ರಾಯಚೂರು: ಬ್ರ್ಯಾಂಡ್ ಹೆಸರಲ್ಲಿ ನಕಲಿ ಮದ್ಯ ಮಾರಾಟ ಮಾಡುತ್ತಿದ್ದವರ ಜಾಲವೊಂದು ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಅಬಕಾರಿ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ನಕಲಿ ಮದ್ಯಕ್ಕೆ ಬಳಸಲಾಗುತ್ತಿದ್ದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. ರಾಮನಗೌಡ ಬಂಧಿತ ಆರೋಪಿ. ಬ್ರ್ಯಾಂಡ್ ಕಂಪನಿಯ ಬಾಟಲ್ನಲ್ಲಿ ನಕಲಿ ಮದ್ಯ ತುಂಬಿಸಿ, ಆ ಕಂಪನಿಯ ಕ್ಯಾಪ್ ಮತ್ತು ಲೇಬಲ್ಗಳನ್ನು ಅಂಟಿಸಿ ಡಾಬಾಗಳಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
10 ಬಾಕ್ಸ್ ಲಿಕ್ಕರ್ ಜಪ್ತಿ : ಬಂಧಿತರಿಂದ 524ಕ್ಕೂ ಹೆಚ್ಚು ಬ್ರ್ಯಾಂಡೆಡ್ ಕಂಪನಿಯ ಬಾಟಲ್ಗಳು, 80ಕ್ಕೂ ಹೆಚ್ಚು ಲೀಟರ್ ನಕಲಿ ಮದ್ಯ, ದಂಧೆಗೆ ಬಳಸಿದ ಒಂದು ಹೋಂಡಾ ಆಕ್ಟಿವ್ ಬೈಕ್, ಆಟೋ, 298 ಬ್ರ್ಯಾಂಡೆಡ್ ಮದ್ಯದ ಖಾಲಿ ಬಾಟಲ್ಗಳು, 10 ಬಾಕ್ಸ್ ಲಿಕ್ಕರ್ ಜಪ್ತಿ ಮಾಡಲಾಗಿದೆ. ಈ ಬಗ್ಗೆ ಅಬಕಾರಿ ಅಧಿಕಾರಿ ಲಕ್ಷ್ಮೀ ನಾಯಕ ಅವರು ಮಾತನಮಾಡಿ, ವಿಧಾನಸಭೆ ಚುನಾವಣೆ ಅಂಗವಾಗಿ ರಾಜ್ಯದಲ್ಲಿ ಈಗಾಗಲೇ ನೀತಿ ಸಂಹಿತೆ ಜಾರಿ ಮಾಡಲಾಗಿದೆ. ಈ ಹಿನ್ನೆಲೆ ನಿನ್ನೆ ದಿನ ಅಬಕಾರಿ ನಿರೀಕ್ಷಕರಾದ ಹನುಮಂತ ಗುತ್ತೇದಾರ ಹಾಗು ಇಲಾಖೆ ಸಿಬ್ಬಂದಿಗಳು ನಗರದಲ್ಲಿ ಗಸ್ತಲ್ಲಿರಬೇಕಾದರೆ ರೈಲು ನಿಲ್ದಾಣದ ಹಿಂಭಾಗದಲ್ಲಿ, ರನ್ನಿಂಗ್ ರೂಮ್ ಬಳಿ ಓರ್ವ ವ್ಯಕ್ತಿ ಸ್ಕೂಟಿಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುವುದು ಕಂಡುಬಂದಿದೆ. ಈ ಹಿನ್ನೆಲೆ ಆತನನ್ನು ತಡೆದು ವಾಹನ ತಪಾಸಣೆ ನಡೆಸಲಾಗಿದೆ. ಆಗ ವಾಹನದಲ್ಲಿ 5 ಲೀಟರ್ ಮದ್ಯ ಮತ್ತು ನಕಲಿ ಕ್ಯಾಪ್ಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಬಂಧಿತ ಆರೋಪಿಯ ವಿಚಾರಣೆ ನಡೆಸಿದಾಗ ನಗರದ ಸಮೀಪದ ಗ್ರಾಮವಾದ ಕಡಗಂ ದೊಡ್ಡಿಯಿಂದ ತಂದಿರುವುದಾಗಿ ಹೇಳಿದ್ದಾನೆ. ಈ ಹಿನ್ನೆಲೆ, ಕಡಗಂ ದೊಡ್ಡಿ ಮತ್ತು ಎಲ್ಕೆ ದೊಡ್ಡಿಯಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ನಾಲ್ಕು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೇ ನಕಲಿ ಬಾಟಲ್ಗಳು, ಕ್ಯಾಪ್ಗಳು ಹಾಗು 10 ಕಾರ್ಟನ್ ಲಿಕ್ಕರ್ಗಳು ಪತ್ತೆಯಾಗಿದ್ದು, ಎಲ್ಲವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಲಾರಿಯಲ್ಲಿ ಅಕ್ರಮ ಮದ್ಯ ಸಾಗಾಟ, ಚಾಲಕ ಸೆರೆ; ₹47 ಲಕ್ಷ ಮೌಲ್ಯದ ಮಾಲು ವಶ
ವಿಜಯಪುರ: 47 ಲಕ್ಷ ಮೌಲ್ಯದ ಮದ್ಯ ವಶ.. ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಲಾರಿಯನ್ನು ತಡೆದ ಅಬಕಾರಿ ಪೊಲೀಸರು ಚಾಲಕನನ್ನು ಬಂಧಿಸಿರುವ ಘಟನೆ ಇತ್ತೀಚೆಗೆ ಚಡಚಣ ತಾಲೂಕಿನ ಧೂಳಖೇಡ ಚೆಕ್ ಪೋಸ್ಟ್‌ನಲ್ಲಿ ನಡೆದಿತ್ತು. ತುಮಕೂರು ನಿವಾಸಿ ಫೈರೋಜ್ ಸೈಯದ್ ಅಬ್ದುಲ್ ರಹಮಾನನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸಿದ್ದಾಗ 9,108 ಲೀಟರ್ ಬಿಯರ್ ಹಾಗೂ ಲಾರಿ ಸೇರಿ ಒಟ್ಟು 57,38,851 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಇಂಡಿ ವಲಯ ಅಬಕಾರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಅಬಕಾರಿ ಇಲಾಖೆಯ ಭರ್ಜರಿ ಕಾರ್ಯಾಚರಣೆ ಬರೋಬ್ಬರಿ 54 ಲಕ್ಷ ಮೌಲ್ಯದ ಮದ್ಯ ವಶ