ETV Bharat / state

ಹದಗೆಟ್ಟಿರುವ ಸೇತುವೆ ಮೇಲೆ ಹೆಜ್ಜೆ ಹಾಕುತ್ತಿರುವ ಗ್ರಾಮಸ್ಥರು!

ನದಿ ಪ್ರವಾಹದ ಹೊಡೆತಕ್ಕೆ ಕೊಚ್ಚಿ ಹೋಗಿರುವ ಸೇತುವೆ ಮೇಲೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ-ಹಂಚಿನಾಳ ಗ್ರಾಮದ ಜನರು ಸಂಚಾರ ಮಾಡುತ್ತಿದ್ದಾರೆ.

ಹದಗೆಟ್ಟಿರುವ ಸೇತುವೆ ಮೇಲೆ ಹೆಜ್ಜೆ ಹಾಕುತ್ತಿರುವ ಗ್ರಾಮಸ್ಥರು
author img

By

Published : Oct 18, 2019, 5:22 AM IST

ರಾಯಚೂರು: ಅದು ನಾಲ್ಕು ಊರುಗಳಿಗೆ ಸಂಪರ್ಕಿಸುವ ಸೇತುವೆ. ಅ ಸೇತುವೆಯಿಂದ ನಿತ್ಯ ಗ್ರಾಮೀಣ ಭಾಗದ ಜನರು ಕೂಲಿ-ಕೆಲಸ, ಪಟ್ಟಣಕ್ಕೆ ತೆರಳುತ್ತಾರೆ. ಆದ್ರೆ ಕೃಷ್ಣ ನದಿ ಪ್ರವಾಹದ ಹೊಡೆತಕ್ಕೆ ಸೇತುವೆ ಕೊಚ್ಚಿ ಹೋಗಿ ಗ್ರಾಮಸ್ಥರ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಜೀವದ ಹಂಗು ತೊರೆದು ಹದಗೆಟ್ಟಿರುವ ಸೇತುವೆ ಮೇಲೆ ನಿತ್ಯ ಗ್ರಾಮಸ್ಥರು ಓಡಾಟವಾಗಿದೆ.

ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ-ಹಂಚಿನಾಳ ಗ್ರಾಮದ ಬಳಿ ಇರುವ ಶೀಲಹಳ್ಳಿ ಬ್ರಿಡ್ಜ್ ಹಾಳಾಗಿದೆ. ನಾಲ್ಕು ಹಳ್ಳಿಯ ಜನರು ಹಾಳಾಗಿರುವ ಬ್ರಿಡ್ಜ್​​ನನ್ನು ಜೀವದ ಹಂಗು ಲೆಕ್ಕಿಸದೇ ನಿತ್ಯ ಜೀವ ಭಯದ ನಡುವೆ ಓಡಾಡುತ್ತಿದ್ದಾರೆ.

ಶೀಲಹಳ್ಳಿ ಸೇತುವೆ, ಹಂಚಿನಾಳ, ಕಡದರಗಡ್ಡಿ ಸೇರಿದಂತೆ ನಾಲ್ಕು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ ನೂರಾರು ಜನರು ಹಾಗೂ ವಾಹನಗಳು ಇಲ್ಲಿ ಸಂಚರಿಸುತ್ತವೆ. ಬ್ರಿಡ್ಜ್ ಡ್ಯಾಮೇಜ್ ಆದ ಬಳಿಕ ಜನರು ಹಾಗೂ ವಾಹನಗಳು ಓಡಾಡುವುದಕ್ಕೆ ಸುರಕ್ಷತೆಯಿಲ್ಲ. ಇದರ ಮಧ್ಯ ಕೂಲಿ ಕೆಲಸಕ್ಕೆ ತೆರಳುವ ಕೂಲಿ-ಕಾರ್ಮಿಕರು, ದ್ವಿಚಕ್ರ ವಾಹನ ಸವಾರರು ನಿತ್ಯ ಸರ್ಕಸ್​ ಮಾಡುತ್ತಲೇ ಸೇತುವೆ ದಾಟುತ್ತಿದ್ದಾರೆ. ಒಂದು ವೇಳೆ ನಡೆಯುವಾಗ ಸ್ವಲ್ಪ ಎಚ್ಚರ ತಪ್ಪಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಯಾಕೆಂದ್ರೆ ಸೇತುವೆ ಮಧ್ಯೆ, ಅಸುಪಾಸು ಕಲ್ಲು ಬಂಡೆಗಳು, ಸೇತುವೆಗೆ ಬಳಸಿರುವ ಕಬ್ಬಿಣದ ರಾಡುಗಳು ಎದ್ದು ನಿಂತಿವೆ. ಈಗಾಗಲೇ ಕೆಲವರು ಬಿದ್ದು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹದಗೆಟ್ಟಿರುವ ಸೇತುವೆ ಮೇಲೆ ಹೆಜ್ಜೆ ಹಾಕುತ್ತಿರುವ ಗ್ರಾಮಸ್ಥರು

