ರಾಯಚೂರು: ಸೆಲ್ಫಿ ಗೀಳಿನಿಂದ ಕಾಲುವೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಕಲಮಲಾ ಗ್ರಾಮದ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನಡೆದಿದೆ.
![Two students dies after drowning in canal](https://etvbharatimages.akamaized.net/etvbharat/prod-images/16410048_thumbsss.jpg)
ಪಿಯುಸಿ ವಿದ್ಯಾರ್ಥಿಗಳಾದ ಸುಜಿತ್ ಹಾಗೂ ವೈಭವ್ ಮೃತರು. ಕಲಮಲಾ ಗ್ರಾಮದ ಹೊರವಲಯದ ದೇವದುರ್ಗ ರಸ್ತೆ ಮಾರ್ಗದಲ್ಲಿ ಬರುವ ತುಂಗಭದ್ರಾ ಎರಡದಂಡೆ ನಾಲೆಗೆ ವೀಕೆಂಡ್ ಎಂಜಾಯ್‌ಮೆಂಟ್‌ಗಾಗಿ ನಾಲ್ವರು ವಿದ್ಯಾರ್ಥಿಗಳ ತಂಡ ಸ್ನಾನಕ್ಕೆ ತೆರಳಿದ್ದಾರೆ. ಈ ವೇಳೆ ನಾಲೆಯಲ್ಲಿ ಸೆಲ್ಫಿ ತೆಗೆಯುವಾಗ ಸುಜಿತ್ ಹಾಗೂ ವೈಭವ್ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಇನ್ನುಳಿದ ನಾಗೇಂದ್ರ ಹಾಗೂ ತರುಣ್ ಈಜಿ ದಡ ಸೇರಿದ್ದಾರೆ. ಇವರು ರಾಯಚೂರು ನಗರದ ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದರು ಎನ್ನಲಾಗುತ್ತಿದೆ.
![Two students dies after drowning in canal](https://etvbharatimages.akamaized.net/etvbharat/prod-images/16410048_thumb.jpg)
ಘಟನಾ ನಡೆದ ಸ್ಥಳದಿಂದ 200 ಮೀಟರ್ ದೂರದಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ರಾಯಚೂರು ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲೆಯಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 80 ವರ್ಷ ಹಳೆಯ ಎರಡಂತಸ್ತಿನ ಕಟ್ಟಡ ಕುಸಿತ: ಮಗು ಸೇರಿ ಮೂವರ ಸಾವು