ETV Bharat / state

ರಿಮ್ಸ್ ಆಸ್ಪತ್ರೆ ಕೊಠಡಿಯಲ್ಲಿ ರೋಗಿಗಳಿರುವಾಗಲೇ ವೆಲ್ಡಿಂಗ್​ ಕಾರ್ಯ! - ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಮಧ್ಯೆ ಮೇಲ್ಛಾವಣಿ ಭಾಗದಲ್ಲಿ ವೆಲ್ಡಿಂಗ್

ರಾಯಚೂರು ಜಿಲ್ಲೆಯ ರಿಮ್ಸ್ ಆಸ್ಪತ್ರೆಯ ಪುರುಷರ ಒಳರೋಗಿಗಳ ವಾರ್ಡ್​ನಲ್ಲಿ ಚಿಕಿತ್ಸೆಗೆ ದಾಖಲಾಗಿರುವ ರೋಗಿಗಳ ಮಧ್ಯೆ ಮೇಲ್ಛಾವಣಿ ಭಾಗದಲ್ಲಿ ವೆಲ್ಡಿಂಗ್ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಮಧ್ಯೆ ಮೇಲ್ಛಾವಣಿ ಭಾಗದಲ್ಲಿ ವೆಲ್ಡಿಂಗ್
author img

By

Published : Oct 20, 2019, 11:03 AM IST

ರಾಯಚೂರು: ಜಿಲ್ಲೆಯ ರಿಮ್ಸ್ ಆಸ್ಪತ್ರೆಯ ಪುರುಷರ ಒಳರೋಗಿಗಳ ವಾರ್ಡ್​ನಲ್ಲಿ ಚಿಕಿತ್ಸೆಗೆ ದಾಖಲಾಗಿರುವ ರೋಗಿಗಳಿರುವ ಕೊಠಡಿಯ ಮೇಲ್ಛಾವಣಿ ಭಾಗದಲ್ಲಿ ವೆಲ್ಡಿಂಗ್ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಕೊಠಡಿಯಲ್ಲೇ ವೆಲ್ಡಿಂಗ್
ರೋಗಿಗಳು ಬೆಡ್ ಮೇಲೆ ಮಲಗಿ ಚಿಕಿತ್ಸೆ ಪಡೆಯುತ್ತಿದ್ರೆ, ಇದ್ಯಾವುದನ್ನೂ ಲೆಕ್ಕಿಸದೆ ಮೇಲ್ಛಾವಣಿಗೆ ಆಳವಡಿಸಿರುವ ಕಬ್ಬಿಣದ ಪೈಪ್ ಹಾಗೂ ರಾಡ್​ಗಳಿಗೆ ವೆಲ್ಡಿಂಗ್ ಮಾಡಲಾಗಿದ್ದು, ವೆಲ್ಡಿಂಗ್​ನಿಂದ ಬರುವ ಕಿಡಿಗಳು ಬೇಡ್ ಮೇಲೆ ಹಾಗೂ ಸುತ್ತಮುತ್ತಲು ಬೀಳುತ್ತಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಒಂದು ವೇಳೆ ಈ ಕಿಡಿಗಳು ರೋಗಿಗಳ ಕಣ್ಣಿಗೆ, ಬೆಡ್​ಗೆ ತಗಲಿ ಅನಾಹುತ ಸಂಭವಿಸಿದ್ರೆ ಯಾರು ಹೊಣೆ ಎನ್ನುವ ಪ್ರಶ್ನೆ ಉದ್ಭವಿಸಿದೆ.

