ETV Bharat / state

ಅಪಘಾತದಿಂದ ಕೊಲೆ ಪ್ರಕರಣ ಬೆಳಕಿಗೆ : ರಾಮನಗರದಲ್ಲಿ ಬೈಕ್​ನಲ್ಲಿ ಶವ ಸಾಗಿಸುತ್ತಿದ್ದವರು ಸೇರಿ ನಾಲ್ವರ ಬಂಧನ - ರಾಮನಗರ ಲೇಟೆಸ್ಟ್​​ ಕ್ರೈಂ ನ್ಯೂಸ್​​

ಬೆಂಗಳೂರಿನಲ್ಲಿ ಮಹಿಳೆಯನ್ನು ಕೊಲೆ ಮಾಡಿ ಬೈಕ್‌ನಲ್ಲಿ ರಾಮನಗರದ ಕಡೆ ಶವ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದ್ದು, ಆಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

bike-accident-revivals-mystery-of-murder-case
ರಾಮನಗರಅಪಘಾತದಿಂದ ಕೊಲೆ ಪ್ರಕರಣ ಬೆಳಕಿಗೆ
author img

By

Published : May 11, 2022, 2:30 PM IST

Updated : May 12, 2022, 6:58 PM IST

ರಾಮನಗರ : ಬೆಂಗಳೂರಿನಲ್ಲಿ ಮಹಿಳೆಯನ್ನು ಕೊಲೆ ಮಾಡಿ ಬೈಕ್‌ನಲ್ಲಿ ರಾಮನಗರದ ಕಡೆ ಶವ ಸಾಗಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ತಡರಾತ್ರಿ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಇಲ್ಲಿನ ಜಿಲ್ಲಾ ಕಾರಾಗೃಹ ಕಚೇರಿ ಬಳಿ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದ್ದು, ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಅಪಘಾತ ಸ್ಥಳದಲ್ಲಿ‌ ಮಹಿಳೆಯ ಶವ ಪತ್ತೆಯಾಗಿದೆ. ಅಪಘಾತ ಸಂಭವಿಸಿದಾಗ ಮಹಿಳೆ ಬೈಕ್​ನಿಂದ ಬಿದ್ದು ಸಾವನಪ್ಪಿದ್ದಾಳೆ ಎಂದು ಆರೋಪಿಗಳು ಪೊಲೀಸರೆದುರು ಕಥೆ ಕಟ್ಟಿದ್ದರು. ಆದರೆ ಅನುಮಾನಗೊಂಡ ಪೊಲೀಸರು ಮಹಿಳೆ ಶವವನ್ನು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ನಿವಾಸಿ ಸೌಮ್ಯ ಕೊಲೆಯಾದವಳು. ಆರೋಪಿಗಳಾದ ದುರ್ಗಾ, ರಘು, ವಿನೋದ್, ನಾಗರಾಜುನನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಅಭಿ ಎಂಬುವನಿಗಾಗಿ ಹುಡುಕಾಟ ಮುಂದುವರೆದಿದೆ.

ರಾಮನಗರದಲ್ಲಿ ಬೈಕ್​ನಲ್ಲಿ ಶವ ಸಾಗಿಸುತ್ತಿದ್ದವರು ಸೇರಿ ನಾಲ್ವರ ಬಂಧನ

ಏನಿದು ಪ್ರಕರಣ?: ಮೃತ ಸೌಮ್ಯ ಮತ್ತು ದುರ್ಗಾ ಇಬ್ಬರು ಸ್ನೇಹಿತೆಯರು. ಕಳೆದ ಆರು ತಿಂಗಳಿನಿಂದ ಸೌಮ್ಯ, ದುರ್ಗಾಳ ಮನೆಯಲ್ಲಿ ಉಳಿದುಕೊಂಡಿದ್ದಳು. ದುರ್ಗಾ ಮದುವೆ ಛತ್ರದಲ್ಲಿ ಕೆಲಸ ಮಾಡುತ್ತಿದ್ದರೆ. ಮೃತ ಸೌಮ್ಯ ಕೂಲಿ ಕೆಲಸ ಮಾಡುತ್ತಿದ್ದಳು.

ಆದರೆ ಸೌಮ್ಯ ಕೆಲದಿನಗಳ ಹಿಂದೆ ದುರ್ಗಾಳ ಮನೆಯಲ್ಲೇ ಹಣ ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ್ದಳು. ಜೊತೆಗೆ ಬೇರೆಯವರ ಬಳಿ ಸಾಲ ಮಾಡಿಕೊಂಡಿದ್ದಳು. ಸಾಲ ನೀಡಿದ್ದವರು ವಸೂಲಿಗೆ ದುರ್ಗಾಳ ಮನೆಗೆ ಬರುತ್ತಿದ್ದರು. ತನ್ನ ಮನೆಯಲ್ಲೇ ಕಳ್ಳತನ ಹಾಗೂ ಸಾಲಗಾರರ ಕಾಟಕ್ಕೆ ಕೋಪಗೊಂಡ ದುರ್ಗಾ, ಸೋಮವಾರ ದಿನಪೂರ್ತಿ ಸೌಮ್ಯಳಿಗೆ ಬಡಿಗೆಯಿಂದ ಹೊಡೆದಿದ್ದಾಳೆ. ಅಂದು ರಾತ್ರಿ ವೇಳೆಗೆ ಮನೆಯಲ್ಲೇ ಸೌಮ್ಯ ತೀವ್ರ ಗಾಯದಿಂದ ಸಾವನ್ನಪ್ಪಿದ್ದಾಳೆ ಎಂದು ರಾಮನಗರ ಎಸ್​ಪಿ ಸಂತೋಷ್ ಬಾಬು ತಿಳಿಸಿದ್ದಾರೆ.

