ETV Bharat / state

ಕೋವಿಡ್ -19ಗೆ ಬಲಿಯಾದ ಸಂತ್ರಸ್ತರ ಕುಟುಂಬಕ್ಕೆ ಶೀಘ್ರ ಪರಿಹಾರ ನೀಡಿ: ಡಿಕೆಶಿ ಆಗ್ರಹ - ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮರಳೇಗವಿ ಮಠ

ಸದ್ಯ ಕೋವಿಡ್​​ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಲಿ‌. ನಂತರ ಅವರ ಶಕ್ತಿ ತೋರಿಸಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಡಿಕೆಶಿ ಟಾಂಗ್ ನೀಡಿದರು.

ಕೋವಿಡ್ -19ಗೆ ಬಲಿಯಾದ ಸಂತ್ರಸ್ತರ ಕುಟುಂಬಕ್ಕೆ  ಪರಿಹಾರ ಚೆಕ್ ವಿತರಿಸಿದ ಡಿಕೆಶಿ

author img

By

Published : Jan 26, 2022, 10:29 AM IST

ರಾಮನಗರ: ಕನಕಪುರದಲ್ಲಿ ಕೋವಿಡ್​​ನಿಂದ 400 ಜನರು ಮೃತಪಟ್ಟಿದ್ದು, 60 ಜನರಿಗೆ ಪರಿಹಾರ ಚೆಕ್ ನೀಡಲಾಗಿದೆ. ರಾಜ್ಯದಲ್ಲಿ 4 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಅವರಿಗೆಲ್ಲರಿಗೂ ಪರಿಹಾರದ ಚೆಕ್ ಕೊಡಬೇಕು. ನಾನು ಈ ಮೂಲಕ ಸಿಎಂಗೆ ಮನವಿ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಕೋವಿಡ್ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರದಲ್ಲಿ ವಿಳಂಬ: ಡಿಕೆಶಿ ಪ್ರತಿಕ್ರಿಯೆ

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮರಳೇಗವಿ ಮಠಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ರಚಿಸಿರುವ ಎಲ್ಲ ತಂಡಕ್ಕೆ ಅವರು ಸೂಚನೆ ನೀಡಬೇಕು. ಮನೆ ಮನೆಗೆ ಕಳುಹಿಸಿ ಅರ್ಜಿ ತೆಗೆದುಕೊಳ್ಳಬೇಕು. ಕೋರ್ಟ್ ಆದೇಶ ಇದೆ. ಜತೆಗೆ ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದಾರೆ. ಅವರು ನುಡಿದಂತೆ ನಡೆಯಬೇಕು‌ ಎಂದು ಆಗ್ರಹಿಸಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ರಾಗಿ, ಜೋಳವನ್ನ ಕೇವಲ 5 ಎಕರೆಗೆ ಸೀಮಿತ ಮಾಡಿದ್ದು ಸರಿಯಲ್ಲ. ಇದರಿಂದ ರೈತರಿಗೆ ಬಹಳ ತೊಂದರೆಯಾಗುತ್ತಿದೆ. ಸರ್ಕಾರ ಖರೀದಿ ಮಾಡಿಕೊಳ್ಳಬೇಕು. ವ್ಯವಸಾಯ ನಿಲ್ಲಿಸಲು ಸಾಧ್ಯವಿಲ್ಲ. ಮೊದಲು ಯಾವ ಪದ್ಧತಿ ಇತ್ತು ಅದೇ ಮುಂದುವರೆಸಬೇಕು ಎಂದರು.

ಬಿಜೆಪಿಯ ಹಲವು ಶಾಸಕರು ಕಾಂಗ್ರೆಸ್‌ ಸೇರ್ತಾರೆ ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಅವರ ಹೇಳಿಕೆಗೆ ಅವರೇ ಉತ್ತರ ನೀಡಲಿ. ನಾನು ಏನನ್ನೂ ಹೇಳಲ್ಲ. ಯತ್ನಾಳ್ ರೀತಿ ರೋಡ್​ನಲ್ಲಿ ನಾನು ಮಾತನಾಡಲ್ಲ. ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಆದರೆ, ನಾನು ಆ ಬಗ್ಗೆ ಮಾತನಾಡಲು ಆಗಲ್ಲ. ಸದ್ಯ ಕೋವಿಡ್​​ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಲಿ‌. ನಂತರ ಅವರ ಶಕ್ತಿ ತೋರಿಸಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಡಿಕೆಶಿ ಟಾಂಗ್ ಕೊಟ್ಟರು.

ಸಂಸದ ಡಿ.ಕೆ.ಸುರೇಶ್ ಅವರನ್ನು ವಿಧಾನ ಸಭೆಗೆ ಕರೆತರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸದ್ಯ ಅದ್ಯಾವುದರ ಬಗ್ಗೆ ಚರ್ಚೆ ಇಲ್ಲ. ಜನ ಪಾರ್ಲಿಮೆಂಟ್​​ಗೆ ಗೆಲ್ಲಿಸಿ ಕಳುಹಿಸಿದ್ದಾರೆ. ಈಗ ಮಾತನಾಡೋದು ಬೇಡ. ಸಮಯ ಬಂದಾಗ ಮಾತನಾಡುತ್ತೇನೆ ಎಂದರು.

ಇದನ್ನೂ ಓದಿ: ಕೋವಿಡ್​​ನಿಂದ ಮೃತಪಟ್ಟ ಶಿಕ್ಷಕರ ಕುಟುಂಬಕ್ಕೆ ಪರಿಹಾರ ನೀಡಿ: ಸಿಎಂಗೆ ಪತ್ರ ಬರೆದ ರೂಪ್ಸಾ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.