ETV Bharat / state

ರೌಡಿ ಶೀಟರ್ ಸಂತೋಷ್​ ಮೃತ ದೇಹ ಮಾಗಡಿಯಲ್ಲಿ ಪತ್ತೆ.. ಪ್ರತಿಕಾರದ ಹತ್ಯೆ ಶಂಕೆ - Rowdysheeter Santhosh dead body

ರಾಮನಗರದ ಮಾಗಡಿಯಲ್ಲಿ ರೌಡಿಶೀಟರ್ ಸಂತೋಷ್ ಮೃತ ದೇಹ ಪತ್ತೆಯಾಗಿದೆ.

Rowdy sheeter Santhosh
ಮೃತ ರೌಡಿ ಶೀಟರ್ ಸಂತೋಷ್
author img

By

Published : May 23, 2023, 2:41 PM IST

ರಾಮನಗರ: ರೌಡಿ ಶೀಟರ್ ಬರ್ಬರವಾಗಿ ಕೊಂದು ಮೃತದೇಹವನ್ನು ದುಷ್ಕರ್ಮಿಗಳು ಬಿಸಾಕಿ ಹೋಗಿರುವ ಘಟನೆ ಮಾಗಡಿಯಲ್ಲಿ ನಡೆದಿದೆ. ರಾಮನಗರ ‌ಜಿಲ್ಲೆ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಕೆರೆ ಬಳಿ ಮೃತ ದೇಹ ಪತ್ತೆಯಾಗಿದ್ದು, ಬೆಂಗಳೂರಿನ ಯಲಹಂಕ ನಿವಾಸಿ ಸಂತೋಷ್ (35) ಮೃತ ರೌಡಿಶೀಟರ್ ಎಂದು ಗುರುತಿಸಲಾಗಿದೆ.

ಸಂತೋಷ್ ಬೆಂಗಳೂರು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ಎಂದು ಹೇಳಲಾಗುತ್ತಿದೆ. ಈತ ಈ ಹಿಂದೆ ಕೊಲೆ ಮಾಡಿ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಹೊರ ಬಂದಿದ್ದ ಎನ್ನಲಾಗಿದೆ. ಆ ಕೊಲೆಗೆ ಪ್ರತಿಕಾರವಾಗಿ ಸಂತೋಷ್​ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತನ ಶವವನ್ನು ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ರೌಡಿಶೀಟರ್ ಕಾರ್ತಿಕ್ ಹಲಸೂರು ಹತ್ಯೆ: ಚುನಾವಣೆ ಸಮಯದಲ್ಲಿ ಗಡಿಪಾರು ಆದೇಶ ನೀಡಲಾಗಿದ್ದ ರೌಡಿಶೀಟರ್​ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಹಲಸೂರಿನ‌ ಜೋಗುಪಾಳ್ಯ ಮುಖ್ಯ ರಸ್ತೆಯಲ್ಲಿ ನಡೆದಿತ್ತು. ಕಾರ್ತಿಕ್ ಹಲಸೂರು ಎಂಬ ರೌಡಿ ಶೀಟರ್ ಕೊಲೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏಪ್ರಿಲ್​ 11ರ ಸಂಜೆ 6 ಗಂಟೆಯ ಸಮಯದಲ್ಲಿ ಹಲಸೂರಿನ‌ ಜೋಗುಪಾಳ್ಯ ಮುಖ್ಯರಸ್ತೆಯಲ್ಲಿ ಕಾರ್ತಿಕ್ ನಡೆದುಕೊಂಡು ಬರುತ್ತಿದ್ದ. ಈ ವೇಳೆ ಮಾರಕಾಸ್ತ್ರಗಳೊಂದಿಗೆ ಬಂದ ಹಂತಕರು ಏಕಾಏಕಿ ಮೇಲೆರಗಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಕಾರ್ತಿಕ್ ಪಕ್ಕದಲ್ಲೇ ಇದ್ದ ಗಲ್ಲಿಯಲ್ಲಿ ಓಡಿ ಹೋಗಿದ್ದ. ಹಿಮ್ಮೆಟ್ಟಿ ಬಂದ ಹಂತಕರು ಗುರುತು ಸಿಗದಂತೆ ಕೊಚ್ಚಿ ಕೊಲೆ ಮಾಡಿದ್ದರು. ಕೊಲೆಯಾದ ಈ ರೌಡಿ ಶೀಟರ್​ ಮೇಲೆ ಅತ್ಯಾಚಾರ, ಕೊಲೆ, ಡಕಾಯಿತಿ ಸೇರಿದಂತೆ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 11 ಪ್ರಕರಣಗಳು ದಾಖಲಾಗಿದ್ದವು.

ಇದನ್ನೂ ಓದಿ: ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್​ ಬರ್ಬರ​​ ಹತ್ಯೆ

ಹುಬ್ಬಳ್ಳಿಯಲ್ಲಿ ರೌಡಿಶೀಟರ್​ ಹತ್ಯೆ: ಮನೆಗೆ ಹೋಗುತ್ತಿದ್ದ ರೌಡಿಶೀಟರೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ಅರವಿಂದನಗರದ ಪಿಎನ್​​ಟಿ ಕ್ವಾಟರ್ಸ್ ಹಿಂದಿನ ರಸ್ತೆಯಲ್ಲಿ ನಡೆದಿತ್ತು. ತೊರವಿಹಕ್ಕಲದ ನಿವಾಸಿಯಾಗಿದ್ದ ಅಕ್ಬರ ಅಲ್ಲಾಭಕ್ಷ್ಯ ಮುಲ್ಲಾ ಹತ್ಯೆಯಾದ ರೌಡಿಶೀಟರ್.

ಹುಬ್ಬಳ್ಳಿಯ ಹೊಸೂರಿನಲ್ಲಿದ್ದ ಅಕ್ಬರ್ ಹಲವು ವರ್ಷಗಳ ಹಿಂದೆ ಅರವಿಂದನಗರದ ಬಳಿ ಮನೆ ಮಾಡಿಕೊಂಡಿದ್ದ, ಮುಖ ಗುರುತು ಸಿಗದಂತೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಶಿರಡಿನಗರದ ರಮೇಶ ನೀರಗಟ್ಟಿ ಹಾಗೂ ಇಂದಿರಾನಗರದ ನವೀನ್ ಎಂಬುವವರೊಂದಿಗೆ ಕುಡಿದು ನಂತರ ಮನೆಗೆ ಬರುವಾಗ ಆತನನ್ನು ಕೊಲೆ ಮಾಡಿದ್ದೇನೆ ಎಂದು ಸದಾನಂದ ಬುರ್ಲಿ ಎಂಬಾತ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಗೆ ಶರಣಾಗಿದ್ದನು.

ಇದನ್ನೂ ಓದಿ: ದಾವಣಗೆರೆ: ಆಸ್ತಿ ವಿಚಾರಕ್ಕೆ ಅಕ್ಕನನ್ನೇ ಹತ್ಯೆ ಮಾಡಿದ ತಮ್ಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.