ರಾಮನಗರ : ತಾಲೂಕಿನ ಬೈರವನದೊಡ್ಡಿ ಸಮೀಪದ ತೋಟದ ಮನೆಯಲ್ಲಿ ಫೆಬ್ರವರಿ 25ರ ಶುಕ್ರವಾರ ರಾತ್ರಿ ನಡೆದಿದ್ದ ಕಾಂಗ್ರೆಸ್ ಮುಖಂಡ ಗಂಟಪ್ಪ (55) ಹತ್ಯೆ ಪ್ರಕರಣವನ್ನು ಒಂದೂವರೆ ತಿಂಗಳ ಬಳಿಕ ಪೊಲೀಸರು ಬೇಧಿಸಿದ್ದಾರೆ. ಮಾವ ಗಂಟಪ್ಪ ಹತ್ಯೆಗೆ ಸೊಸೆ ಚೈತ್ರಾ ಸುಪಾರಿ ನೀಡಿರುವುದಾಗಿ ತಿಳಿದು ಬಂದಿದೆ.
ಓದಿ: ಹೊಟ್ಟೆ ಹಾಗೂ ತಲೆಗೆ ಡ್ರ್ಯಾಗನ್‍ನಿಂದ ಚುಚ್ಚಿ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ
ಆಸ್ತಿಯಲ್ಲಿ ಪಾಲು ಕೊಟ್ಟಿಲ್ಲ ಎಂದು ಮಾವನ ಹತ್ಯೆಗೆ ಪ್ರಿಯತಮ ನವೀನ್ಗೆ ಚೈತ್ರಾ ಸುಪಾರಿ ನೀಡಿದ್ದಾಳೆ. ಕನಕಪುರ ತಾಲೂಕಿನ ಸೊಂಟನಹಳ್ಳಿ ನಿವಾಸಿ ನವೀನ್ ಎಂಬಾತನಿಗೆ ಸುಪಾರಿ ನೀಡಿ ಹತ್ಯೆ ಮಾಡಿಸಲಾಗಿದೆ ಎಂದು ತನಿಖೆ ಮೂಲಕ ತಿಳಿದು ಬಂದಿದೆ.
ಓದಿ: ಗಂಡ-ಹೆಂಡ್ತಿ ವೈವಾಹಿಕ ಬಿರುಕು: 3 ತಿಂಗಳ ಕಂದಮ್ಮನ ಕೊಂದ ತಾಯಿ
ಈ ಹಿಂದೆ ನವೀನ್ ಹಾಗೂ ಚೈತ್ರ ಪ್ರೀತಿಸುತ್ತಿದ್ದರು. ಬಳಿಕ ಗಂಟಪ್ಪನ ಮಗ ನಂದೀಶ್ನನ್ನು ಮದುವೆಯಾಗಿದ್ದಳು. ಬಿಡದಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಾನಂದೂರು ನಿವಾಸಿಯಾದ ಗಂಟಪ್ಪ ತಮ್ಮ ತೋಟದಲ್ಲಿ ಬೈಕ್ ಸರ್ವೀಸ್ ಸ್ಟೇಷನ್ ನಡೆಸುತ್ತಿದ್ದರು. ಫೆ.25ರ ರಾತ್ರಿ ಗಂಟಪ್ಪ ಬರ್ಬರವಾಗಿ ಕೊಲೆಯಾಗಿದ್ದರು.