ಇನ್ನು ರಿಮ್ಸ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ರಾಯಚೂರು ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ವಾಸ್ತವ್ಯ ಮಾಡಿದ್ರು. ಅವರು ವಾಸ್ತವ್ಯ ಮಾಡುವ ದಿನ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿ ಸ್ವಚ್ಛತಾ ಕಾರ್ಯ ಮಾಡಿದ್ರು. ಇದೀಗ ಅವರು ಬಂದು ಹೋದ ಮೇಲೆ ರೋಗಿಗಳು ಇರೋ ಕೊಠಡಿಯಲ್ಲೇ ವೆಲ್ಡಿಂಗ್ ಮಾಡುತ್ತಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Intro:¬ಸ್ಲಗ್: ನೋಡಿ ಸ್ವಾಮಿ ನಮ್ಮ ಸರಕಾರ ಸ್ವಾಮ್ಯದ ಆಸ್ಪತ್ರೆ ಇರುವುದು ಹೀಗೆ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 20-1೦-2019
ಸ್ಥಳ: ರಾಯಚೂರು
ಆಂಕರ್: ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳು ರೋಗ ವಾಸಿಯಾಗುವ ವಾತಾವರಣ ಆಸ್ಪತ್ರೆಯಲ್ಲಿ ಇರಬೇಕು. Body:ಆದ್ರೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ಗುಣಮುಖ ಒಂದು ಭಾಗವಾದ್ರೆ, ಮತ್ತೊಂದು ಕಡೆ ಭಯ ವಾತಾವರಣ ಕಂಡು ಬಂದಿದೆ. ಹೌದು, ರಿಮ್ಸ್ ಆಸ್ಪತ್ರೆಯ ಪುರುಷರ ಒಳರೋಗಿಗಳ ವಿಭಾಗ ವಾರ್ಡ್ ನಲ್ಲಿ ಚಿಕಿತ್ಸೆ ದಾಖಲು ಆಗಿರುವ ರೋಗಿಗಳ ಮಧ್ಯ ಮೇಲ್ಛಾವಣಿ ಭಾಗದಲ್ಲಿ ವೇಲ್ಡಿಂಗ್ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ರೋಗಿಗಳು ಬೇಡ್ ಮಲಾಗಿ ಚಿಕಿತ್ಸೆ ಪಡೆಯುತ್ತಿದ್ರೆ, ಇದ್ಯಾವುದನ್ನ ಲೆಕ್ಕಿಸದೆ ಮೇಲ್ಛಾವಣಿ ಆಳವಡಿಸಿರುವ ಕಬ್ಬಿಣದ ಪೈಪ್ ಹಾಗೂ ರಾಡ್ ಗಳಿಗೆ ವೇಲ್ಡಿಂಗ್ ಮಾಡಲಾಗಿದ್ದು, ವೇಲ್ಡಿಂಗ್ ನಿಂದ ಬರುವ ಕಿಡಿಗಳು ಬೇಡ್ ಮೇಲೆ ಹಾಗೂ ಸುತ್ತಮುತ್ತಲು ಬಿಳುತ್ತಿರುವ ದೃಶ್ಯ ಮೊಬೈಲ್ ಸೆರೆಯಾಗಿದೆ. ಒಂದು ವೇಳೆ ಈ ಕಿಡಿಗಳು ರೋಗಿಯ ಕಣ್ಣಿಗೆ, ಬೇಡ್ ಗೆ ತಗಲಿ ಬೆಂಕಿ ತಕ್ಕಿ ಏನಾದರೂ ಅನಾಹುತ ಸಂಭವಿಸಿದ್ರೆ, ಯಾರು ಹೊಣೆ ಎನ್ನುವ ಪ್ರಶ್ನೆ ಉದ್ಭವಿಸಿದೆ. ಅಲ್ಲದೇ ಆಸ್ಪತ್ರೆಯಲ್ಲಿ ರೋಗಿಗಳಿಗೆ ಪೂರಕ ವಾತಾವರಣ ವಿರಬೇಕು. ರೋಗಿಗಳ ಮಧ್ಯ ದುರಸ್ಥಿ ಕಾರ್ಯ ಮಾಡಿರುವ ರಿಮ್ಸ್ ಆಡಳಿತ ಮಂಡಳಿ ಕಾರ್ಯ ವೈಖರಿಗೆ ಕೈಗನ್ನಡಿಯಾಗಿದ್ದು, ಸರಕಾರಿ ಆಸ್ಪತ್ರೆ ಚಿಕಿತ್ಸೆ ನಂಬಿ ಬರುವಂತಹ ರೋಗಿಗಳಿಗೆ ಯಾವ ಮಟ್ಟದಲ್ಲಿ ಚಿಕಿತ್ಸೆ ನೀಡುತ್ತಿದ್ದರೆ ಎನ್ನುವುದು ಕಂಡು ಬಂದಿದೆ. ಇನ್ನೂ ರಿಮ್ಸ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ರಾಯಚೂರು ಜಿಲ್ಲಾ ಉಸ್ತುವರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ವಾಸ್ತವ್ಯ ಮಾಡಿದ್ರು. ಅವರು ವಾಸ್ತವ್ಯ ಮಾಡುವ ದಿನ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿಗಳು ಅವ್ಯವಸ್ತೆಯನ್ನ ಮುಚ್ಚಿಕೊಳ್ಳಲು ಸ್ವಚ್ಚತೆ ಮಾಡಿದ್ರು. Conclusion:ಇದೀಗ ಅವರ ಬಂದ ಹೋದ ಮೇಲೆ ರೋಗಿಗಳ ಮಧ್ಯ ವೇಲ್ಡಿಂಗ್ ಮಾಡುತ್ತಿರುವುದು ಸರಕಾರಿ ಸ್ವಾಮ್ಯದ ಆಸ್ಪತ್ರೆಗಳಿಗೆ ರೋಗಿಗಳು ಚಿಕಿತ್ಸೆ ನೀಡುತ್ತಿರುವ ನೈಜ ಸ್ಥಿತಿ ಅನಾವರಣಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.