ETV Bharat / state

1,000 ಲೀ. ಹಾಲು ಹಾಳು ಆರೋಪ: ಡೈರಿ ಅಧ್ಯಕ್ಷರ ವಿರುದ್ಧ ಪ್ರತಿಭಟನೆ - ಹಾಲಿನ ಡೈರಿ ಅಧ್ಯಕ್ಷರ ವಿರುದ್ಧ ರಾಮನಗರದಲ್ಲಿ ಪ್ರತಿಭಟನೆ

ಎರಡು ದಿನಗಳ ಕಾಲ ಹಾಲನ್ನ ಡೈರಿಗೆ ಹಾಕಿಸಿಕೊಳ್ಳದೇ ಸರಿಸುಮಾರು ಒಂದು ಸಾವಿರ ಲೀಟರ್ ಹಾಲನ್ನ ಮಣ್ಣುಪಾಲು ಮಾಡಿದ್ದರೆಂದು ಆರೋಪಿಸಿ ಹಾಲಿನ ಡೈರಿ ಕಾರ್ಯದರ್ಶಿ ಹಾಗೂ ಅಧ್ಯಕ್ಷರ ವಿರುದ್ಧ ರಾಮನಗರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆ
author img

By

Published : Nov 19, 2019, 10:06 AM IST

ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಅಗರ ಗ್ರಾಮದಲ್ಲಿ ಹಾಲಿನ ಡೈರಿ ಕಾರ್ಯದರ್ಶಿ ಹಾಗೂ ಅಧ್ಯಕ್ಷ, ಹಾಲು ಉತ್ಪಾದಕರ ವಿರುದ್ಧ ರಾಜಕೀಯ ಮಾಡಿ ಎರಡು ದಿನಗಳ ಕಾಲ ಹಾಲನ್ನ ಡೈರಿಗೆ ಹಾಕಿಸಿಕೊಳ್ಳದೇ ಸರಿಸುಮಾರು ಒಂದು ಸಾವಿರ ಲೀಟರ್ ಹಾಲನ್ನು ಮಣ್ಣುಪಾಲು ಮಾಡಿದ್ದರು. ಇದೇ ವಿಚಾರ ಸಂಬಂಧ ಸೋಮವಾರ ಗ್ರಾಮದ ಜನರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹಾಲಿನ ಡೈರಿ ಕಾರ್ಯದರ್ಶಿ ಹಾಗೂ ಅಧ್ಯಕ್ಷರ ವಿರುದ್ಧ ಪ್ರತಿಭಟನೆ

ಹಾಲಿನ ಡೈರಿಯ ಕಾರ್ಯದರ್ಶಿ ವೆಂಕಟಾಚಲ ಹಾಗೂ ಡೈರಿ ಅಧ್ಯಕ್ಷ ಕೆಂಪೇಗೌಡ ಮಾಡಿದ ಈ ಕೆಲಸದ ಕುರಿತು ಖಾಸಗಿ ಮಾಧ್ಯಮವೊಂದು ವರದಿ ಮಾಡಿದ ಬಳಿಕ ಹಾಲು ಹಾಕಿಸಿಕೊಂಡಿದ್ದರು. ಆದರೆ ಮುಂದೆ ಮತ್ತೆ ಸಮಸ್ಯೆಯಾಗಬಹುದೆಂದು ಗ್ರಾಮದ ಜನರು ಹಾಗೂ ಹಾಲು ಉತ್ಪಾದಕರು ಪ್ರತಿಭಟನೆ ನಡೆಸಿದರು.

ಅಪರ ಜಿಲ್ಲಾಧಿಕಾರಿ ವಿಜಯ್‌ ಅವರಿಗೆ ಮನವಿ ಸಲ್ಲಿಸಿ, ಈ ಕೂಡಲೇ ಸಂಬಂಧಪಟ್ಟ ಡೈರಿ ಕಾರ್ಯದರ್ಶಿ ಹಾಗೂ ಅಧ್ಯಕ್ಷನ ವಿರುದ್ಧ ಸೂಕ್ತ ತನಿಖೆಯಾಗಬೇಕೆಂದು ಮನವಿ ಮಾಡಿದರು. ಹಾಲನ್ನು ಡೈರಿಗೆ ಹಾಕಿಸಿಕೊಳ್ಳದೇ ವ್ಯರ್ಥ ಮಾಡಿರುವುದಕ್ಕೆ ಪರಿಹಾರ ಕೊಡಬೇಕೆಂದು ಒತ್ತಾಯ ಮಾಡಿದ್ದಾರೆ.

