ETV Bharat / state

ಅರ್ಕಾವತಿ‌ ಕಲುಷಿತ... ನದಿ ಶುದ್ಧೀಕರಣಕ್ಕೆ ಸ್ಥಳೀಯರ ಮನವಿ - ರಾಮನಗರ

ರಾಮನಗರದ ಹೃದಯ ಭಾಗದಲ್ಲಿರುವ ಅರ್ಕಾವತಿ‌ ನದಿ ಇಂದು ಕಲ್ಮಶಗಳ ಆಗರವಾಗಿ ಪರಿಣಮಿಸಿದೆ. ನಗರದ ತ್ಯಾಜ್ಯ ಹಾಗೂ ಡ್ರೈನೇಜ್ ಸೇರಿದಂತೆ ಯುಜಿಡಿ ಸಂಪರ್ಕ ಕೂಡ ನೇರವಾಗಿ ಅರ್ಕಾವತಿಗೆ ಬಿಟ್ಟ ಪರಿಣಾಮ ರೋಗರುಜಿನಗಳ ಆವಾಸ ಸ್ಥಾನವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಜೀವನದಿ
author img

By

Published : Aug 27, 2019, 5:48 AM IST

ರಾಮನಗರ: ನಗರದ ಮಧ್ಯದಲ್ಲೇ ಹರಿಯುತ್ತ 60-70ರ ದಶಕದಲ್ಲಿ ನಗರದ ಜನತೆಗೆ ಕುಡಿಯುವ ನೀರಿನ‌ ಬವಣೆ ನೀಗಿಸುತ್ತಿದ್ದ ಅರ್ಕಾವತಿ ನದಿ ನೀರನ್ನು ಇಂದು ಕುಡಿಯುವುದಕ್ಕೆ ಬಳಸಲಾರದಷ್ಟು ಕಲುಷಿತಗೊಂಡಿದೆ.

ನಗರದಲ್ಲಿ ಕೆಡವುತ್ತಿರುವ ಹಳೆಯ ಕಟ್ಟಡಗಳ ತ್ಯಾಜ್ಯವನ್ನು ನದಿ‌ಯೊಳಕ್ಕೆ‌ ಸುರಿಯುವುದು ಹಾಗೂ ನಗರದ ತ್ಯಾಜ್ಯವನ್ನು ತಂದು ನದಿಯೊಡಲ‌ನ್ನು ಬಗೆದು‌ ಮುಚ್ಚಿ‌ಹೋಗಲಾಗುತ್ತಿದೆ ಎನ್ನುವ ದೂರುಗಳು ಕೇಳಿ‌ಬಂದಿವೆ. ಇನ್ನೂ ಮಿತಿ ಮೀರಿದ ತ್ಯಾಜ್ಯ ಶೇಖರಣೆಯಾಗುತ್ತಿದ್ದು, ಇಲ್ಲಿನ ರಾಘವೇಂದ್ರ ಕಾಲೋನಿ ಸೇರಿದಂತೆ ಬಾಲಗೇರಿ ಭಾಗಗಳಲ್ಲಿ ಸ್ಥಳೀಯರಿಗೆ ಚರ್ಮ ಸಮಸ್ಯೆ ಕಂಡು ಬರುತ್ತಿದೆ.

ಅರ್ಕಾವತಿ‌ ನದಿ ಇಂದು ಕಲ್ಮಶಗಳ ಆಗರ

ಕಳೆದ ಬಾರಿ ಬಿಜೆಪಿ ಸರ್ಕಾರವಿದ್ದಾಗ ಅರ್ಕಾವತಿ‌ ನದಿ ಶುದ್ಧೀಕರಣಕ್ಕಾಗಿಯೇ ನಂದಿ ಬೆಟ್ಟದಿಂದ‌ ಹಿಡಿದು ಸಂಗಮದವರೆಗೂ ಯೋಜನೆಯೊಂದನ್ನು ಸಿದ್ಧಪಡಿಸಿತ್ತು. ನಂತರ‌ ಬಂದ‌ ಕಾಂಗ್ರೆಸ್ ಸರ್ಕಾರ ಅದನ್ನು ಮೂಲೆಗೆ ಎಸೆದಿತ್ತು. ಇದೀಗ‌ ಮತ್ತೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು ಇನ್ನಾದರೂ ಯೋಜನೆ‌ ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

