ETV Bharat / state

ಅಕ್ಕಪಕ್ಕದ ಮನೆಯವರ ಕಿರುಕುಳ: ಮನೆಯಲ್ಲೇ ಆತ್ಮಹತ್ಯೆ.. ಸಾಯುವ ಮುನ್ನ ವಿಡಿಯೋ ಮಾಡಿದ್ದ ಮಹಿಳೆ

ಅಕ್ಕಪಕ್ಕದ ಮನೆಯವರ ಕಿರುಕುಳದಿಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೂ ಮುನ್ನ ವಿಡಿಯೋ ಮಾಡಿರುವುದು ಬೆಳಕಿಗೆ ಬಂದಿದೆ.

sucide
ಆತ್ಮಹತ್ಯೆ
author img

By

Published : May 16, 2023, 10:45 AM IST

Updated : May 16, 2023, 11:13 AM IST

ರಾಯಚೂರು: ಹಳೆ ಮನೆಯ ಕಲ್ಲು-ಮಣ್ಣು ತೆರವಿನ ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ಕಿರುಕುಳ ತಾಳಲಾರದೇ ಮಾನಸಿಕವಾಗಿ ನೊಂದು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಕಾರಣರಾದವರ ಹೆಸರನ್ನು ಸಾಯುವ ಮುನ್ನ ವಿಡಿಯೋ ಮಾಡಿದ್ದು, ಆ ತುಣುಕು ಈಗ ಎಲ್ಲೆಡೆ ವೈರಲ್ ಆಗಿದೆ.

ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಕಳೆದ ಭಾನುವಾರದಂದು ಈ ದುರ್ಘಟನೆ ಜರುಗಿದೆ. ಸುಮಾ ವಿಶ್ವನಾಥ (34) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಪಟ್ಟಣದ ವಾರ್ಡ್ 9ರಲ್ಲಿ ವಾಸವಿದ್ದ ಇವರು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ವಾರ್ಡ್ ನಂಬರ್ 9ರಲ್ಲಿ ಬರುವ ಸಂತೆ ಬಜಾರ್​ನಲ್ಲಿ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ: ಹೆತ್ತವರಿಗೆ ತಿಳಿಸದೇ 2ನೇ ವಿವಾಹಕ್ಕೆ ಸಿದ್ಧವಾಗಿದ್ದ ವರ: ಮದುವೆ ಮಂಟಪದಲ್ಲಿ ನಡೀತು ಚಮತ್ಕಾರ!

ಸುಮಾ ವಿಶ್ವನಾಥ ಎನ್ನುವವರು ಇತ್ತೀಚೆಗೆ ಹಳೆಯ ಮನೆಯೊಂದನ್ನು ಖರೀದಿ ಮಾಡಿದ್ದರು. ಹಳೆ ಮನೆ ನೆಲಸಮಗೊಳಿಸಿ, ಹೊಸ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು. ಹಳೆ ಮನೆ ತೆರವಿನಿಂದ ಬಂದಂತಹ ಕಲ್ಲು- ಮಣ್ಣು ಅವಶೇಷಗಳನ್ನು ತೆರವುಗೊಳಿಸಬೇಕಾಗಿತ್ತು. ಆದರೆ, ಇದರ ತೆರವಿಗೆ ತಕರಾರು ತೆಗೆದಿದ್ದು, ಅಕ್ಕಪಕ್ಕದ ನಿವಾಸಿಗಳು ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಆಪಾದನೆ ಮಾಡಿದ್ದು, ಇದರಿಂದ ಬೇಸತ್ತು ಸಾವಿಗೆ ಕಾರಣ ಎಂದು ದೂರಲಾಗಿದೆ.

ಇದನ್ನೂ ಓದಿ: ಮಗುವಿನ ಶವ ಬ್ಯಾಗ್‌ನಲ್ಲಿಟ್ಟುಕೊಂಡು ಸಾಗಿದ ತಂದೆ: ಹೀಗೊಂದು ಮನಕಲುಕುವ ಘಟನೆ..!

ಘಟನೆಗೆ ಸಂಬಂಧಿಸಿದ್ದಂತೆ 17 ಜನರ ವಿರುದ್ಧ ಪತಿ ವಿಶ್ವನಾಥ ಮಸ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರು ಎಂದು ಗಂಗಮ್ಮ, ವಸಂತ, ಶಂಕ್ರಪ್ಪ ಎನ್ನುವ ಸೇರಿದಂತೆ ಇತರರ ಮೇಲೆ ಐಪಿಸಿ ಕಲಂ 143, 147, 149 ಹಾಗೂ 306 ಆರೋಪಿಗಳ ವಿರುದ್ದ ಮಸ್ಕಿ ಪೊಲೀಸ್​ರು ಮೊಕದ್ದಮೆ ದಾಖಲಿಸಿದ್ದಾರೆ. ಇತ್ತ ಘಟನೆ ನಡೆಯುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳ ಸೆರೆಗೆ ಪೊಲೀಸರು ಬಲೆ ಬಿಸಿದ್ದಾರೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್​ ಸ್ಪರ್ಶಿಸಿ ಗೃಹಿಣಿ ಸಾವು, ವರದಕ್ಷಿಣೆಗೆ ಕೊಲೆ ಆರೋಪ: ದೊಡ್ಡಬಳ್ಳಾಪುರದ ಪಾಲ್​ ಪಾಲ್​ ದಿನ್ನೆ ಗ್ರಾಮದಲ್ಲಿ ಹಸುಗಳ ಮೇವಿಗೆ ವಿದ್ಯುತ್​ ಮಷಿನ್​ನಿಂದ ಹುಲ್ಲು ಕಟ್​ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್​ ಸ್ಪರ್ಶಿಸಿ ಗೃಹಿಣಿ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಮಹಿಳೆಯ ಮನುಶ್ರೀಯಾಗಿದ್ದು ಮಹಿಳೆಯ ಕುಟುಂಬದವರು ಕೊಲೆಯ ಸಂಶಯ ವ್ಯಕ್ತಪಡಿಸಿದ್ದಾರೆ. ವರದಕ್ಷಿಣೆ ಹಣಕ್ಕಾಗಿ ಮಗಳನ್ನು ಕೊಲೆ ಮಾಡಿದ್ದಾರೆಂದು ಆರೋಪಿಸಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದಾರೆ.

ಇದನ್ನೂ ಓದಿ: ವಿದ್ಯುತ್ ಸ್ಪರ್ಶಿಸಿ ಗೃಹಿಣಿ ಅನುಮಾನಾಸ್ಪದ ಸಾವು: ವರದಕ್ಷಿಣೆ ಕಾರಣಕ್ಕೆ ಕೊಲೆ ಆರೋಪ

ಇದನ್ನೂ ಓದಿ: ಗದಗ: ಭೀಕರ ರಸ್ತೆ ಅಪಘಾತ.. ಮೂವರು ದಾರುಣ ಸಾವು

Last Updated : May 16, 2023, 11:13 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.