ರಾಯಚೂರು: ಜಿಲ್ಲೆಯಲ್ಲಿ ಮತ್ತೊಬ್ಬ ಕೊರೊನಾ ಸೋಂಕಿತೆ ಮೃತಪಟ್ಟಿದ್ದಾರೆ. ನಗರದ ನವಾಬ್‌ಗಡ್ಡದ 40 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾರೆ.
ನ್ಯುಮೋನಿಯಾ, ಉಸಿರಾಟದ ತೊಂದರೆಯಿಂದ ಮಹಿಳೆ ಬಳಲುತ್ತಿದ್ದು, ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಹೀಗಾಗಿ ಒಪೆಕ್ ಕೋವಿಡ್-19 ವಾರ್ಡ್ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗಿದೆ ಮಹಿಳೆ ಮೃತಪಟ್ಟಿದ್ದಾಳೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಗಿದೆ.
ತಾಲೂಕು ವೈದ್ಯಾಧಿಕಾರಿಗೆ ಸೋಂಕು:
ಇನ್ನೊಂದೆಡೆ, ಸಿಂಧನೂರು ತಾಲೂಕಿನ ವೈದ್ಯಾಧಿಕಾರಿಗೂ ಕೊರೊನಾ ಸೋಂಕು ವಕ್ಕರಿಸಿದೆ.
ನಿನ್ನೆ ಬಂದಿರುವ ವರದಿಯಲ್ಲಿ ತಾಲೂಕು ವೈದ್ಯಾಧಿಕಾರಿಗಳಿಗೆ ಸೋಂಕು ದೃಢಪಟ್ಟಿದ್ದು, ಅವರನ್ನು ಕ್ವಾರಂಟೈನ್ ಮಾಡಲಾಗಿದೆ.
ವೈದ್ಯಾಧಿಕಾರಿಗೂ ಸೋಂಕು ಹರಡಿದ್ದರಿಂದ ಜಿಲ್ಲೆಯ ಜನತೆಯಲ್ಲಿ ಆತಂಕ ಮೂಡಿಸಿದೆ. ಕೊರೊನಾ ನಿಯಂತ್ರಿಸುವುದಕ್ಕೆ ತಾಲೂಕು ವೈದ್ಯಾಧಿಕಾರಿಗಳು ಹಲವು ಕಡೆ ಓಡಾಟ ಮಾಡಿದ್ದು, ನಾನಾ ಸಭೆಗಳಲ್ಲಿ ಭಾಗವಹಿಸಿದ್ದಾರೆ. ಇತ್ತೀಚೆಗೆ ಸಿಂಧನೂರು ಹೊರವಲಯದಲ್ಲಿ ತುಂಗಭದ್ರಾ ಎಡದಂಡೆ ನಾಲೆಯಿಂದ ಅಕ್ರಮ ನೀರಾವರಿ ನಡೆಯುವುದನ್ನು ತಡೆಯಲು ಕೊಪ್ಪಳ, ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಎರಡು ಜಿಲ್ಲೆಯ ಅಧಿಕಾರಿಗಳ ಸಭೆ ನಡೆದಿತ್ತು. ಅ ಸಭೆಯಲ್ಲಿ ಸಿಂಧನೂರು ಟಿಹೆಚ್‌ಒ ಕೂಡ ಭಾಗಿಯಾಗಿದ್ದರು.
ಸದ್ಯ ಟಿಹೆಚ್‌ಒರನ್ನು ಐಸೋಲೋಷನ್ ವಾರ್ಡ್ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಪ್ರಾಥಮಿಕ ಸಂಪರ್ಕದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಅಲ್ಲದೆ ತಾಲೂಕು ವೈದ್ಯಾಧಿಕಾರಿಗಳ ಕಚೇರಿಯನ್ನ ಸ್ಯಾನಿಟೈಸೇಷನ್ ಮಾಡಲು ಸೂಚಿಸಲಾಗಿದೆ.