ETV Bharat / state

ಎಸ್​ಸಿ, ಎಸ್​ಟಿ ಪಂಗಡಕ್ಕೆ ಸೇರಿದ ರೈತರ ಪಟ್ಟಿ ಸಿದ್ಧಪಡಿಸಿ; ರಾಮನಗರ ಡಿಸಿ ಸೂಚನೆ - S CP-TSP Plan Implementation

ಸರ್ಕಾರ ನೀಡುವ ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪಬೇಕು. ಸೌಲಭ್ಯ ದೊರಕಿದವರಿಗೆ ಪುನರಾವರ್ತನೆಯಾಗಬಾರದು. ಹೀಗಾಗಿ, ಎಸ್​ಸಿಪಿ ಮತ್ತು ಟಿಎಸ್​ಪಿ ಯೋಜನೆ ಅನುಷ್ಠಾನಗೊಳ್ಳುವ ಮುನ್ನ ಪಟ್ಟಿ ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಸೂಚಿಸಿದರು.

District Collector Dr Rakesh Kumar  meeting
ಅಧಿಕಾರಿಗಳೊಂದಿಗೆ ರಾಮನಗರ ಡಿಸಿ ಸಭೆ
author img

By

Published : Mar 27, 2021, 6:59 AM IST

ರಾಮನಗರ: ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿ, ಪಂಗಡದ ರೈತರ ಪಟ್ಟಿಯನ್ನು ತಾಲೂಕುವಾರು ಹಾಗೂ‌ ಗ್ರಾಮವಾರು ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಕೆ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಸ್​ಸಿಪಿ ಮತ್ತು ಟಿಎಸ್​ಪಿ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಸರ್ಕಾರ ನೀಡುವ ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪಬೇಕು. ಸೌಲಭ್ಯ ದೊರಕಿದವರಿಗೆ ಪುನರಾವರ್ತನೆಯಾಗಬಾರದು. ಹೀಗಾಗಿ, ಯೋಜನೆ ಅನುಷ್ಠಾನಗೊಳ್ಳುವ ಮುನ್ನ ಪಟ್ಟಿ ಸಿದ್ಧಪಡಿಸಬೇಕು. ಆಗ ಮಾತ್ರ ಸುಲಭವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಬಹುದು. ಪಟ್ಟಿ ಸಿದ್ಧಪಡಿಸುವಾಗ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರ ಸರ್ವೆ ಸಂಖ್ಯೆ, ಬೆಳೆಯುತ್ತಿರುವ ಬೆಳೆ, ವಾರ್ಷಿಕ ವಿವರ, ನೀರಾವರಿ ಮಾಹಿತಿ ಸಂಗ್ರಹಿಸಿ ಪಟ್ಟಿಯನ್ನು ತಪ್ಪದೇ ಮುಂದಿನ ಸಭೆಗೆ ಸಲ್ಲಿಸಬೇಕು ಎಂದರು.

ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಇಲಾಖೆಯವರು ಒಂದು ಎಕರೆಗಿಂತ ಕಡಿಮೆ ಜಮೀನಿರುವ ಸಣ್ಣ ರೈತರನ್ನು ಗುರುತಿಸಿ ಸವಲತ್ತುಗಳನ್ನು ಒದಗಿಸಿದರೆ ಅವರ ಆರ್ಥಿಕ ಮಟ್ಟವನ್ನು ಉತ್ತಮ ರೀತಿಯಲ್ಲಿ ಸುಧಾರಿಸಬಹುದು. ಯೋಜನೆ ಅನುಷ್ಠಾನದ ನಂತರ ಆದ ಬದಲಾವಣೆಗಳ ಬಗ್ಗೆ ತಿಳಿದುಕೊಂಡು ವರದಿ ನೀಡಿ, ಇದರಿಂದ ಮುಂದಿನ ಯೋಜನೆಗಳನ್ನು ರೂಪಿಸಿಕೊಳ್ಳಬಹುದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿರುವ ಪೌರಕಾರ್ಮಿಕರಿಗೆ ಆದ್ಯತೆ ಮೇಲೆ ವಸತಿ ಒದಗಿಸಬೇಕು‌. ಸ್ಥಳದ ತೊಂದರೆಯಿದ್ದಲ್ಲಿ ತಹಶೀಲ್ದಾರ್ ಜೊತೆ ಚರ್ಚಿಸುವಂತೆ ತಿಳಿಸಿದರು.

ಜಿಲ್ಲೆಯ ನಗರ ಭಾಗದ ಸ್ಲಂ, ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಾಲೋನಿಗಳಲ್ಲಿರುವ ಅಂನವಾಡಿಗಳ ಸಂಖ್ಯೆ, ಸ್ವಂತ ಅಥವಾ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಹಿತಿ, ಅಂಗನವಾಡಿಗೆ ದಾಖಲಾಗದೆ ಹೊರಗುಳಿದಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಕ್ಕಳ ಸಂಖ್ಯೆ, ಅಪೌಷ್ಟಿಕ ಮಕ್ಕಳ ಸಂಖ್ಯೆ ಹಾಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಂದಿನ ಸಭೆಯಲ್ಲಿ ಮಾಹಿತಿ ನೀಡುವಂತೆ ತಿಳಿಸಿದರು.

ಓದಿ: 'ದೊಡ್ಡ ಬಾಂಬ್​​ ಸ್ಫೋಟ ಮಾಡುತ್ತೇನೆ'... ಆಡಿಯೋ ವೈರಲ್​ ಬೆನ್ನಲ್ಲೇ ಜಾರಕಿಹೊಳಿ ಹೇಳಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.