ಪ್ರವಾಹದಿಂದ ಜನರಿಗೆ ಉಂಟಾಗಿರುವ ತೊಂದರೆಯನ್ನ ಸರಿಪಡಿಸಲು ಸರ್ಕಾರ ಆಯಾ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಆದ್ರೆ ಇತ್ತ ನಾಲ್ಕು ಗ್ರಾಮದ ಜನರು ಸರ್ಕಸ್ ಮಾಡಿ, ಅಪಾಯದ ಮಧ್ಯ ಸಂಚಾರಿಸುತ್ತಿದ್ದಾರೆ. ಸೇತುವೆ ಸಂಪೂರ್ಣ ದುರಸ್ಥಿ ಮಾಡುವವರೆಗಾದರೂ ತಾತ್ಕಾಲಿಕ ವ್ಯವಸ್ಥೆ ಮಾಡಿಲ್ಲ. ಅಲ್ಲದೇ ಈ ಸೇತುವೆ ಬಗ್ಗೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿ, ದುರಸ್ಥಿ ಜತೆಗೆ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ರು.

ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲೂ ಸಹ ವಿಪಕ್ಷ ನಾಯಕ ಸಿದ್ದರಾಮಯ್ಯ ಧ್ವನಿಯೆಂತುವ ಮೂಲಕ ಸರ್ಕಾರದ ಗಮನಕ್ಕೆ ತಂದಿದ್ರು. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ ಅಂತಾರೆ ಸ್ಥಳೀಯರು.

Intro:¬ಸ್ಲಗ್: ಅಪಾಯ ಹೆಜ್ಜೆ ಹಾಕುತ್ತಿರುವ...ರೈತರು ಹಾಗೂ ಕೂಲಿಕಾರ್ಮಿಕರು!
ಫಾರ್ಮೇಟ್: ಪ್ಯಾಕೇಜ್ (Exclusive)
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 17-1೦-2019
ಸ್ಥಳ: ರಾಯಚೂರು
ಆಂಕರ್: ಅದು ನಾಲ್ಕು ಊರುಗಳಿಗೆ ಸಂಪರ್ಕಿಸುವ ಸೇತುವೆ. ಅ ಸೇತುವೆಯಿಂದ ನಿತ್ಯ ಗ್ರಾಮೀಣ ಭಾಗದ ಜನರು ಕೂಲಿ-ಕೆಲಸ, ಪಟ್ಟಣಕ್ಕೆ ತೆರಳುತ್ತಾರೆ. ಆದ್ರೆ ಕೃಷ್ಣ ನದಿ ಪ್ರವಾಹದ ಹೊಡೆತಕ್ಕೆ ಸೇತುವೆ ಕೊಚ್ಚಿ ಹೋಗಿ ಗ್ರಾಮಸ್ಥರಿಗೆ ಸಂಚಾರಕ್ಕೆ ತೊಂದರೆ ಉಂಟಾಗಿದೆ. ತೊಂದರೆಯನ್ನ ಲೆಕ್ಕಿಸದೇ ಜೀವದ ಹಂಗು ತೊರೆದು ಹದಗೆಟ್ಟಿರುವ ಸೇತುವೆ ಮೇಲೆ ನಿತ್ಯ ಗ್ರಾಮಸ್ಥರು ಓಡಾಡುತ್ತಿದ್ದಾರೆ. ಈ ಕುರಿತು ಎಕ್ಸೆಕ್ಲೂಸಿವ್ ರಿಪೋರ್ಟ್ ಇಲ್ಲಿದೆ ನೋಡಿ.Body:
ವಾಯ್ಸ್ ಓವರ್.1: ಹೀಗೆ ಒಂದು ಕೃಷ್ಣ ನದಿ ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಸೇತುವೆ. ಮತ್ತೊಂದು ಕಡೆ ಸೇತುವೆ ಅಲ್ಪ ತುದಿಯಲ್ಲಿ ಬೈಕ್ ಹಾಗೂ ನಡೆದಾಡುತ್ತಿರುವ ಕೂಲಿ-ಕಾರ್ಮಿಕರು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು, ರಾಯಚೂರು ಜಿಲ್ಲೆಯ ಶೀಲಹಳ್ಳಿ ಗ್ರಾಮದ ಬಳಿ. ಹೌದು, ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ-ಹಂಚಿನಾಳ ಗ್ರಾಮದ ಬಳಿ ಇರುವ ಶೀಲಹಳ್ಳಿ ಬ್ರಿಡ್ಜ್ ಹಾಳಾಗಿದೆ. ನಾಲ್ಕು ಹಳ್ಳಿಯ ಜನರು ಹಾಳಾಗಿರುವ ಬ್ರಿಡ್ಜ್ ನ್ನು ಜೀವದ ಹಂಗು ಲೆಕ್ಕಿಸದೇ ನಿತ್ಯ ಜೀವ ಭಯದ ನಡುವೆ ಓಡಾಡುತ್ತಿದ್ದಾರೆ.

