ರಾಮನಗರ : ಚನ್ನಪಟ್ಟಣ ತಾಲೂಕಿನ ಗುಡಿಸರಗೂರು ಗ್ರಾಮದಲ್ಲಿ ಇತ್ತೀಚಿಗೆ ನಡೆದ ಬಸವೇಶ್ವರ ಕೊಂಡ ಮಹೋತ್ಸವದ ವೇಳೆ ಕೊಂಡಕ್ಕೆ ಬಿದ್ದಿದ್ದ ಅರ್ಚಕರು ನಿಧನರಾಗಿದ್ದಾರೆ.
ದೊಡ್ಡಸ್ವಾಮಪ್ಪ (55) ಮೃತ ಅರ್ಚಕ. ಇತ್ತೀಚೆಗೆ ಐತಿಹಾಸಿಕ ತಾಲೂಕಿನ ಅತಿದೊಡ್ಡ ಬಸವೇಶ್ವರ ಕೊಂಡ ಮಹೋತ್ಸವದ ವೇಳೆ ಆಯತಪ್ಪಿ ಕೊಂಡಕ್ಕೆ ಬಿದ್ದ ಅರ್ಚಕರು ಗಂಭೀರವಾಗಿ ಗಾಯಗೊಂಡಿದ್ದರು. 21 ಬಾರಿ ಕೊಂಡ ಹಾಯ್ದಿರುವ ಪೂಜಾರಪ್ಪ ಕೊನೆಯ ಎರಡು ಹೆಜ್ಜೆ ಇಡುವಾಗ ಆಯತಪ್ಪಿ ಕೊಂಡದೊಳಗೆ ಬಿದ್ದಿದ್ದರು.
ಕೂಡಲೇ ಪೂಜಾರಪ್ಪರವರನ್ನ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲದೆ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆಗೆ ಸ್ಪಂದಿಸದ ಅರ್ಚಕರು ಇಂದು ಮೃತರಾಗಿದ್ದಾರೆ. ಮೃತರ ಅಂತ್ಯ ಕ್ರಿಯೆ ಸ್ವಗ್ರಾಮ ಗುಡಿಸರಗೂರಿನಲ್ಲಿ ಜರುಗಲಿದೆ.