ರಾಯಚೂರು: ಟಿಪ್ಪರ್-ಬೈಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟಿರುವ ಘಟನೆ ರಾಯಚೂರಿನ ತುಂಟಾಪುರ ಗ್ರಾಮದ ಬಳಿ ನಡೆದಿದೆ.
ಕರ್ನೂಲ್ ಜಿಲ್ಲೆಯ ಕೊಸಿಗಿ ಗ್ರಾಮದ ನಿವಾಸಿಗಳಾದ ಎಂ.ಖಾದರ್ ಬಾಷಾ(48), ಮಹೆಬೂಬ್ ಬಾಷಾ(38) ಮೃತಪಟ್ಟ ಬೈಕ್ ಸವಾರರೆಂದು ಗುರುತಿಸಲಾಗಿದೆ. ಖಾದರ್ ಬಾಷಾ ಸ್ಥಳದಲ್ಲೇ ಮೃತಪಟ್ಟರೆ, ಮಹೆಬೂಬ್ ಬಾಷಾ ಚಿಕಿತ್ಸೆ ಫಲಕಾರಿಯಾಗಿದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೊಸಿಗಿ ಗ್ರಾಮದಿಂದ ರಾಯಚೂರಿಗೆ ಬರುವ ವೇಳೆ ಲಾರಿ ಚಾಲಕ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಇನ್ನು ಘಟನಾ ಸ್ಥಳಕ್ಕೆ ಯರಗೇರಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.