ವಾಯ್ಸ್ ಓವರ್.2: ಶೀಲಹಳ್ಳಿ ಸೇತುವೆ, ಹಂಚಿನಾಳ, ಕಡದರಗಡ್ಡಿ, ಸೇರಿದಂತೆ ನಾಲ್ಕು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ ನೂರಾರು ಜನರು ಹಾಗೂ ವಾಹನಗಳ ಸಂಚಾರಿಸುತ್ತವೆ. ಬ್ರಿಡ್ಜ್ ಡ್ಯಾಮೇಜ್ ಆದ ಬಳಿಕ ಜನರು ಹಾಗೂ ವಾಹನಗಳು ಓಡಾಡುವುದಕ್ಕೆ ಸುರಕ್ಷತೆಯಿಲ್ಲ. ಇದರ ಮಧ್ಯ ಕೂಲಿ ಕೆಲಸಕ್ಕೆ ತೆರಳುವ ಕೂಲಿ-ಕಾರ್ಮಿಕರು, ದ್ವಿಚಕ್ರ ವಾಹನಗ ಸವಾರು ನಿತ್ಯ ಸರ್ಕರ್ ಮೂಲಕ ಸೇತುವೆ ದಾಟುತ್ತಿದ್ದಾರೆ. ಒಂದು ವೇಳೆ ನಡೆಯುವಾಗ ಸ್ವಲ್ಪ ಎಚ್ಚರ ತಪ್ಪಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಯಾಕೆಂದ್ರೆ ಸೇತುವೆ ನಡುವೆ, ಅಸುಪಾಸು ಕಲ್ಲು ಬಂಡೆಗಳು, ಸೇತುವೆಗೆ ಬಳಸಿರುವ ಕಬ್ಬಿಣದ ರಾಡುಗಳು ಎದ್ದು ನಿಂತಿವೆ. ಈಗಾಗಲೇ ಕೆಲವರು ಬಿದ್ದು, ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಂತೆ ಸ್ಥಳೀಯರು.

ವಾಯ್ಸ್ ಓವರ್.3: ಪ್ರವಾಹದಿಂದ ಜನರಿಗೆ ಉಂಟಾಗಿರುವ ತೊಂದರೆಯನ್ನ ಸರಿಪಡಿಸಲು ಸರಕಾರ ಆಯಾ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದು, ಸರಕಾರ ಸಂಪರ್ಕವಾಗಿ ಪ್ರವಾಹ ನಿರ್ವಹಿಸುತ್ತಿದೆ ಅಂತಾ ಸರಕಾರ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಇತ್ತ ನಾಲ್ಕು ಗ್ರಾಮದ ಜನರು ನಿತ್ಯ ಸರ್ಕಸ್ ಮಾಡಿ, ಅಪಾಯದ ಮಧ್ಯ ಸಂಚಾರಿಸುತ್ತಿದ್ದಾರೆ. ಸೇತುವೆ ಸಂಪೂರ್ಣ ದುರಸ್ಥಿ ಮಾಡುವವರೆಗಾದರೂ ತಾತ್ಕಾಲಿಕ ವ್ಯವಸ್ಥೆ ಮಾಡಿಲ್ಲ. ಅಲ್ಲದೇ ಈ ಸೇತುವೆ ಬಗ್ಗೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ದುರಸ್ಥಿ ಜತೆಗೆ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲೂ ಸಹ ವಿಪಕ್ಷ ನಾಯಕ ಸಿದ್ದರಾಮಯ್ಯ ಧ್ವನಿಯೆಂತುವ ಮೂಲಕ ಸರಕಾರ ಗಮನಕ್ಕೆ ತಂದಿದ್ರೆ, ಆದ್ರೆ ಯಾವುದೇ ಪ್ರಯೋಜನವಾಗಿಲ್ಲ ಅಂತಾರೆ ಸ್ಥಳೀಯರು ದೂರಿದ್ರೆ. ಸದ್ಯ ತುರ್ತಾಗಿ ಸೇತುವೆ ತಾತ್ಕಾಲಿಕವಾಗಿ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಂಡಬೇಕು ಜತೆಗೆ ಸೇತುವೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇನ್ನಾದರೂ ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾ ಎನ್ನುವುದು ಕಾದು ನೋಡಬೇಕಾಗಿದೆ.
Conclusion:
ಬೈಟ್.1: ಯಲ್ಲಪ್ಪ, ಶೀಲಹಳ್ಳಿ ಗ್ರಾಮಸ್ಥ(ಬಿಳಿ ಬಣ್ಣದ ಹೊಲಿಕೆಯ ಶರ್ಟ್ ಧರಿಸಿದ ವ್ಯಕ್ತಿ)
ಬೈಟ್.2: ಚಂದ್ರು, ಸ್ಥಳೀಯ(ನೀಲಿ ಬಣ್ಣದ ಟಿಶರ್ಟ್ ಧರಿಸಿದ ಯುವಕ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.