ETV Bharat / state

ರೇಷ್ಮೆ ನಗರಿಯಲ್ಲಿ ಕ್ರಷರ್​ಗಳ ಆರ್ಭಟಕ್ಕೆ ಹೈರಾಣಾದ ಸ್ಥಳೀಯರು - Crusher Mafia

ಜಿಲ್ಲೆಯಲ್ಲಿ ನಾಯಿಕೊಡೆಗಳಂತೆ ಗಣಿಗಾರಿಕೆ ಕೇಂದ್ರಗಳು ತಲೆ ಎತ್ತುತ್ತಿವೆ. ಅದರಲ್ಲೂ ಅಕ್ರಮ ಗಣಿಗಾರಿಕೆಗಳಿಗೆ‌ ಇಲ್ಲಿ ಲೆಕ್ಕವೇ ಇಲ್ಲದಾಗಿದೆ. ಹೀಗಾಗಿ ಗಣಿ ಪ್ರದೇಶಗಳ ಸುತ್ತಲಿನ ಗ್ರಾಮಗಳಲ್ಲಿ ಕರ್ಕಶ ಶಬ್ದ, ಲಾರಿಗಳ ಓಡಾಟದಿಂದಾಗಿ ಜನರು ಕಂಗೆಟ್ಟು ಹೋಗಿದ್ದಾರೆ.

crusher-mafia-in-ramanagara-news
ರೇಷ್ಮೆನಗರಿಯಲ್ಲಿ ಕ್ರಷರ್ ಮಾಫಿಯಾ ಆರ್ಭಟ
author img

By

Published : Jan 29, 2021, 8:14 PM IST

ರಾಮನಗರ: ಯಾವುದೇ ಕ್ರಷರ್‌ಗಳಲ್ಲಿ ಸ್ಫೋಟಕ ಸಾಮಾಗ್ರಿ ಸಂಗ್ರಹ ಮಾಡಬೇಕಾದರೆ, ಕ್ವಾರಿಗಳಲ್ಲಿ ಸ್ಫೋಟಕ ಬಳಸುವುದಾದರೆ ಕಡ್ಡಾಯವಾಗಿ ಅನುಮತಿ ಇರಲೇಬೇಕು. ಸ್ಥಳೀಯ ಗ್ರಾಮಗಳಿಗೆ ಯಾವುದೇ ತೊಂದರೆ ಆಗಬಾರದು ಎಂಬ ಷರತ್ತು ಇದ್ದರೂ ಕೂಡ ಜಿಲ್ಲೆಯಲ್ಲಿ ಎಗ್ಗಿಲ್ಲದೇ ಚಟುವಟಿಕೆ ನಡೆಯುತ್ತಿದೆ.

ರೇಷ್ಮೆ ನಗರಿಯಲ್ಲಿ ಕ್ರಷರ್​ಗಳ ಆರ್ಭಟ

ಓದಿ: ಕೆಜಿಎಫ್​​ ಚಾಪ್ಟರ್​-2 ರಿಲೀಸ್​ಗೆ ಡೇಟ್​ ಫಿಕ್ಸ್: ಜುಲೈ 16ರಂದು ಚಿತ್ರ ಬಿಡುಗಡೆ

ರಾಮನಗರ ಜಿಲ್ಲೆಯಲ್ಲಿ ಲೆಕ್ಕಕ್ಕೆ ಸಿಗದಷ್ಟು ಕ್ರಷರ್‌ಗಳು ಕೆಲಸ ನಡೆಸುತ್ತಿವೆ. ಇತ್ತೀಚೆಗಷ್ಟೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರು ಸಹ ಜಿಲ್ಲೆಗೆ ಭೇಟಿ ನೀಡಿ, ಅಕ್ರಮ ಕ್ವಾರಿ, ಕ್ರಷರ್‌ಗಳಿಗೆ ಅಂಕುಶ ಹಾಕಲು ತೀರ್ಮಾನ ತೆಗೆದುಕೊಂಡರು. ಜಿಲ್ಲೆಯಲ್ಲಿನ ಕ್ರಷರ್‌ಗಳಲ್ಲಿ ಆಗಾಗ್ಗೆ ಸ್ಫೋಟದ ಸದ್ದು ಹೆಚ್ಚಿರುತ್ತದೆ. ಆದರೆ ಅನಾಹುತಗಳು ನಡೆದರೂ ಬೆಳಕಿಗೆ ಬರುವ ಪ್ರಕರಣಗಳು ಮಾತ್ರ ಕಡಿಮೆಯಾಗಿವೆ.

