ರಾಮನಗರ: ಚನ್ನಪಟ್ಟಣ ತಾಲೂಕಿನಲ್ಲಿ ಜನರಿಗೆ ಮನೆ ಕಟ್ಟಲು ಆಗುತ್ತಿಲ್ಲ. ನಮ್ಮ ಸರ್ಕಾರ ಇದ್ದರೂ ಸಹ ಸೌಲಭ್ಯ ಸಿಗ್ತಿಲ್ಲ, ನನಗೆ ವಾಸ್ತವ ಸ್ಥಿತಿ ಗೊತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿತ್ತು. ಕಾಂಗ್ರೆಸ್-ಜೆಡಿಎಸ್‌ನಿಂದ 50ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡರು.
'ನಾನು ಸೋತ ನಂತರ ಇದುವರೆಗೂ ಕೂಡ ಸಮಾಧಾನದಿಂದ ಇದ್ದೆ. ಕ್ಷೇತ್ರದ ಜನತೆ ಒಳ್ಳೆಯವರನ್ನು ಆಯ್ಕೆ ಮಾಡಿಕೊಂಡಿದ್ದಾರೆಂದು ತಿಳಿದಿದ್ದೆ. ಎರಡು ಬಾರಿ ಸಿಎಂ ಆದವರನ್ನು ಆಯ್ಕೆ ಮಾಡಿದ್ದಾರೆ ಅಂದುಕೊಂಡಿದ್ದೆ. ಆದರೆ ಕುಮಾರಸ್ವಾಮಿ ಕ್ಷೇತ್ರದಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿಲ್ಲ. ಈಗ ಜಲಧಾರೆ ಅಂದುಕೊಂಡು ಹೊರಟಿದ್ದಾರೆ' ಎಂದರು.
ಇದನ್ನೂ ಓದಿ: ಹಳೇ ಹುಬ್ಬಳ್ಳಿ ಗಲಭೆ: ಎಐಎಂಐಎಂ ಪಕ್ಷದ ನಗರ ಘಟಕ ಅಧ್ಯಕ್ಷನ ಬಂಧನ