ಮೃತದೇಹ ಎಸೆಯುವ ಪ್ಲಾನ್: ಬಳಿಕ ಈ ವಿಷಯವನ್ನು ದುರ್ಗಾ ತನ್ನ ಪತಿ ರಘುಗೆ ತಿಳಿಸಿದ್ದಾಳೆ. ಇದರಿಂದ ಗಾಬರಿಗೊಂಡ ರಘು, ಅಭಿಯನ್ನು ಸಂಪರ್ಕಿಸಿದ್ದಾನೆ. ನಂತರ ಅಭಿ ತನ್ನ ಸ್ನೇಹಿತರಾದ ವಿನೋದ್ ಮತ್ತು ನಾಗರಾಜು ಎಂಬುವರನ್ನು ಕರೆಸಿಕೊಂಡಿದ್ದಾನೆ. ಇವರೆಲ್ಲ ಸೇರಿಕೊಂಡು ಸೌಮ್ಯಳ ಮೃತದೇಹವನ್ನು ಶ್ರೀರಂಗಪಟ್ಟಣ ಬಳಿಯ ನದಿ ಅಥವಾ ಸೇತುವೆ ಕೆಳಗೆ ಎಸೆಯುವ ಪ್ಲಾನ್​ ಮಾಡಿದ್ದಾರೆ. ಅದರಂತೆ ರಘು, ದುರ್ಗಾ, ಅಭಿ ಎರಡು ಪ್ರತ್ಯೇಕ್​ ಬೈಕ್​ಗಳಲ್ಲಿ ಹೊರಟರೆ, ನಾಗರಾಜು ಮತ್ತು ವಿನೋದ್ ಮೃತದೇಹವನ್ನು ಮಧ್ಯದಲ್ಲಿ ಇರಿಸಿಕೊಂಡು ಬೆಂಗಳೂರಿನಿಂದ ರಾಮನಗರದತ್ತ ಹೊರಟಿದ್ದರು ಎಂದು ಎಸ್​ಪಿ ತಿಳಿಸಿದರು.

ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಬಯಲಿಗೆ: ಆದರೆ ರಾಮನಗರದ ಕಾರಾಗೃಹದ ಬಳಿ ರಸ್ತೆ ಹಂಪ್ಸ್​ ಕಾಣಿಸದೆ ಮೃತದೇಹದೊಂದಿಗೆ ನಾಗರಾಜು ಮತ್ತು ವಿನೋದ್ ಸಂಚರಿಸುತ್ತಿದ್ದ ಬೈಕ್​ನಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಅಪಘಾತದ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಗೊಂಡ ವಿನೋದ್, ನಾಗರಾಜು ಹಾಗೂ ಸೌಮ್ಯರನ್ನು ಆಸ್ಪತ್ರೆಗೆ ಸಾಗಿಸಿದ್ದರು. ಈ ವೇಳೆ ಮೃತದೇಹ ಕುರಿತು ಪೊಲೀಸರು ಪ್ರಶ್ನಿಸಿದಾಗ ಆರೋಪಿಗಳು ಬೈಕ್​ ಅಪಘಾತದಲ್ಲೇ ಸೌಮ್ಯ ಸಾವನ್ನಪ್ಪಿರುವುದಾಗಿ ಕಥೆ ಕಟ್ಟಲು ಪ್ರಯತ್ನಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಸೌಮ್ಯ ಮೃತಪಟ್ಟು 12ಕ್ಕೂ ಅಧಿಕ ಗಂಟೆ ಕಳೆದಿರುವುದಾಗಿ ತಿಳಿಸಿದಾಗ, ಆರೋಪಿಗಳನ್ನು ವಿಚಾರಣೆ ನಡೆಸಿದ ಪೊಲೀಸರು ಕೊಲೆ ಕೃತ್ಯ ಬಯಲಿಗೆಳೆದಿದ್ದಾರೆ.

ಬೈಕ್ ಅಪಘಾತದ ಸಂಭವಿಸಿದಾಗ ಜೊತೆಯಲ್ಲಿದ್ದ ದುರ್ಗಾ ಮತ್ತು ಪತಿ ರಘು ಚನ್ನಪಟ್ಟಣದಲ್ಲಿರುವ ತನ್ನ ಸ್ನೇಹಿತರ ಮನೆಯಲ್ಲಿ ತಲೆಮರೆಸಿಕೊಂಡಿದ್ದರು. ಪೊಲೀಸರು ಅವರನ್ನು ಪತ್ತೆ ಹಚ್ಚಿ ಕರೆ ತಂದಿದ್ದಾರೆ. ಅಭಿಗಾಗಿ ಹುಡುಕಾಟ ನಡೆದಿದೆ ಎಂದು ತಿಳಿದುಬಂದಿದೆ. ರಾಮನಗರ ಟೌನ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ಇದನ್ನೂ ಓದಿ: ಹಾಸನದಲ್ಲಿ ಚಾಕುವಿನಿಂದ ಇರಿದು ಆಟೋ ಚಾಲಕನ ಕೊಲೆ!

Last Updated : May 12, 2022, 6:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.