ರಾಮನಗರ: ನನ್ನ ಅಂತ್ಯಕ್ರಿಯೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬರಬೇಕು, ಅವರು ನನ್ನ ಕುಟುಂಬಕ್ಕೆ ಧನಸಹಾಯ ಮಾಡಬೇಕೆಂದು ಡೆತ್ ನೋಟ್ ಬರೆದಿಟ್ಟು ವ್ಯಕ್ತಿವೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬೊಮ್ಮಚ್ಚನಹಳಿಯಲ್ಲಿ ನಡೆದಿದೆ.
ಆಟೋ ಚಾಲಕ ಜಯರಾಮು ಆತ್ಮಹತ್ಯೆಗೆ ಶರಣಾಗಿರುವ ಆಟೋ ಚಾಲಕ. ಗ್ಯಾಂಗ್ರಿನ್ನಿಂದ ಬಳಲುತ್ತಿದ್ದ ಜಯರಾಮು ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದು ಬಂದಿದೆ.
ಸಾಯುವ ಮುನ್ನ ಜಯರಾಮು ಜೇಬಿನಲ್ಲಿ ಬರೆದಿಟ್ಟಿದ್ದ ಡೆತ್ ನೋಟ್ ಪತ್ತೆಯಾಗಿದ್ದು, 'ನನಗೆ ಬುದ್ಧಿಮಾಂದ್ಯ ಮಗನಿದ್ದಾನೆ. ನನ್ನ ಮಗನಿಗೆ ಕುಮಾರಸ್ವಾಮಿ ಧನ ಸಹಾಯ ಮಾಡಬೇಕೆಂದು' ಮನವಿ ಮಾಡಿದ್ದಾನೆ.
ಈ ಸುದ್ದಿಯನ್ನೂ ಓದಿ: ಕೃಷಿ ಕಾಯ್ದೆಗಳಿಗೆ ವಿರೋಧ: ಕುಂದಾನಗರಿಗೆ ಅಮಿತ್ ಶಾ ಆಗಮನ ಹಿನ್ನೆಲೆ ರೈತರಿಂದ ಪ್ರತಿಭಟನೆ
ನಿಮ್ಮ ಋಣವನ್ನ ಮುಂದಿನ ಜನ್ಮದಲ್ಲಿ ತೀರಿಸುತ್ತೇನೆ. ನನ್ನ ಮಗನಿಗೆ ಒಂದು ದಾರಿ ಮಾಡಿಕೊಡಿ ಕುಮಾರಣ್ಣ ಎಂದು ಭಾವನಾತ್ಮಕವಾಗಿ ಜಯರಾಮು ಡೆತ್ ನೋಟ್ ಬರೆದಿದ್ದಾರೆ. ಮೃತನ ಅಂತ್ಯಕ್ರಿಯೆಗೆ ಹೆಚ್ಡಿಕೆ ಆಗಮಿಸುವ ಸಾಧ್ಯತೆ ಇದೆ.