Intro:

Body:ರಾಮನಗರ : ನಗರದ ಹೃದಯ ಭಾಗದಲ್ಲಿರುವ ಅರ್ಕಾವತಿ‌ನದಿ ಇಂದು ಕಲ್ಮಶಗಳ ಆಗರವಾಗಿ ಪರಿಣಮಿಸಿದೆ. ನಗರದ ತ್ಯಾಜ್ಯ ಹಾಗೂಬಡ್ರೈನೇಜ್ ಸೇರಿದಂತೆ ಯುಜಿಡಿ ಸಂಪರ್ಕ ಕೂಡ ನೇರವಾಗಿ ಅರ್ಕಾವತಿಗೆ ಬಿಟ್ಟ ಪೆಇಣಾಮ ರೋಗರುಜಿನಗಳ ಆವಾಸ ಸ್ಥಾನವಾಗಿ ಪರಿಣಮಿಸಲ್ಪಟ್ಟಿದ್ದು, ದುರಸ್ಥಿ ವಿಷಯದಲ್ಲಿ ಯಾವೊಬ್ಬ ಜನಪ್ರತಿನಿಧಿಗಳು ತಲೆ‌ಕೆಡಿಸಿಕೊಂಡಂತಿಲ್ಲಾ.
ನಗರದ ಮಧ್ಯದಲ್ಲೆ‌ ಹರಿಯುತ್ತ 60-70 ರ ದಶಕದಲ್ಲಿ ನಗರದ ಜನತೆಗೆ ಕುಡಿಯುವ ನೀರಿನ‌ ಬವಣೆ ನೀಗಿಸುತ್ತಿದ್ದ ಅರ್ಕಾವತಿ ನದಿ‌ ನೀರೇ ನದಿತಟದಲ್ಲಿರುವ ಐತಿಹಾಸಿಕ ಅರ್ಕೇಶ್ವರಸ್ವಾಮಿಯ ಮಜ್ಜನಕ್ಕಾಗಿ‌ ಬಳಸಲಾಗುತ್ತಿತ್ತು.ಅದೇ ಜೀವನದಿ ಇಂದು ಕುಡಿಯುವ ನೀರನ್ನು ಬಳಸುವಂತಿಲ್ಲಾ ಎಂಬ ಫರ್ಮಾನು ಹೊರಡಿಸಿಕೊಂಡುಬಿಟ್ಟಿದೆ ಅಷ್ಟರ ಮಟ್ಟಿಗೆ ಅರ್ಕಾವತಿ ಕಲುಷಿತಗೊಂಡಿದ್ದಾಳೆ.
ಇತ್ತೀಚಿಗೆ ನಗರದಲ್ಲಿ ಕೆಡವುತ್ತಿರುವ ಹಳೆಯ ಕಟ್ಟಡಗಳ ತ್ಯಾಜ್ಯವನ್ನು ನದಿ‌ಯೊಳಕ್ಕೆ‌ ಸುರಿಯುತ್ತಿದ್ದಾರೆ. ಮೋರಿ ಬ್ರಿಡ್ಜ್ ಗಳೇ ಇದರಿಂದಾಗಿ‌ ಮುಚ್ಚಿ ಹೋಗುತ್ತಿವೆ. ಅಲ್ಲದೆ ನಗರಸಭೆಯ ಸಿಬ್ಬಂದಿ ಕೂಡ‌ಕಸದ ಸಮಸ್ಯೆ ನಿವಾರಣೆಗಾಗಿ ಅರ್ಕಾವತಿ ನದಿಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಗರಸ ತ್ಯಾಜ್ಯವನ್ನು ತಂದು ನದಿಯೊಡಲ‌ಬಗೆದು‌ ಮುಚ್ಚಿ‌ಹೋಗಿದ್ದಾರೆ ಎನ್ನುವ ದೂರುಗಳು ಕೇಳಿ‌ಬಂದಿವೆ. ಅಷ್ಟೇ ಅಲ್ಲದೆ ಇತ್ತೀಚಿಗೆ ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳ ತಾಣವಾಗಿ‌ ಮಾರ್ಪಡುತ್ತಿದ್ದು , ಇತ್ತೀಚಿಗೆ‌ ಚಿರತೆ ಮತ್ತು ಕರಡಿಗಳ ವಾಸಸ್ಥಾನವಾಗಿ‌ ಮಾರ್ಪಡುತ್ತಿದೆ.ಇದಕ್ಕರ‌ಇಂಬು ನೀಡುವಂತೆ ನಗರದ‌ಮನೆಗೆ ನುಗ್ಗಿ‌ಸಾಕುಪ್ರಾಣಿ ತಿಂದು ಹಾಕಿದ್ದ ಚಿರತೆ ಸೆರೆಗೆ ಅರಣ್ಯ ಇಲಾಖೆ‌‌ ಬೋನಿಟ್ಟು ಸೆರೆ ಹಿಡಿದಿತ್ತು.
