ರಾಯಚೂರು: ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗುತ್ತಿದೆ. ಹೀಗಾಗಿ, ಮಂತ್ರಾಲಯದ ಸ್ನಾನ ಘಟ್ಟಗಳು ಮುಳುಗಡೆಯಾಗಿವೆ. ಜಲಾಶಯದಿಂದ 1.50 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.
ರಾಯ 351ನೇ ಆರಾಧನೆಯ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಸ್ನಾನ ಘಟ್ಟದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಬಟ್ಟೆ ಬದಲಾಯಿಸುವ ಸ್ಥಳವೂ ನೀರಿನಿಂದ ಆವೃತವಾಗಿದೆ. ಗಂಗಾಮತ ದೇವಸ್ಥಾನ ಸುತ್ತಲೂ ನೀರು ತುಂಬಿಕೊಂಡಿದೆ.
ನೀರಿನ ಪ್ರಮಾಣ ಹೆಚ್ಚಾಗಿದ್ದು ಭಕ್ತರು ನೀರಿಗಿಳಿಯದಂತೆ ಎಚ್ಚರಿಸಿ ಮುಂಜಾಗೃತ ಕ್ರಮವಾಗಿ ನದಿಯ ದಡದಲ್ಲಿ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ಭಕ್ತರಿಗೆ ಸ್ನಾನಕ್ಕಾಗಿ ನದಿಯ ತೀರದಲ್ಲೇ ಶವರ್ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ:ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು : ನಡುಗಡ್ಡೆಯಲ್ಲಿ ಸಿಲುಕಿದ್ದ ರೈತರ ರಕ್ಷಣೆ