ರಾಮನಗರ : ರಾಮನಗರ ಜಿಲ್ಲೆಯಲ್ಲೂ ಕೊರೊನಾ ವೈರಸ್ ಸೋಂಕು ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜರ್ಮನಿಯಿಂದ ಬಂದಿದ್ದ ಯುವತಿ ಮತ್ತು ಆಕೆಯ ಪೋಷಕರನ್ನ ತಪಾಸಣೆಗೆ ಒಳಪಡಿಸಲಾಗಿದೆ.
ಚನ್ನಪಟ್ಟಣ ಮೂಲದ ಮೂವರು ಯುವತಿಯರ ರಕ್ತ ಮತ್ತು ಗಂಟಲು ಕಫ ಪರೀಕ್ಷೆಗೆ ಕಳುಹಿಸಲಾಗಿದೆ. ಯುವತಿ ಜರ್ಮನಿಯಿಂದ ರಾಮನಗರಕ್ಕೆ ಆಗಮಿಸಿದ್ದು, ಯುವತಿಯ ತಂದೆ ತಾಯಿಯ ರಕ್ತ ಮತ್ತು ಗಂಟಲು ಕಫ ಮಾದರಿ ಸಹ ಸಂಗ್ರಹ ಮಾಡಲಾಗಿದೆ. ಸಂಗ್ರಹಿಸಲಾದ ಸ್ಯಾಂಪಲ್ ಅನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.
ಇದೇ ವೇಳೆ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿರುವ ಜಿಲ್ಲಾ ಆರೋಗ್ಯಾಧಿಕಾರಿಗಳು ಮೂವರ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.