ರಾಮನಗರ: ಒಂದು ವಾರದಿಂದ ಎಡೆಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರೇಷ್ಮೆನಗರಿ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿರುವ ಕಣ್ವ ಜಲಾಶಯ ಸುಮಾರು ಎರಡು ದಶಕಗಳ ನಂತರ ಉಕ್ಕಿ ಹರಿಯುತ್ತಿದೆ. ರಭಸದಿಂದ ಹರಿಯುತ್ತಿರುವ ನೀರಿನಿಂದಾಗಿ ನದಿ ದಡದಲ್ಲಿ ಹೂಳಲಾಗಿದ್ದ ಹೆಣಗಳು ಮೇಲೆದ್ದು ತೇಲುತ್ತಿವೆ.
ಧಾರಾಕಾರ ಮಳೆಯಿಂದ ಚನ್ನಪಟ್ಟಣದ ಬಹುತೇಕ ಎಲ್ಲ ಕೆರೆಗಳು ತುಂಬಿ ಹರಿಯುತ್ತಿವೆ. ಈ ಮಧ್ಯೆ ಹುಣಸನಹಳ್ಳಿ, ಕೊಂಡಾಪುರ ಮಧ್ಯೆ ಹಲವು ಹೆಣಗಳು ತೇಲಿಕೊಂಡು ಬರುತ್ತಿದೆ. ಹಲವು ಗ್ರಾಮಗಳಲ್ಲಿ ಸ್ಮಶಾನವಿಲ್ಲದ ಕಾರಣದಿಂದ, ನದಿ ದಡದಲ್ಲಿ ಹೂತಿಟ್ಟ ಶವಗಳು ನೀರಿನ ರಭಸಕ್ಕೆ ಮೇಲೆ ಬರುತ್ತಿವೆ ಎನ್ನಲಾಗುತ್ತಿದೆ.
ಕಣ್ವ ಜಲಾಶಯ (Kanwa Reservoir) ಸದ್ಯ 30 ಅಡಿಗಳಾಗಿದ್ದು, ಜಲಾಶಯದ ನೀರಿನ ಮಟ್ಟ 28 ಅಡಿ ಇದೆ. ಈ ಹಿನ್ನೆಲೆಯಲ್ಲಿ ನೀರನ್ನು ಹೊರಬಿಡಲಾಗಿದ್ದು, ವಿರುಪಾಕ್ಷಿಪುರ ಹೋಬಳಿ ಭಾಗದ ಸಾದರಹಳ್ಳಿ, ಹುಣಸನಗಳ್ಳಿ, ಕೊಂಡಾಪುರ, ಮಾದಾಪುರ, ಬಾಣಗಹಳ್ಳಿ, ಅಂಬಾಡಹಳ್ಳಿ, ನೆಲಮಾಕನಹಳ್ಳಿ, ಸಾಮಂದಿಪುರ ಸರಹದ್ದಿನಲ್ಲಿ ಕೆರೆಗಳು ತುಂಬಿ ಮೈದುಂಬಿ ಹರಿಯುತ್ತಿದೆ.
ಎರಡು ದಶಕಗಳ ನಂತರ ಕಣ್ವ ಜಲಾಶಯ ತುಂಬುತ್ತಿದೆ. ಇದಲ್ಲದೇ ಜಲಾಶಯದ ಅಚ್ಚು ಕಟ್ಟು ಪ್ರದೇಶಗಳಲ್ಲಿ ಗ್ರಾಮಗಳು ಎಚ್ಚರಿಕೆಯಿಂದ ಇರುವಂತೆ ತಾಲೂಕು ಆಡಳಿತ ಎಚ್ಚರಿಕೆ ಕೂಡ ನೀಡಿದೆ.
ಇದನ್ನೂ ಓದಿ:ಕೇರಳದಲ್ಲಿ ನಿಲ್ಲದ ಕೋವಿಡ್ ಆರ್ಭಟ.. ದೇಶದಲ್ಲಿ 1.5 ವರ್ಷದ ಬಳಿಕ ಅತ್ಯಂತ ಕಡಿಮೆ ಪ್ರಕರಣ ದಾಖಲು