ಇನ್ನು ಕೈಗಾರಿಕಾ‌ ವಸಹಾತು ರಾಘವೇಂದ್ರ ಕಾಲೋನಿ, ಸೇರಿದಂತೆ ಬಾಲಗೇರಿ ಭಾಗಗಳಲ್ಲಿ ತ್ಯಾಜ್ಯದ ಸಮಸ್ಯೆ ಹೆಚ್ಚಾಗಿದ್ದು ಆ ಭಾಗದ ವಾಸಿಗಳಲ್ಲಿ ಚರ್ಮಸಮಸ್ಯೆ ಉಲ್ಬಣಗೊಂಡಿದ್ದು ರೋಗರುಜಿನಗಳಿಗೆ ರಹದಾರಿಯಾಗಿದೆ.
ಇನ್ನಾದರೂ ನಗರಸಭೆ ತ್ಯಾಜ್ಯ ನಿರ್ವಹಣೆಗೆ ಸೂಕ್ತ ಕ್ರಮ‌ಕೈಗೊಳ್ಳಬೇಕೆಂದು ಸ್ಥಳೀಯರುಬೊತ್ತಾಯಿಸಿದ್ದು ನಮ್ಮನ್ನಾಳುವ ಜನಪ್ರತಿನಿಧಿಗಳು ನದಿಯಲ್ಲಿ ಬೆಳೆದು ನಿಂತ‌ಜೊಂಡು ತೆರವಿಗೆ ಪ್ರಾಮಾಣಿಕ‌ ಪ್ರಯತ್ನ‌ ನಡೆಸಬೇಕು , ಈಗಾಗಲೇ ಅರ್ಕಾವತಿ ನದಿ ಹೆಸರಿನಲ್ಲಿ ಲಕ್ಷಾಂತರ‌ರೂಪಾಯಿ‌ ಗುಳುಂ‌ ಆಗಿದ್ದು ಮುಂದಿನ‌ದಿನಗಳಲ್ಲಿಯಾದರೂ ಪ್ರಾಮಾಣಿಕ‌ ಪ್ರಯತ್ನದ ಮೂಲಕ‌ ಶುದ್ದೀಕರಣ ಕಾರ್ಯ ನಡೆಯಲಿ‌ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಅಲ್ಲದೆ ಕಳೆದ ಬಾರಿ ಬಿಜೆಪಿ ಸರ್ಕಾರವಿದ್ದಾಗ ಅರ್ಕಾವತಿ‌ನಧಿ ಶುದ್ದೀಕರಣಕ್ಕಾಗಿಯೇ ನಂದಿ ಬೆಟ್ಟದಿಂದ‌ಹಿಡಿದು ಸಂಗಮದ ವರೆವಿಗೂ ಯೋಜನೆಯೊಂದನ್ನು ಸಿದ್ದಪಡಿಸಿತ್ತು ಅದು ನಂತರ‌ ಬಂದ‌ ಕಾಂಗ್ರೇಸ್ ಸರ್ಕಾರ ಮೂಲೆಗೆ ಎಸೆದಿತ್ತು ಇದೀಗ‌ ಮತ್ತೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು ಇನ್ನಾದರೂ ಯೋಜನೆ‌ ಪೂರ್ಣಗೊಳ್ಳಲಿದೆಯೇ ಕಾದು ನೋಡಬೇಕಿದೆ.

ಪ್ರಕಾಶ್ ಎಂ.ಹೆಚ್.‌ಈಟಿವಿ ಭಾರತ ರಾಮನಗರ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.