ರಾಮನಗರ: ರೇಷ್ಮೆ ನಗರಿಯಲ್ಲಿಂದು 35 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 81ಕ್ಕೆ ಏರಿಕೆಯಾಗಿದೆ.
ಕನಕಪುರದಲ್ಲಿ 25, ಮಾಗಡಿಯಲ್ಲಿ 4, ಚನ್ನಪಟ್ಟಣದಲ್ಲಿ 2, ರಾಮನಗರದಲ್ಲಿ 4 ಜನರಲ್ಲಿ ಸೋಂಕು ಪತ್ತೆಯಾಗಿದೆ. ಕನಕಪುರದ 25 ಮಂದಿಗೆ ಅಲ್ಲಿನ ವೈದ್ಯ ದಂಪತಿಯಿಂದ ಸೋಂಕು ಹರಡಿದೆ ಎಂದು ತಿಳಿದು ಬಂದಿದೆ. ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.