ETV Bharat / state

ಹೆಚ್ಚಳಗೊಳಿಸಿದ್ದ ಬೆಂ-ಮೈ ದಶಪಥ ಹೆದ್ದಾರಿ ಟೋಲ್ ದರವನ್ನು ಕೈಬಿಟ್ಟ ಪ್ರಾಧಿಕಾರ - ದಶಪಥ ಹೆದ್ದಾರಿ ಟೋಲ್ ದರವನ್ನು ಕೈ ಬಿಟ್ಟ ಪ್ರಾಧಿಕಾರ

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಟೋಲ್ ದರ ಹೆಚ್ಚಳ-ತೀವ್ರ ವಿರೋಧದ ಬಳಿಕ ದರ ಹೆಚ್ಚಳವನ್ನು ಕೈ ಬಿಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ.

toll
ಹೆದ್ದಾರಿ
author img

By

Published : Apr 1, 2023, 12:48 PM IST

ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಟೋಲ್ ದರ ಹೆಚ್ಚಳ ವಾಪಸ್ ಪಡೆಯಲಾಗಿದ್ದು, ತೀವ್ರ ವಿರೋಧದ ಬಳಿಕ ದರ ಹೆಚ್ಚಳವನ್ನು ಸದ್ಯಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಬಿಟ್ಟಿದೆ. ಇಂದಿನಿಂದ ಬೆಂಗಳೂರು-ಮೈಸೂರು ಹೆದ್ದಾರಿಯ ಟೋಲ್ ದರ ಹೆಚ್ಚಿಸಲು ತೀರ್ಮಾನಿಸಲಾಗಿತ್ತು. ಶೇ.22 ರಷ್ಟು ಎಕ್ಸ್‌ಪ್ರೆಸ್‌ ಹೈವೇ ದರ ಹೆಚ್ಚಿಸಿ ಪಟ್ಟಿಯನ್ನು ನಿಗದಿ ಮಾಡಲಾಗಿತ್ತು. ಆದರೆ ಸಾರ್ವಜನಿಕರಿಂದ ದರ ಹೆಚ್ಚಳಕ್ಕೆ ತೀವ್ರ ವಿರೋಧದ ಬೆನ್ನಲ್ಲೇ ಹೆದ್ದಾರಿ ಪ್ರಾಧಿಕಾರ ತನ್ನ ನಿರ್ಧಾರವನ್ನು ಹಿಂಪಡೆದಿದೆ.

ಹಳೆಯ ದರವನ್ನೇ ಮುಂದುವರೆಸಲು ನಿರ್ಧಾರ ಮಾಡಲಾಗಿದ್ದು, ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದಿಂದ ಪ್ರಕಟಣೆ ತಿಳಿಸಿದೆ. ಟೋಲ್ ಆರಂಭವಾದ 17 ದಿನಕ್ಕೆ ದರ ಏರಿಕೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕ ಆಕ್ಷೇಪವಾದ ಹಿನ್ನೆಲೆಯಲ್ಲಿ ಒತ್ತಡಕ್ಕೆ ಮಣಿದು ದರ ಹೆಚ್ಚಳ ವಾಪಸ್ ಪಡೆಯಲಾಗಿದೆ. ಇತ್ತ ಹೆದ್ದಾರಿ ಪ್ರಾಧಿಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮಿತ್ತಿಲ್ಲ ಅನಿಸುತ್ತೆ. ಹೆದ್ದಾರಿ ಪ್ರಾಧಿಕಾರಕ್ಕೆ ಟೋಲ್ ಸಿಬ್ಬಂದಿ ಬೆಲೆ ನೀಡುತ್ತಿಲ್ಲ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್ ದರ ಹೆಚ್ಚಳ ಆದೇಶ ವಾಪಸ್ ಪಡೆದಿದ್ದರು ಕೂಡ ಟೋಲ್ ಸಂಗ್ರಹವನ್ನು ಕಡಿಮೆ ಮಾಡದೆ ಹೊಸ ದರವನ್ನು ತೆಗೆದುಕೊಳ್ಳುತ್ತಿದ್ದರು. ಇಂದಿನಿಂದ ಟೋಲ್ ದರ ಪರಿಷ್ಕರಣೆ ಆದೇಶವನ್ನು ಪ್ರಾಧಿಕಾರ ಹೊರಡಿಸಿತ್ತು. ಸಾರ್ವಜನಿಕರಿಂದ ಭಾರಿ ವಿರೋಧ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯೇ ಆದೇಶವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಾಪಸ್ ಪಡೆದಿದೆ. ನಮಗೆ ಇನ್ನೂ ಆದೇಶವೇ ಬಂದಿಲ್ಲ ಎಂದು ಟೋಲ್ ಸಿಬ್ಬಂದಿ ಹೇಳಿ ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಲ್ಲಿ ಪರಿಷ್ಕೃತ ದರವನ್ನು ಸಿಬ್ಬಂದಿಗಳು ಸಂಗ್ರಹ ಮಾಡುತ್ತಿದ್ದಾರೆ.

