ETV Bharat / state

ವಾಲ್ಮೀಕಿ ಜಯಂತಿ ಪ್ರಯುಕ್ತ ಪಾಳು ಬಿದ್ದ ಕಲ್ಯಾಣಿ ಸ್ವಚ್ಛತೆ..

ವಾಲ್ಮೀಕಿ ಜಯಂತಿ ಪ್ರಯುಕ್ತ ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಸೇರಿ ವಿವಿಧ ಸಂಘ ಸಂಸ್ಥೆಗಳು ಐತಿಹಾಸಿಕ ಪುರಾತನ ಕಲ್ಯಾಣಿಯನ್ನು(ಬಾವಿ)ಸ್ವಚ್ಛಗೊಳಿಸಿದರು.

valmiki-jayanthi-celebration-at-raichur
author img

By

Published : Oct 13, 2019, 6:14 PM IST

ರಾಯಚೂರು: ಇಂದು ವಾಲ್ಮೀಕಿ ಜಯಂತಿ ಪ್ರಯುಕ್ತ ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಸೇರಿ ವಿವಿಧ ಸಂಘ ಸಂಸ್ಥೆಗಳು ಐತಿಹಾಸಿಕ ಪುರಾತನ ಕಲ್ಯಾಣಿಯನ್ನು (ಬಾವಿ) ಸ್ವಚ್ಛಗೊಳಿಸಿದರು.

ವಾಲ್ಮೀಕಿ ಭಾವಚಿತ್ರಕ್ಕೆ ಎಸ್ಪಿ ಸಿ ಬಿ ವೇದಮೂರ್ತಿ ಪುಷ್ಪನಮನ ಸಲ್ಲಿಸಿದರು. ರಾಜಯೋಗಿನಿ ಸ್ಮಿತಾ ಅಕ್ಕನವರು ಬಾವಿ ಸ್ವಚ್ಛತೆಗೆ ಚಾಲನೆ ನೀಡಿದರು. ಸಿ ಬಿ ವೇದಮೂರ್ತಿ ಅವರು ಮಾತನಾಡಿ, ಮಹಾತ್ಮರ ಜಯಂತಿ ಅಂಗವಾಗಿ ಪ್ರತಿಯೊಬ್ಬರು ಸಾಮೂಹಿಕ ಸೇವೆ ಕೈಗೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಕರೆ ಕೊಟ್ಟರು.

ಕಲ್ಯಾಣಿ ಸ್ವಚ್ಛ

ಗ್ರೀನ್ ರಾಯಚೂರು, ಗ್ರಾಮ ಪಂಚಾಯತ್ ಕುರ್ಡಿ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಧಾರವಾಡದ ವೃಕ್ಷ ಭಾರತ ಸೈನಿಕರು, ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿ ಹಾಗೂ ಗ್ರಾಮದ ಸಂಘ ಸಂಸ್ಥೆಗಳು, ಸಾರ್ವಜನಿಕರು ಸೇರಿ 200ಮಂದಿ ಭಾಗವಹಿಸಿದ್ದರು. ಸತತ ಒಂದು ವಾರದಿಂದ ಸ್ವಚ್ಛತೆಯಲ್ಲಿ ತೊಡಗಿದ ಪಾಲಮ್ಮ ಗಂಡ ರಾಮಣ್ಣ ಮತ್ತು ಲಕ್ಷ್ಮಮ್ಮ ಗಂಡ ಹನುಮಪ್ಪ ನಾಯಕ ಅವರ ಎರಡು ಕುಟುಂಬಗಳಿಗೆ ಮನೆ ಬಳಕೆಗೆ ಬೇಕಾದ ಸಾಮಾಗ್ರಿಗಳನ್ನು ವಿತರಿಸಿದರು.

Intro:ರಾಯಚೂರು ಅ.13

ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯತ,ಗ್ರೀನ್ ರಾಯಚೂರು,ಗ್ರಾಮ ಪಂಚಾಯತ್ ಕುರ್ಡಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ರಾಯಚೂರು ಹಾಗೂ ವಿವಿಧ ಸಂಘ,ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಐತಿಹಾಸಿಕ ಪುರಾತನ ಕಲ್ಯಾಣಿಯ (ಬಾವಿ) ಸ್ವಚ್ಚತಾ ಕಾರ್ಯಕ್ರಮ ಸ್ವಚ್ಛತಾ ಕಾರ್ಯಕ್ರಮ ಮಾಡಲಾಯಿತು.
ಇಂದು ಮಹರ್ಶಿ ಶ್ರೀ ವಾಲ್ಮೀಕಿ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಎಸ್ಪಿ ಸಿ.ಬಿ. ವೇದಮೂರ್ತಿ & ರಾಜಯೋಗಿನಿ ಸ್ಮೀತಾ ಅಕ್ಕನವರು ಬಾವಿ ಸ್ವಚ್ಛತೆಗೆ ಚಾಲನೆ ನೀಡಿದರು.

