ರಾಯಚೂರು: ತಲೆ ಮೇಲೆ ಲಾರಿ ಹರಿದು ಹೋದ ಪರಿಣಾಮ ಎಪಿಎಂಸಿಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ನಗರದ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ಈ ದುರ್ಘಟನೆ ಸಂಭವಿಸಿದೆ. ವಡವಾಟಿ ಗ್ರಾಮದ ನಿವಾಸಿ ಬೊಡಣ್ಣ ದೊಡ್ಡಗುಂಡಯ್ಯ ಮೃತ ವ್ಯಕ್ತಿ. ಎಪಿಎಂಸಿಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ಈತ, ಕೆಲಸ ಮುಗಿದ ಬಳಿಕ ಊರಿಗೆ ತೆರಳಲು ತಡವಾಗಿದ್ದಕ್ಕೆ ಎಪಿಎಂಸಿ ಆವರಣದ ಪ್ರಾಂಗಣದಲ್ಲಿ ಮಲಗಿದ್ದ. ಈ ವೇಳೆ ತಲೆ ಮೇಲೆ ಲಾರಿ ಹರಿದು ಮೃತಪಟ್ಟಿದ್ದಾನೆ ಎಂದು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.