ರಾಯಚೂರು: ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಗೆ ಲಸಿಕೆ ಆಗಮಿಸಿದ್ದು ವಾಹನಕ್ಕೆ ಪೂಜೆ, ಆರತಿ ಬೆಳಗುವ ಮೂಲಕ ಜಿಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿ ಸ್ವಾಗತಿಸಿದರು.
ಜಿಲ್ಲೆಗೆ ಒಟ್ಟು 9 ಸಾವಿರ ಡೋಸ್ ಲಸಿಕೆ ಬಂದಿದೆ. ಜ.16 ರಂದು ಜಿಲ್ಲೆಯ 6 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಮೊದಲ ದಿನ ಪ್ರತಿ ಕೇಂದ್ರದಲ್ಲಿ 100 ಜನರಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಮೈಸೂರಿಗೆ ಬಂದ ವ್ಯಾಕ್ಸಿನ್: ಅಯ್ಯಪ್ಪ ಭಕ್ತರಿಂದ ವಿಭಿನ್ನ ಸ್ವಾಗತ
ಜ.18 ರಿಂದ ಉಳಿದವರಿಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 15,260 ಮುಂಚೂಣಿ ಕೊರೊನಾ ವಾರಿಯರ್ಸ್‌ಗೆ ಆದ್ಯತೆ ನೀಡಲಾಗುವುದು. ಬಂದಿರುವ ಲಸಿಕೆಯನ್ನ ಸಂಗ್ರಹಿಸಿ ಹಾಗೂ ವಿತರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ತಿಳಿಸಿದ್ದಾರೆ.