ಟೋಲ್​ ದರ ವಿರೋಧಿಸಿ ನಡೆದಿತ್ತು ಪ್ರತಿಭಟನೆ: ಇದೇ ತಿಂಗಳ ಮಾರ್ಚ್​ 17 ರಂದು ಮೈಸೂರಿನಲ್ಲಿ, ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಹೆಚ್ಚು ಟೋಲ್​ ಸಂಗ್ರಹಿಸುತ್ತಿರುವ ನೀತಿ ಮತ್ತು ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ ವಿರೋಧಿಸಿ ಬಿಜೆಪಿ ವಿಧಾನ ಪರಿಷತ್​ ಸದಸ್ಯ ಹೆಚ್​.ವಿಶ್ವನಾಥ್​ ಪ್ರತಿಭಟನೆ ನಡೆಸಿದ್ದರು. ಒಂದು ಗಂಟೆಗಳ ಕಾಲ ಮೈಸೂರು ಬೆಂಗಳೂರು ಹೆದ್ದಾರಿಯ ಮಣಿಪಾಲ್ ಆಸ್ಪತ್ರೆಯ ಹತ್ತಿರದ ಸರ್ಕಲ್​ ಬಳಿ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಹೆಚ್ಚಿಸಿರುವ ಟೋಲ್ ದರ ಕುರಿತು ಕೂಡಲೇ ಟೋಲ್​ ದರ ಮರು ಪರಿಶೀಲನೆ ನಡೆಸಬೇಕೆಮದು ಶಾಂತಿಯುತ ಪ್ರತಿಭಟನೆ ನಡೆಸಿದ್ದರು.

12 ಸಾವಿರ ಕೋಟಿ ಖರ್ಚು ಮಾಡಲಾಗಿದ್ದ ಹೆದ್ದಾರಿ: ಅದೇ ಪ್ರತಿಭಟನೆ ಸಂದರ್ಭದಲ್ಲಿ ಬಿಜೆಪಿ ವಿಧಾನ ಪರಿಷತ್​ ಸದಸ್ಯ ಹೆಚ್​ ವಿಶ್ವನಾಥ್​ ಅವರು ಇತ್ತೀಚೆಗೆ ಮೈಸೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, 12 ಸಾವಿರ ಕೋಟಿ ಖರ್ಚು ಮಾಡಲಾಗಿದ್ದು, ಈ ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಹೆದ್ದಾರಿ ಪಕ್ಕ ಸರ್ವೀಸ್​ ರಸ್ತೆ ಕೂಡ ನಿರ್ಮಾಣ ಮಾಡಿಲ್ಲ. ಜೊತೆಗೆ ಟೋಲ್​ ದರ ಕೂಡ ಹೆಚ್ಚು ಮಾಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಟೋಲ್​ ದರವನ್ನು ಪರಿಶೀಲನೆ ನಡೆಸಬೇಕೆಂದು ಆಗ್ರಹಿಸಿದ್ದರು.

ಕೇವಲ ಟೋಲ್​ ದರ ಹೆಚ್ಚಿಸಿದ್ದು ವಾಹನದಾರರಿಗೆ ಮಾಡಿದ ಸಮಸ್ಯೆಯಲ್ಲದೆ, ಈ ಹೆದ್ದಾರಿಯ ನಿರ್ಮಾಣಕ್ಕಾಗಿ ಮೈಸೂರು-ಬೆಂಗಳೂರು ನಡುವೆ ಇದ್ದ 85 ಕ್ಕೂ ಅಧಿಕ ಪೆಟ್ರೋಲ್​ ಬಂಕ್​, 400 ಕ್ಕೂ ಅಧಿಕ ಹೋಟೆಲ್​ಗಳು, ಹಾಗೆಯೇ ಮುಖ್ಯವಾಗಿ ರಸ್ತೆ ಬದಿಯ ವ್ಯಾಪಾರಿಗಳು ತಮ್ಮ ತಮ್ಮ ಅಂಗಡಿಗಳನ್ನು ಮುಚ್ಚಿದ್ದಾರೆ. ಆದರೆ ಇವರ ಜೀವನೋಪಾಯಕ್ಕೆ ಬೇರೆ ಬದಲಿ ವ್ಯವಸ್ಥೆ ಮಾಡದೇ ಇರುವುದು ಸರ್ಕಾರದ ವೈಫಲ್ಯವೇ ಸರಿ.

ಇದನ್ನೂ ಓದಿ: ಡಿಪಿಆರ್ ವಿಳಂಬ: ರೈಲ್ವೆ ಇಲಾಖೆಯಿಂದ ಮಂಜೂರಾಗದ 7 ಹೈಸ್ಪೀಡ್ ರೈಲು ಯೋಜನೆಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.