Intro:Body:ರಾಮನಗರ : ಕನಕಪುರ ತಾಲೂಕಿನ ಅಗರ ಗ್ರಾಮದಲ್ಲಿ ಹಾಲಿನ ಡೈರಿ ಕಾರ್ಯದರ್ಶಿ, ಅಧ್ಯಕ್ಷ ಹಾಲು ಉತ್ಪಾದಕರ ವಿರುದ್ಧ ರಾಜಕೀಯ ಮಾಡಿ ಎರಡು ದಿನಗಳ ಕಾಲ ಹಾಲನ್ನ ಡೈರಿಗೆ ಹಾಕೊಸಿಕೊಳ್ಳದೇ ಸರಿಸುಮಾರು ೧ ಸಾವಿರ ಲೀಟರ್ ಹಾಲನ್ನ ಮಣ್ಣುಪಾಲು ಮಾಡಿದ್ದರು. ಈ ಬಗ್ಗೆ ಕಳೆದ ದಿನ ನ್ಯೂಸ್ ೧೮ ನಲ್ಲಿ ವರದಿಯಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಗ್ರಾಮದ ಜನರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಅಗರ ಗ್ರಾಮದ ಹಾಲಿಡೈರಿ ಸಕ್ರೆಟರಿ ವೆಂಕಟಾಚಲಾ ಹಾಗೂ ಡೈರಿ ಅಧ್ಯಕ್ಷ ಕೆಂಪೇಗೌಡ ಎಂಬುವವರು ಸೇರಿಕೊಂಡು ಹಾಲು ಉತ್ಪಾದಕರ ವಿರುದ್ಧ ರಾಜಕೀಯ ಮಾಡಿಕೊಂಡು ಕಳೆದೆರಡು ದಿನಗಳಿಂದ ಹಾಲು ಉತ್ಪಾದಕರ ಹಾಲನ್ನ ಹಾಕಿಸಿಕೊಳ್ಳದೇ ಸರಿಸುಮಾರು ೧ ಸಾವಿರ ಲೀಟರ್‌ಗೂ ಹೆಚ್ಚು ಹಾಲನ್ನ ಮಣ್ಣುಪಾಲು ಮಾಡಿದ್ದರು. ಈ ಬಗ್ಗೆ ಕಳೆದ ದಿನ ನ್ಯೂಸ್ ೧೮ ಕನ್ನಡ ವರದಿ ಮಾಡಿತ್ತು. ನಂತರ ಸಂಜೆಗೆ ಡೈರಿ ಸಕ್ರೆಟರಿ ಹಾಗೂ ಅಧ್ಯಕ್ಷ ಹಾಲನ್ನ ಹಾಕಿಸಿಕೊಂಡಿದ್ದರು. ಆದರೆ ಮುಂದೆ ಮತ್ತೆ ಸಮಸ್ಯೆಯಾಗಬಹುದೆಂದು ಇಂದು ಗ್ರಾಮದ ಜನರು ಹಾಗೂ ಹಾಲು ಉತ್ಪಾದಕರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ವಿಜಯ್‌ರವರಿಗೆ ಮನವಿ ಸಲ್ಲಿಸಿ ಈ ಕೂಡಲೇ ಸಂಬಂಧಪಟ್ಟ ಡೈರಿ ಕಾರ್ಯದರ್ಶಿ ಹಾಗೂ ಅಧ್ಯಕ್ಷನ ವಿರುದ್ಧ ತನಿಖೆ ನಡೆಸಬೇಕೆಂದು ಮನವಿ ಮಾಡಿದರು.
ಅಗರ ಗ್ರಾಮದ ಹಾಲಿನ ಡೈರಿ ಅಧ್ಯಕ್ಷ ಹಾಗೂ ಸಕ್ರೆಟರಿ ವಿಚಾರವಾಗಿ ಸೂಕ್ತ ತನಿಖೆಯಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹಾಗೆಯೇ ಎರಡು ದಿನಗಳಲ್ಲಿ ನಮ್ಮ ಹಾಲನ್ನ ಡೈರಿಗೆ ಹಾಕಿಸಿಕೊಳ್ಳದೇ ವ್ಯರ್ಥ ಮಾಡಿರುವುದಕ್ಕೆ ಪರಿಹಾರ ಕೊಡಬೇಕೆಂದು ಒತ್ತಾಯ ಮಾಡಿದ್ದಾರೆ.Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.