ರಾಯಚೂರು: ಹೆರಿಗೆಗೆಂದು ತೆರಳುತ್ತಿದ್ದ ವೇಳೆ ಗರ್ಭಿಣಿ ಆಂಬುಲೆನ್ಸ್ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಮಾನ್ವಿ ತಾಲೂಕಿನ ಉದ್ಬಳ ಗ್ರಾಮದ ಯಲ್ಲಮ್ಮ ಎಂಬುವವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಯಲ್ಲಮ್ಮನನ್ನು ಉದ್ಬಳ ಗ್ರಾಮದಿಂದ ಕರೆತರುವಾಗ ರಸ್ತೆ ಮಾರ್ಗ ಮಧ್ಯೆ ಹೆರಿಗೆ ನೋವು ಹೆಚ್ಚಾಗಿದ್ದರಿಂದ ಆ್ಯಂಬುಲೆನ್ಸ್ನ ಶುಶ್ರೂಷಕ ಮೌನೇಶ್, ಚಾಲಕ ಸಿದ್ದನಗೌಡ ಅವರ ಸಹಾಯದೊಂದಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿ ಪೋತನಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಇನ್ನು ತಾಯಿ ಮಗು ಸುರಕ್ಷಿತವಾಗಿ ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.