ರಾಯಚೂರು: ರೋಗಿಗಳಿಗೆ ತುರ್ತು ರಕ್ತದ ಕೊರತೆ ನೀಗಿಸುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಗರದ ಜೈನ ಭವನದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು.
ಮೇ 1ರಿಂದ ದೇಶವ್ಯಾಪಿ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಲಿದೆ. ಯುವ ಸಮುದಾಯ ಈ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಭಾಗಿಯಾದರೆ, 60 ದಿನಗಳವರೆಗೆ ರಕ್ತದಾನ ಮಾಡಲು ಸಾಧ್ಯವಿಲ್ಲ. ಈ ಸಮಯದಲ್ಲಿ ರೋಗಿಗಳಿಗೆ ಅವಶ್ಯಕವಿರುವ ರಕ್ತದ ಕೊರತೆ ನೀಗಿಸುವುದು ಅಗತ್ಯ. ಹೀಗಾಗಿ, ಯುವಕರು ಲಸಿಕೆ ಪಡೆಯುವ ಮುನ್ನ ಸ್ವಯಂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
ಲಯನ್ಸ್ ಕ್ಲಬ್, ಭಾರತೀಯ ಜೈನ ಸಂಘಟನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಿಮ್ಸ್ ಆಸ್ಪತ್ರೆ, ಲೀಯೋ ಕ್ಲಬ್ ಸೇರಿದಂತೆ ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು.
ಇದನ್ನೂ ಓದಿ: ಮೂಗಿನಲ್ಲಿ ನಿಂಬೆಹಣ್ಣಿನ ರಸ ಹಾಕಿದ್ದೇ ಶಿಕ್ಷಕನ ಸಾವಿಗೆ ಕಾರಣವಾಯ್ತಾ?