ETV Bharat / state

ರಾಮನಗರ ನಗರಸಭೆ ಚುನಾವಣೆ: ಭಾರೀ ಮತಗಳಿಂದ ಗೆದ್ದ ಕೋವಿಡ್​ಗೆ ಬಲಿಯಾದ ಅಭ್ಯರ್ಥಿ! - Ramanagar Municipal Election Results

ರಾಮನಗರ ನಗರಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಚುನಾವಣೆಗೆ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್​ ಅಭ್ಯರ್ಥಿಯೊಬ್ಬರು ಬಹುಮತದೊಂದಿಗೆ ಗೆಲುವು ಸಾಧಿಸಿದ್ದಾರೆ. ಆದರೆ ಈ ಸಂಭ್ರಮ ಆಚರಿಸಲು ಈಗ ಅವರೇ ಇಲ್ಲ.

Ramanagar
ಕೋವಿಡ್​ಗೆ ಬಲಿಯಾದ ಅಭ್ಯರ್ಥಿ ಭರ್ಜರಿ ಗೆಲುವು
author img

By

Published : Apr 30, 2021, 11:46 AM IST

ರಾಮನಗರ: ನಗರಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್​ ಅಭ್ಯರ್ಥಿಯೊಬ್ಬರು ಗುರುವಾರ ಕೊರೊನಾಗೆ ಬಲಿಯಾಗಿದ್ದರು. ಇಂದು ಫಲಿತಾಂಶ ಹೊರ ಬಂದಿದ್ದು, ಮೃತ ಅಭ್ಯರ್ಥಿ ಬಹುಮತದೊಂದಿಗೆ ಗೆಲುವು ಸಾಧಿಸಿದ್ದಾರೆ.

Ramanagar
ಕೋವಿಡ್​ಗೆ ಬಲಿಯಾದ ಅಭ್ಯರ್ಥಿ ಭರ್ಜರಿ ಗೆಲುವು

ನಗರಸಭೆಯ 4ನೇ ವಾರ್ಡ್​ನಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಲೀಲಾ ಗೋವಿಂದರಾಜುಗೆ ಇತ್ತೀಚೆಗೆ ಸೋಂಕು ಕಾಣಿಸಿಕೊಂಡಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಇಂದು ರಾಮನಗರ ನಗರಸಭೆ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, 4ನೇ ವಾರ್ಡ್​ನ 1,144 ಮತಗಳ ಪೈಕಿ 914 ಮತಗಳೊಂದಿಗೆ ಮೃತ ಲೀಲಾ ಗೋವಿಂದರಾಜು ಗೆಲುವು ಸಾಧಿಸಿದ್ದಾರೆ.

ಓದಿ: ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್​ ಅಭ್ಯರ್ಥಿಯನ್ನು ಬಲಿ ತೆಗೆದುಕೊಂಡ ಡೆಡ್ಲಿ ವೈರಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.