರು.
ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಶಿಫ್ಟ್ ವಿಚಾರವಾಗಿ ಮಾತನಾಡಿದ ಸುರೇಶ್, ಯಡಿಯೂರಪ್ಪ ಚಿಕ್ಕಬಳ್ಳಾಪುರ ಜನರನ್ನ ಮೋಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಸಮಯದಲ್ಲೇ ಕನಕಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರಾತಿಯಾಗಿದೆ, ಕೇಂದ್ರ ಸರ್ಕಾರಕ್ಕೆ ಹಣಕಾಸಿನ ನೆರವಿಗೆ ಕಳುಹಿಸಿದ್ರು ಆದ್ರೆ ಇದೀಗ ಚಿಕ್ಕಬಳ್ಳಾಪುರಕ್ಕೆ 900 ಕೋಟಿ ರೂ. ಮಂಜೂರಾತಿಯಾಗಿದೆ, ರಾಜಕೀಯ ಕಾರಣದಿಂದ ಕನಕಪುರ ಮೆಡಿಕಲ್ ಕಾಲೇಜನ್ನ ಚಿಕ್ಕಬಳ್ಳಾಪುರಕ್ಕೆ ಕಿತ್ಕೊಂಡೋಗಿದ್ದಾರೆ. ಇದರ ಬಗ್ಗೆ ಚುನಾವಣೆ ಬಳಿಕ ಹೋರಾಟದ ರೂಪುರೇಷೆಗಳನ್ನ ರಚನೆ ಮಾಡುತ್ತೇವೆ ಎಂದು ಸಂಸದ ಡಿ.ಕೆ.ಸುರೇಶ್ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ರು.