ಕಲ್ಲು ಗಣಿಗಾರಿಕೆ ಸಂದರ್ಭದಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳನ್ನು ಬಳಸುವುದು ಸಾಮಾನ್ಯವಾಗಿ ಬಿಟ್ಟಿದೆ. ಡಿಟೋನೇಟರ್​, ಜಿಲೆಟಿನ್, ಬ್ಲಾಸ್ಲಿಂಗ್ ಪೌಡರ್ ಮೊದಲಾದ ಬಗೆಯ ಸ್ಫೋಟಕ ಸಾಮಗ್ರಿಗಳನ್ನು ಎಲ್ಲಾ ಕ್ವಾರಿಗಳಲ್ಲಿ ಸಂಗ್ರಹ ಮಾಡಿ ಇಡಲಾಗುತ್ತದೆ. ಕೆಲವು ಕಡೆ ಅಗತ್ಯಕ್ಕಿಂತ ಹೆಚ್ಚು ಸಾಮಾಗ್ರಿಗಳ ಸಂಗ್ರಹವೂ ಕೂಡ ಇರುತ್ತದೆ. ಆದರೆ ಇದರ ಜವಾಬ್ದಾರಿ ನೋಡಿಕೊಳ್ಳುವವರು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ.‌ ಒಂದು ವೇಳೆ ಬಹುತೇಕ ಕ್ವಾರಿಗಳಲ್ಲಿನ ಕಾರ್ಮಿಕರು ಉತ್ತರ ಭಾರತದವರಾಗಿದ್ದು, ಅವಘಡಗಳಲ್ಲಿ ಸಾವಿಗೀಡಾದ ಸಂದರ್ಭ ಅವರಿಗೆ ಹೆಚ್ಚಿನ ಪರಿಹಾರದ ಆಮಿಷ ನೀಡಿ ಪ್ರಕರಣಗಳನ್ನು ಮುಚ್ಚಿ ಹಾಕಲಾಗುತ್ತದೆಂಬ ಆರೋಪವೂ ಇದೆ.

ಕೆಲವು ಕಡೆ ವಸತಿ ಪ್ರದೇಶಗಳಿಗೆ ಅತಿ ಸಮೀಪದಲ್ಲಿಯೇ ಗಣಿಗಾರಿಕೆ ಮತ್ತು ಸ್ಫೋಟಕಗಳು ಬಳಸುತ್ತಿದ್ದರೂ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಂಡಿಲ್ಲವಂತೆ. ಮಾಗಡಿ ಪಟ್ಟಣದ ಪಕ್ಕದಲ್ಲೇ ರಂಗನಾಥಸ್ವಾಮಿ ಸನ್ನಿಧಿ ಅನತಿ ದೂರದಲ್ಲಿ ಕಲ್ಲು ಗಣಿಗಾರಿಕೆ ನಿರಂತರವಾಗಿ ನಡೆದಿದೆ. ಇಲ್ಲಿನ ಸ್ಫೋಟಕಗಳ ತೀವ್ರತೆಗೆ ಸುತ್ತಲಿನ ಗ್ರಾಮಗಳ ಮನೆಗಳು ಬಿರುಕು ಬಿಟ್ಟಿವೆ. ಹೊರ ರಾಜ್ಯಗಳ ಗಡಿ ಭಾಗಗಳಿಂದ ಕಲ್ಲು ಗಣಿಗಾರಿಕೆಗಾಗಿ ಅಕ್ರಮವಾಗಿ ಸ್ಫೋಟಕ ಸಾಮಗ್ರಿಗಳನ್ನು ಸಾಗಿಸಲಾಗುತ್ತದೆ ಎಂಬ ಆರೋಪಗಳಿವೆ.

