ETV Bharat / state

ನರೇಗಾ ಯೋಜನೆಯ ಬಹುಪಾಲು ಹಣ ಕನಕಪುರದವರ ಪಾಲು: ಡಿಕೆ ಬ್ರದರ್ಸ್​ ವಿರುದ್ಧ ಯೋಗೇಶ್ವರ್​ ಗರಂ - Ramanagara

ರಾಮನಗರ ಜಿಲ್ಲೆಯ ಚನ್ನಪಟ್ಟಣದ ತಾ.ಪಂ ಸಭಾಂಗಣದಲ್ಲಿ ನರೇಗಾ ಸಂಬಂಧ ಪಿಡಿಓಗಳ ಸಭೆ ನಡೆಸಿದ ಅವರು, ನರೇಗಾ ಯೋಜನೆಯ ಹಣವನ್ನು ಕನಕಪುರದವರು ಜಾಸ್ತಿ ಪಡೆಯುತ್ತಿದ್ದಾರೆ ಎಂದು ಸಿ.ಪಿ.ಯೋಗೇಶ್ವರ್ ಆರೋಪಿಸಿದರು.

Ramanagara
ಚನ್ನಪಟ್ಟಣದ ತಾ.ಪಂ ಸಭಾಂಗಣ
author img

By

Published : Aug 24, 2020, 9:13 PM IST

ರಾಮನಗರ: ತಾಲ್ಲೂಕಿನ ಅಭಿವೃದ್ಧಿಗೆ ಸರ್ಕಾರದಿಂದ ಹಣ ತಂದು ಕೆಲಸ ಮಾಡುತ್ತಾರೆ ಅದಕ್ಕೆ‌ ನನ್ನ ‌ಸಹಮತ ಕೂಡ ಇದೆ ಎಂದು ಹೆಚ್.ಡಿ.ಕೆ ಬಗ್ಗೆ ಮೃದು ಧೋರಣೆ ತಾಳಿದ್ದು, ಡಿ.ಕೆ ಬ್ರದರ್ಸ್ ವಿರುದ್ಧ ವಿಧಾನ ಪರಿಷತ್ತಿನ ಸದಸ್ಯ ಸಿ.ಪಿ.ಯೋಗೇಶ್ವರ್ ಆರೋಪಗಳ ಸುರಿಮಳೆ ಗೈದರು.

ಚನ್ನಪಟ್ಟಣದ ತಾ.ಪಂ ಸಭಾಂಗಣದಲ್ಲಿ ನರೇಗಾ ಸಂಬಂಧ ಪಿಡಿಓ ಗಳ ಸಭೆ ನಡೆಸಲಾಯಿತು.

ಜಿಲ್ಲೆಯ ಚನ್ನಪಟ್ಟಣದ ತಾ.ಪಂ ಸಭಾಂಗಣದಲ್ಲಿ ನರೇಗಾ ಸಂಬಂಧ ಪಿಡಿಓಗಳ ಸಭೆ ನಡೆಸಿದ ಅವರು, ನರೇಗಾ ಯೋಜನೆಯ ಹಣವನ್ನು ಕನಕಪುರದವರು ಜಾಸ್ತಿ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ ಜಿಲ್ಲಾಡಳಿತ ಕೂಡ ನರೇಗಾ ಅನುದಾನವನ್ನು ‌ಎಲ್ಲಾ ತಾಲ್ಲೂಕುಗಳಿಗೆ ಸಮರ್ಪಕವಾಗಿ ಹಂಚಬೇಕಿದೆ, ಇಲ್ಲವಾದರೆ ಇದರಿಂದ ಜಿಲ್ಲೆಯ 3 ತಾಲ್ಲೂಕುಗಳಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಅಧಿಕಾರಿಗಳು ಜಿಲ್ಲೆಗೆ ಸಮನಾಗಿ ಹಣ ಹಂಚಿಕೆ ಮಾಡಬೇಕು ಎಂದರು.

ಇನ್ನು ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುವ ಸಮಯಕ್ಕೆ 3 ತಾಲ್ಲೂಕಿನ ಗ್ರಾ.ಪಂ ಅಧಿಕಾರಿಗಳ ಸಭೆ ಕರೆಯುತ್ತಾರೆ ಈ ವೇಳೆ ಕನಕಪುರದವರು ಹಣವನ್ನು ಡ್ರಾ ಮಾಡಿಕೊಳ್ಳುತ್ತಾರೆ ಎಂದು ಸಂಸದ ಡಿ.ಕೆ.ಸುರೇಶ್ ಹೆಸರು ಹೇಳದೆ ಕುಟಿಕಿದರು.

ಇದೇ ವೇಳೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದ್ದು ಯಾವುದೇ ಯೋಜನೆಯ ಹಣ ಸರ್ಕಾರದ ಮಟ್ಟದಲ್ಲಿ ಸ್ಥಗಿತವಾಗಿದ್ದರೆ ಮಾಹಿತಿ‌ ನೀಡಿ ಹಣ ತರುವ ಕೆಲಸ‌ ಮಾಡಿ ಅಭಿವೃದ್ಧಿಗೆ ಕೈ ಜೋಡಿಸುತ್ತೇನೆ.‌ ಅದು ನನ್ನ ಕರ್ತವ್ಯ ಕೂಡ ಎಂದು ಸಿ.ಪಿ.ಯೋಗೇಶ್ವರ್ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.