ಲಿಂಗಸುಗೂರು: ರಾಯಚೂರು ಜಿಲ್ಲೆ ಲಿಂಗಸುಗೂರು ಪುರಸಭೆ ಶಾಶ್ವತ ಕುಡಿವ ನೀರು ಸಂಗ್ರಹಣಾ ಕೆರೆಗೆ ರಾಂಪೂರ ಏತ ನೀರಾವರಿ ಯೋಜನೆಯಿಂದ ಶಾಸಕ ಡಿ.ಎಸ್. ಹೂಲಗೇರಿ ಅವರು ನೀರು ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು ಲಿಂಗಸುಗೂರು ಪುರಸಭೆ ವಾಪ್ತಿಯ 23 ವಾರ್ಡ್ಗಳಿಗೆ ನೀರು ಪೂರೈಸಲು ನಿರ್ಮಿಸಿಕೊಂಡಿರುವ ಕುಡಿವ ನೀರಿನ ಕೆರೆಗೆ ಈ ಬಾರಿ ನೀರು ಭರ್ತಿ ಮಾಡಿಕೊಳ್ಳಲು ಆಗಿರಲಿಲ್ಲ. ಹಾಗಾಗಿ ಏತ ನೀರಾವರಿ ಯೋಜನೆಯಿಂದ ವಿತರಣಾ ನಾಲೆ ಮೂಲಕ ನೀರು ತಂದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಇನ್ನು ಪುರಸಭೆ ವ್ಯಾಪ್ತಿ ಕಸಬಾ ಲಿಂಗಸುಗೂರು, ಕರಡಕಲ್ಲ ಹಾಗೂ ಲಿಂಗಸುಗೂರು ಜನತೆಗೆ ಈ ಮುಂಚಿನಂತೆಯೆ ನಿಗದಿತ ಅವಧಿಗೆ ನೀರು ಕೊಡಲಾಗುವುದು. ಅನಾವಶ್ಯಕ ಊಹಾ ಪೋಹಗಳಿಗೆ ಕಿವಿಗೊಡದಿರಿ. ಒಂದು ವಾರದಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಾಸಕರು ಭರವಸೆ ನೀಡಿದರು