ಲಾರಿಗಳ ಆರ್ಭಟಕ್ಕೆ ಹಗಲಿನ ವೇಳೆಯಲ್ಲಿ ರಸ್ತೆ ಗಿಳಿಯಲು ವಾಹನ ಸವಾರರು ಹಾಗೂ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಡದಿ, ಮಾಗಡಿ, ಕನಕಪುರ ಭಾಗಗಳಲ್ಲಿ ಅತೀ ಹೆಚ್ಚಾಗಿ ಅಕ್ರಮ ಗಣಿಗಾರಿಕೆಗಳು ನಡೆಯುತ್ತಿರುವ ಆರೋಪ ಇದೆ. ಹೀಗಾಗಿ ಈ ಭಾಗಗಳಲ್ಲಿ ಹತ್ತಾರು ಗ್ರಾಮಗಳ ನಿವಾಸಿಗಳು ನಿತ್ಯವು ಕೂಡ ಧೂಳಿನ ನಡುವೆಯೇ ನರಕ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ಎಷ್ಟು ಕ್ವಾರಿಗಳಿವೆ ಗೊತ್ತಾ..?

ಜಿಲ್ಲೆಯಲ್ಲಿ ಅನುಮತಿ ಪಡೆದಿರುವ ಕ್ರಷರ್‌ಗಳು-53

ಸಕ್ರಿಯ ಕ್ರಷರ್‌ಗಳು-47

ನಿಷ್ಕ್ರಿಯ ಕ್ರಷರ್‌ಗಳು-06

ಜಿಲ್ಲೆಯಲ್ಲಿ ಗುತ್ತಿಗೆ ಪಡೆದಿರುವ ಕಲ್ಲು ಗಣಿಗಾರಿಕೆ ಕಂಪನಿಗಳು-110

ಚಾಲ್ತಿಯಲ್ಲಿ ಇರುವ ಕ್ವಾರಿಗಳು-65

ನಿಷ್ಕ್ರಿಯಗೊಂಡಿರುವ ಕ್ವಾರಿಗಳು-44

4 ತಾಲೂಕುಗಳು ಸೇರಿ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಗಣಿಗಾರಿಕೆಗಳು ನಡೆಯುತ್ತಿದ್ದವು. ಇದರಿಂದಾಗಿ ಕನಿಷ್ಠ 250ಕ್ಕೂ ಹೆಚ್ಚು ಗ್ರಾಮಗಳು ಗಣಿಗಾರಿಕೆಯ ಲಾರಿಗಳಿಗೆ ಬಲಿಯಾಗಿವೆ. ಇನ್ನು ಅನೇಕ ಗ್ರಾಮಗಳಲ್ಲಿನ ಮನೆಗಳು ಬಿರುಕು ಬಿಟ್ಟಿವೆ. ಯಾವಾಗ ಬೇಕಿದ್ದರೂ ಇರುವ ಸೂರುಗಳು ನೆಲಕಚ್ಚುವ ಆತಂಕ ಮನೆ ಮಾಡಿದೆ. ಜಿಲ್ಲೆಯಲ್ಲಿ ಗಣಿಗಾರಿಕೆ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿದ್ದು, ಹೆಚ್ಚು ಸ್ಫೋಟಕ ಬಳಸದಂತೆ ನಿಗಾ ವಹಿಸಲಾಗಿದೆ ಎನ್ನುತ್ತಾರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆಧಿಕಾರಿ ಸುಮಿತ್ರಾ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.