ETV Bharat / state

ಕೋವಿಡ್ ಹಿನ್ನೆಲೆ ಭಕ್ತರಿಗೆ ದರ್ಶನ ನೀಡದ ಅಂಬೆಗಾಲು ಬಾಲಕೃಷ್ಣ - ಕಣ್ವ ನದಿ ತಟದಲ್ಲಿರುವ ಕಣ್ವ ಮಹರ್ಷಿಗಳಿಂದ ಪ್ರತಿಷ್ಟಾಪಿತ

ಕಣ್ವ ನದಿ ತಟದಲ್ಲಿರುವ ಕಣ್ವ ಮಹರ್ಷಿಗಳಿಂದ ಪ್ರತಿಷ್ಠಾಪಿತವಾಗಿ ಪೂಜಿಸಲ್ಪಟ್ಟ, ದೇಶದಲ್ಲೇ ವಿಶೇಷವಾಗಿರುವ ಅಂಬೆಗಾಲಲ್ಲಿ ಇರುವ ಶ್ರೀ‌ಕೃಷ್ಣ ಇರೋದು ಇದೊಂದೇ ದೇವಾಲಯದಲ್ಲಿ ಮಾತ್ರ ಎನ್ನಲಾಗಿದೆ. ಅಂಬೆಗಾಲು ಬಾಲಕೃಷ್ಣ ದೇವಾಲಯ ಕೋವಿಡ್ ಹಿನ್ನೆಲೆಯಲ್ಲಿ ತೆರೆಯದೆ ಇರೋದು ಭಕ್ತಾದಿಗಳಿಗೆ ಬೇಸರ ಮೂಡಿಸಿದೆ.

covid effect ambegalu sri krishna temple close
ಕೋವಿಡ್ ಹಿನ್ನೆಲೆ, ದರ್ಶನ ನೀಡದ ಅಂಬೆಗಾಲು ಶ್ರೀ ಕೃಷ್ಣ, ಭಕ್ತಗಣಕ್ಕೆ ನಿರಾಸೆ
author img

By

Published : Aug 12, 2020, 10:35 AM IST

Updated : Aug 12, 2020, 11:15 AM IST

ರಾಮನಗರ: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣನ ಆರಾಧಕರು ತಮ್ಮ ಮಕ್ಕಳಿಗೆ ಕೃಷ್ಣ, ರಾಧೆ ವೇಷಾಧಾರಿಗಳನ್ನಾಗಿಸಿ ದೇವಾಲಯಕ್ಕೆ ಭೇಟಿ ಕೊಟ್ಟು ದರ್ಶನ‌ ಪಡೆಯೋದು ಸರ್ವೇ ಸಾಮಾನ್ಯವಾಗಿತ್ತು. ಆದರೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸುಪ್ರಸಿದ್ಧ ಅಂಬೆಗಾಲು ಶ್ರೀಕೃಷ್ಣ ದೇವಾಲಯದ ಬಾಗಿಲು ತೆರೆಯದ ಕಾರಣ ಶ್ರೀಕೃಷ್ಣ ಭಕ್ತಗಣಕ್ಕೆ ನಿರಾಸೆಯಾಗಿದೆ.

ಕೋವಿಡ್ ಹಿನ್ನೆಲೆ ಭಕ್ತರಿಗೆ ದರ್ಶನ ನೀಡದ ಅಂಬೆಗಾಲು ಬಾಲಕೃಷ್ಣ

ಕಣ್ವ ನದಿ ತಟದಲ್ಲಿರುವ ಕಣ್ವ ಮಹರ್ಷಿಗಳಿಂದ ಪ್ರತಿಷ್ಠಾಪಿತವಾಗಿ ಪೂಜಿಸಲ್ಪಟ್ಟ, ದೇಶದಲ್ಲೇ ವಿಶೇಷವಾಗಿರುವ ಅಂಬೆಗಾಲಲ್ಲಿ ಇರುವ ಶ್ರೀ‌ಕೃಷ್ಣ ಇರೋದು ಇದೊಂದೇ ದೇವಾಲಯದಲ್ಲಿ ಮಾತ್ರ ಎನ್ನಲಾಗಿದೆ. ಅಂಬೆಗಾಲು ಬಾಲಕೃಷ್ಣ ದೇವಾಲಯ ಕೋವಿಡ್ ಹಿನ್ನೆಲೆಯಲ್ಲಿ ತೆರೆಯದೆ ಇರೋದು ಭಕ್ತಾದಿಗಳಿಗೆ ಬೇಸರ ಮೂಡಿಸಿದೆ. ನಿನ್ನೆ ಬೆಳಗ್ಗಿನಿಂದ ದೇವರ ದರ್ಶನಕ್ಕೆ ಬಂದ ಭಕ್ತರು ಬಾಗಿಲಲ್ಲೇ ಕೈ ಮುಗಿದು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಶ್ರಾವಣ ಮಾಸದಲ್ಲಿ ಬರುವ ಶ್ರೀಕೃಷ್ಣ ಜನ್ಮಾಷ್ಟಮಿಯಂದು ದೇವಾಲಯಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿ ಹರಕೆ ಕಟ್ಟಿದರೆ ಸಂಕಷ್ಟ ಪರಿಹಾರವಾಗಿತ್ತೆ ಹಾಗೂ ಮಕ್ಕಳಿಲ್ಲದವರು ಇಲ್ಲಿಗೆ ಭೇಟಿ ನೀಡಿ ತೊಟ್ಟಿಲು ಹರಕೆ ಕಟ್ಟಿದರೆ ಮಕ್ಕಳಾಗುತ್ತವೆ ಎನ್ನುವ ನಂಬಿಕೆ ಇದೆ. ಅಲ್ಲದೆ ಇಲ್ಲಿಗೆ ಹರಕೆ‌ ಫಲಿಸಿದ ಬಳಿಕ ದೇಶ-ವಿದೇಶಗಳಿಂದ ಆಗಮಿಸುವ ಭಕ್ತರು ಹರಕೆ ತೀರಿಸೋದು ಇಲ್ಲಿನ ವಾಡಿಕೆಯಾಗಿದೆ.

Last Updated : Aug 12, 2020, 11:15 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.