ಬ್ರಹ್ಮ ಕುಮರಿ ಈಶ್ವರಿಯ ವಿಶ್ವವಿದ್ಯಾಲಯದ ರಾಯಚೂರು ಶಾಖೆಯಿಂದ ಸುಮಾರು 75 ಜನ ಸಹೋದರ ,ಸಹೋದರಿಯರು ಶ್ರಮದಾನ ಮಾಡಿದರು.
ಈ ಸಂಧರ್ಭದಲ್ಲಿ ಡಾ ಸಿ ಬಿ ವೇದಮೂರ್ತಿ ಅವರು ಮಾತನಾಡಿ ಪ್ರತಿಯೊಬ್ಬರು ಇಂತಹ ಮಹಾತ್ಮರ ಜಯಂತಿ ಅಂಗವಾಗಿ ಈ ತರಹದ ಬಾವಿ ಸ್ವಚ್ಛತೆ, ಸಸಿ ನೆಡುವ ಸಾಮೂಹಿಕ ಸೇವೆ ಮಾಡುವ ಮೂಲಕ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ ಗೌರವ ಸಮರ್ಪಣೆ ಮಾಡಬೇಕೆಂದು ಕರೆ ಕೊಟ್ಟರು.ಪೋಲಿಸ್ ಇಲಾಖೆಯಿಂದ ಆರ್ ಎಸ್ ಐ ಅಮೋಘ ಪಾಟೀಲ್, ಜಾಮಾದಾರ ಗೋವಿಂದ ರಾಜು ಇನ್ನಿತರ ಪೋಲಿಸ್ ಅಧಿಕಾರಿಗಳು, ಸಿಬ್ಬಂದಿ ,ಧಾರವಾಡದ ವೃಕ್ಷ ಭಾರತ ಸೈನಿಕರಾದ ಬಿ ಎಸ್ ಕೊಣ್ಣುರು ,ರಾಜಶೇಖರ ಇವರು ಶ್ರಮದಾನದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಯಶೋಬ,ಲಾಲಪ್ಪ ನಾಯಕ,ಶಿವಶಂಕರ್, ಗುರುರಾಜ, ಬಸವರಾಜ ಬೊವಿ,ನಾಗಲಿಂಗ,ಈರಣ್ಣ, ಡಾ ಅಮರಜಿತ್ ಪಾಟೀಲ್,ಎಸ್ ಬಿ ಪಾಟೀಲ್,ವಿರಪನಗೌಡ ಜಿ,ನಾಗರಾಜ ದೇವನಪಲ್ಲಿ,ರಾಜೇಂದ್ರ ಕುಮಾರ್ ಶೇವಾಳೆ, ಹೊನ್ನಪ್ಪ ,ಗ್ರೀನ್ ರಾಯಚೂರಿನ ಸರ್ವ ಸದಸ್ಯರು,ನಿಜಲಿಂಗಪ್ಪ ಕಾಲನಿ ಇಭಿವೃದ್ದಿ ಸಮಿತಿ ರಾಯಚೂರು, ಹಾಗೂ ಹಲವು ಸಂಘ ಸಂಸ್ಥೆಗಳು, ಗ್ರಾಮ ಪಂಚಾಯತಿ ಸದಸ್ಯರು, ಸಿಬ್ಬಂದಿ ಹಾಗೂ ಗ್ರಾಮದ ಸಂಘ ಸಂಸ್ಥೆಗಳು, ಸಾರ್ವಜನಿಕರು ಸುಮಾರು 200 ಜನ ಭಾಗಾವಹಿಸುವ ಮೂಲಕ ಬಾವಿಯನ್ನು ಸ್ವಚ್ಚಗೋಳಿಸಲಾಯಿತು.
Body:
ಸತತ ಒಂದು ವಾರದಿಂದ ಸ್ವಚ್ಛತೆಯಲ್ಲಿ ತೊಡಗಿದ ಬಡ ಕುಟುಂಬಗಳಾದ ಪಾಲಮ್ಮ ಗಂಡ ರಾಮಣ್ಣ ಮತ್ತು ಲಕ್ಷ್ಮಮ್ಮ ಗಂಡ ಹನುಮಪ್ಪ ನಾಯಕ ಎರಡು ಕುಟುಂಬಗಳಿಗೆ ಮನೆ ಬಳಕೆಗೆ ಬೇಕಾದ ಸಾಮಾಗ್ರಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ವಿತರಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.