ರಾಮನಗರ : ತಾಲೂಕಿನ ಬಸವನಪುರ-ವಡೇರಹಳ್ಳಿ ಬಳಿ ರೈಲಿಗೆ ಸಿಲುಕಿ 6 ತಿಂಗಳ ಗಂಡು ಚಿರತೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಆಹಾರ ಅರಸಿ ಬಂದ ಚಿರತೆ ಬಸವನಪುರ-ವಡೇರಹಳ್ಳಿ ಬಳಿ ಇರುವ ರೈಲು ಹಳಿ ದಾಟುವ ವೇಳೆ ಚಲಿಸುತ್ತಿದ್ದ ರೈಲಿನಡಿ ಸಿಲುಕಿ ಸಾವನ್ನಪ್ಪಿದೆ ಎನ್ನಲಾಗಿದೆ. ವಿಷಯ ತಿಳಿದು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು.
ಪಶು ವೈದ್ಯಾಧಿಕಾರಿ ಡಾ. ನಜೀರ್, ಯಂಗಯ್ಯನಕೆರೆ ಅಚ್ಚುಕಟ್ಟು ಪ್ರದೇಶದ ಬಳಿ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಚಿರತೆ ಕಳೆಬರಹವನ್ನು ಸುಡಲಾಯಿತು.
ಡಿಎಫ್‌ಒ ಎಸ್.ಎನ್ ಹೆಗ್ಗಡೆ, ಎಸಿಎಫ್ ಎಂ. ರಾಮಕೃಷ್ಣಪ್ಪ, ಅರಣ್ಯ ರಕ್ಷಕರು ಉಪಸ್ಥಿತರಿದ್ದರು.