ETV Bharat / state

ಪೋಷಕರ ವಿರೋಧದ ಮಧ್ಯೆ ಮಗಳ ಪ್ರೇಮ ವಿವಾಹ.. ರಾಮನಗರದಲ್ಲಿ ಅಪ್ಪ-ಅಮ್ಮ ಆತ್ಮಹತ್ಯೆ! - ರಾಮನಗರ ಅಪರಾಧ ಸುದ್ದಿ,

ಪೋಷಕರ ವಿರೋಧದ ಮಧ್ಯೆಯೂ ಮಗಳೊಬ್ಬಳು ಪ್ರೇಮ ವಿವಾಹ ಮಾಡಿಕೊಂಡಿದ್ದರಿಂದ ದುರಂತವೇ ನಡೆದೋಗಿದೆ. ಇದನ್ನು ತಿಳಿದ ತಂದೆ-ತಾಯಿ ಇಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

parents committed suicide, parents committed suicide in Ramanagar, Ramanagar news, Ramanagar crime news, ಪೋಷಕರು ಆತ್ಮಹತ್ಯೆ, ರಾಮನಗರದಲ್ಲಿ ಪೋಷಕರು ಆತ್ಮಹತ್ಯೆ, ರಾಮನಗರ ಸುದ್ದಿ, ರಾಮನಗರ ಅಪರಾಧ ಸುದ್ದಿ,
ಆತ್ಮಹತ್ಯೆಗೆ ಶರಣಾದ ತಂದೆ-ತಾಯಿ
author img

By

Published : Jun 1, 2021, 3:02 PM IST

ರಾಮನಗರ : ತಮ್ಮ ವಿರೋಧ ನಡುವೆ ಪ್ರೀತಿಸಿದ ಯುವಕನನ್ನ ಮದುವೆಯಾಗಿದ್ದಾಳೆಂಬ ಕಾರಣಕ್ಕೆ ಬೇಸತ್ತ ಅಪ್ಪ-ಅಮ್ಮ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಚನ್ನಪಟ್ಟಣ ತಾಲೂಕಿನ ಗ್ರಾಮವೊಂದರಲ್ಲಿ ಮಾಜಿ ಅಧ್ಯಕ್ಷ ಮತ್ತು ಆತನ ಪತ್ನಿ ಆತ್ಮಹತ್ಯೆಗೆ ಶರಣಾದವರು. ಈ ದಂಪತಿಯ ಮಗಳು ಅದೇ ಗ್ರಾಮದ ಆಟೋ ಡ್ರೈವರ್ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ದಳು. ಪ್ರೀತಿಯ ವಿಷಯ ಪೋಷಕರಿಗೆ ತಿಳಿದು ಹಲವು ಭಾರಿ ರಾಜಿ ಸಂಧಾನ ಕೂಡ ನಡೆಸಲಾಗಿತ್ತು. ಕಳೆದ ಮೂರು ದಿನಗಳ ಹಿಂದೆ ಈ ಪೋಷಕರ ಮಗಳು ಮನೆ ಬಿಟ್ಟು ಓಡಿ ಹೋಗಿದ್ದಳು ಎನ್ನಲಾಗ್ತಿದೆ.

ಸೋಮವಾರ ರಾತ್ರಿ ಆಟೋ ಡ್ರೈವರ್ ಜೊತೆ ಯುವತಿ ಮದುವೆಯಾಗಿದ್ದು, ವಿವಾಹದ ಫೋಟೋವೊಂದನ್ನ ವಾಟ್ಸಾಪ್​ ಮೂಲಕ‌ ಪೋಷಕರಿಗೆ ಕಳುಹಿಸಿದ್ದಾಳೆ. ವಿರೋಧದ ಮಧ್ಯೆಯೂ ಆಟೋ ಡ್ರೈವರ್​ನನ್ನು ಮದುವೆ ಮಾಡಿಕೊಂಡಿರುವುದರಿಂದ ಪೋಷಕರು ಮನಸ್ತಾಪಕ್ಕೆ ಗುರಿಯಾಗಿದ್ದಾರೆ.

ಈ ವಿಷಯನ್ನು ಅರಗಿಸಿಕೊಳ್ಳದ ದಂಪತಿ ಬೆಳ್ಳಂಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಗ್ರಾಮಸ್ಥರ ಮಾತಾಗಿದೆ. ಆದ್ರೆ ಈ ಘಟನೆ ಬಗ್ಗೆ ಯಾವುದೇ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.